ರಾವಲ್ಪಿಂಡಿ(ಪಾಕಿಸ್ತಾನ): ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 448 ರನ್ ಗಳಿಸಿದ ಪಾಕ್, ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇದಕ್ಕುತ್ತರವಾಗಿ ಬಾಂಗ್ಲಾದೇಶ 68.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು. ಆದರೆ, ರಿಜ್ವಾನ್ ಅಭಿಮಾನಿಗಳು ಡಿಕ್ಲೇರ್ ಘೋಷಣೆಯಿಂದ ಅಸಮಾಧಾನಗೊಂಡಿದ್ದು ನಾಯಕ ಶಾನ್ ಮಸೂದ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Bangladesh openers see off a testing period of play after Pakistan called for declaration late on Day 2 🙌#WTC25 | 📝 #PAKvBAN: https://t.co/EUbigvmymm pic.twitter.com/gUD0nZ4O7B
— ICC (@ICC) August 22, 2024
ಪಾಕ್ ಪರ ಅದ್ಭುತ ಇನ್ನಿಂಗ್ಸ್ ಆಡಿದ ರಿಜ್ವಾನ್ ಅಜೇಯ 171 ರನ್‌ಗಳನ್ನು ಕಲೆಹಾಕಿದ್ದರು. ದ್ವಿಶತಕ ಪೂರೈಸಲು 29 ರನ್ ಮಾತ್ರ ಬೇಕಿದ್ದವು. ಆದರೆ ಇದಕ್ಕೂ ಮುನ್ನವೇ ಶಾನ್ ಮಸೂದ್ ಡಿಕ್ಲೇರ್ ಘೋಷಿಸಿರುವುದು ರಿಜ್ವಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ರಿಜ್ವಾನ್ಗೆ ದ್ವಿಶತಕದ ಅವಕಾಶ ನೀಡದೇ ನಾಯಕ ಉದ್ದೇಶಪೂರ್ವಕವಾಗಿ ತಂಡದ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಿದ್ದಾರೆ.
ಇದು ರಿಜ್ವಾನ್ ಟೆಸ್ಟ್ ವೃತ್ತಿಜೀವನದ ಅತ್ಯಧಿಕ ಸ್ಕೋರ್ ಆಗಿದ್ದ ಕಾರಣ ದಿನದಾಟದ ಅಂತ್ಯದವರೆಗೆ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಬೇಕಿತ್ತು. ಅವರು ಖಂಡಿತವಾಗಿಯೂ ದ್ವಿಶತಕ ಪೂರ್ಣಗೊಳಿಸುತ್ತಿದ್ದರು ಎಂಬುದು ಅಭಿಮಾನಿಗಳ ಅಭಿಪ್ರಾಯ.
Love em ♥️ pic.twitter.com/NU9bB7yzsF
— Zahra🇵🇰 (@itsZahra2_0) August 22, 2024
ಈ ಪಂದ್ಯದಲ್ಲಿ ರಿಜ್ವಾನ್ 239 ಎಸೆತಗಳಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್ ಸಮೇತ ಅಜೇಯ ಇನಿಂಗ್ಸ್ ಆಡಿದರು.
ಡಿಕ್ಲೇರ್ ಬಳಿಕ ಪೆವಿಲಿಯನ್‌ಗೆ ಮರಳುವಾಗ ರಿಜ್ವಾನ್ ತನ್ನ ಬ್ಯಾಟ್ ಅನ್ನು ಬಾಬರ್ ಅಜಾಂ ಮೇಲೆಸೆದರು. ಬ್ಯಾಟ್ ಕ್ಯಾಚ್ ಮಾಡಿದ ಬಾಬರ್ ತಕ್ಷಣ ನಗುತ್ತಾ ತಮಾಷೆ ಮಾಡಿದರು. ಇಬ್ಬರ ನಡುವಿನ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೊದಲ ದಿನದಾಟದಂದು ಕಳಪೆ ಆರಂಭ ಪಡೆದ ಪಾಕಿಸ್ತಾನ 16 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ರಿಜ್ವಾನ್ ಮತ್ತು ಸೌದ್ ಶಕೀಲ್ ತಂಡಕ್ಕೆ ಆಸರೆಯಾದರು. ಇವರಿಬ್ಬರೂ 240 ರನ್‌ಗಳ ಜೊತೆಯಾಟವಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
That is all from the first innings. Pakistan declare at 4️⃣4️⃣8️⃣-6️⃣ 🏏
— Pakistan Cricket (@TheRealPCB) August 22, 2024
Rizwan remains unbeaten at 1️⃣7️⃣1️⃣ 👏#PAKvBAN | #TestOnHai pic.twitter.com/cjVlwfMxbF
ಶಕೀಲ್ ನಿರ್ಗಮಿಸಿದ ವೇಳೆ ತಂಡದ ಸ್ಕೋರ್ 354 ರನ್ ಆಗಿತ್ತು. ಈ ವೇಳೆ ಆಘಾ ಸಲ್ಮಾನ್ (19) ಜೊತೆಗೂಡಿಯೂ ರಿಜ್ವಾನ್ 44 ರನ್ ಸೇರಿಸಿದರು. ಸಲ್ಮಾನ್ ಔಟಾದಾಗ ಡ್ರೆಸ್ಸಿಂಗ್ ರೂಮ್‌ನಿಂದ ವೇಗವಾಗಿ ಆಡಲು ಸೂಚನೆ ನೀಡಲಾಗಿತ್ತು. ಶಾಹೀನ್ ಅಫ್ರಿದಿ ಕ್ರೀಸ್‌ಗೆ ಬಂದ ತಕ್ಷಣ ಸಮಯ ವ್ಯರ್ಥ ಮಾಡದೆ 24 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ ಒಟ್ಟು 29 ರನ್ ಗಳಿಸಿದರು. ಆದರೆ ರಿಜ್ವಾನ್ಗೆ ಹೆಚ್ಚಿನ ಸ್ಟ್ರೈಕ್ ಸಿಗದ ಕಾರಣ 171 ರನ್ ಗಳಿಸಿ ಅಜೇಯರಾಗುಳಿದರು.
ಇದನ್ನೂ ಓದಿ: ವಿಶ್ವದ 10 ಅತ್ಯಂತ ಜನಪ್ರಿಯ ಕ್ರೀಡೆಗಳು ಯಾವುವು ಹೇಳಿ ನೋಡೋಣ! - Most Popular Sports