SMAT 2024: ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಬ್ಯಾಟಿಂಗ್‌ನಲ್ಲೂ ಆಕರ್ಷಕ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಪ್ರತಿಷ್ಠಿತ ದೇಶೀಯ ಟಿ20 ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಭಾಗವಾಗಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಚಂಡೀಗಢ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಬಂಗಾಳ ತಂಡದ ಶಮಿ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಬ್ಬರಿಸಿದರು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಬಂಗಾಳ, ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. 114 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಬಂಗಾಳಕ್ಕೆ ಕೊನೆಯಲ್ಲಿ ಶಮಿ ಆಸರೆಯಾದರು. ಶಮಿ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಗಳ ಸಹಾಯದಿಂದ 17 ಎಸೆತಗಳಲ್ಲಿ 32 ರನ್ಗಳನ್ನು ಚಚ್ಚಿ ತಂಡದ ಸ್ಕೋರ್ ಹೆಚ್ಚಿಸಿದರು.
Bengal have set a target of 160 in front of Chandigarh 🎯
— BCCI Domestic (@BCCIdomestic) December 9, 2024
Mohd. Shami provides a crucial late surge with 32*(17)
Karan Lal top-scored with 33 (25)
Jagjit Singh Sandhu was the pick of the Chandigarh bowlers with 4/21#SMAT | @IDFCFIRSTBank
Scorecard ▶️ https://t.co/u42rkbUfTJ pic.twitter.com/gQ32b5V9LN
ಇದಕ್ಕೂ ಮುನ್ನ ಕರಣ್ ಲಾಲ್ (33), ಚಟರ್ಜಿ (28), ಪ್ರದೀಪ್ತ ಪ್ರಮಾಣಿಕ್ (30) ರನ್ ಕೊಡುಗೆ ನೀಡಿದರು. ಬೌಲಿಂಗ್ನಲ್ಲಿ ಶಮಿ ಮಿಂಚಿದರು. 4 ಓವರ್ ಬೌಲ್ ಮಾಡಿದ ಅವರು 25 ರನ್ ನೀಡಿ ಒಂದು ವಿಕೆಟ್ ಪಡೆದರು. ಅಂತಿಮವಾಗಿ 160 ರನ್ ಗುರಿಯೊಂದಿಗೆ ಕಣಕ್ಕಿಳಿದಿದ್ದ ಚಂಡೀಗಢ 9 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿ 4 ರನ್ಗಳಿಂದ ಸೋಲನುಭವಿಸಿತು.
34 ವರ್ಷದ ಶಮಿ, ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 8 ಪಂದ್ಯಗಳನ್ನು ಆಡಿದ್ದಾರೆ. ಅವರು ಎಲ್ಲಾ 8 ಪಂದ್ಯಗಳಲ್ಲಿ ಬೌಲ್ ಮಾಡಿ 8 ವಿಕೆಟ್ ಪಡೆದಿದ್ದಾರೆ. ರಾಜಸ್ತಾನ ಮತ್ತು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ತಲಾ 3 ವಿಕೆಟ್ ಉರುಳಿಸಿದ್ದಾರೆ.
ಇದನ್ನೂ ಓದಿ: IPLನಲ್ಲಿ ಬಿಕರಿಯಾಗದ ಆಟಗಾರರ ಮೇಲೆ ಪಾಕ್ ಕಣ್ಣು: ಸ್ಟಾರ್ ಆಟಗಾರರಿಗೆ ಬಂಪರ್ ಆಫರ್!