ETV Bharat / sports

ವಾಂಖೆಡೆಯಲ್ಲಿ ಚೆನ್ನೈ ಅಬ್ಬರ, ಕೊನೆಯ ಓವರ್​ನಲ್ಲಿ ಧೋನಿ ಬೆಂಕಿ ಬ್ಯಾಟಿಂಗ್​; ಮುಂಬೈಗೆ 207 ರನ್​ಗಳ ಗುರಿ - MI VS CSK

ಐಪಿಎಲ್​ನ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಮುಖಾಮುಖಿಯಾಗಿವೆ.

ಐಪಿಎಲ್​ 2024: ಚೆನ್ನೈ ವಿರುದ್ದ ಟಾಸ್​ ಗೆದ್ದ ಮುಂಬೈ ಬೌಲಿಂಗ್​ ಆಯ್ಕೆ

author img

By ETV Bharat Karnataka Team

Published : Apr 14, 2024, 7:32 PM IST

Updated : Apr 14, 2024, 10:12 PM IST

ಮುಂಬೈ: ಐಪಿಎಲ್​ನ 29ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್​ ಮುಕ್ತಾಯಗೊಂಡಿದೆ.

ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಚೆನ್ನೈ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 206 ರನ್​ಗಳನ್ನು ಚಚ್ಚಿದೆ. ಆರಂಭದಲ್ಲೇ ವಿಕೆಟ್ ಕಳೆದುಕೊಂಡರು ಬ್ಯಾಟರ್​ಗಳು ಎದೆಗುಂದದೆ ಅದ್ಭುತ​ ಪ್ರದರ್ಶನ ತೋರಿದ್ದಾರೆ. ​ತಂಡದ ಸ್ಕೋರ್​ 8 ರನ್‌ಗಳಾಗಿದ್ದ ವೇಳೆ ಅಜಿಂಕ್ಯ ರಹಾನೆ (5) ಕ್ಯಾಚಿಟ್ಟು ಪೆವಿಲಿಯನ್​ ಸೇರಿದರು. ಮತ್ತೊಂದೆಡೆ ಉತ್ತಮ ಪ್ರದರ್ಶನ ತೋರುತ್ತಿದ್ದ ರಚಿನ್​ ರವೀಂದ್ರ (21) ಶ್ರೇಯಸ್​ ಗೋಪಾಲ್​ ಎಸೆತಕ್ಕೆ ಬಲಿಯಾದರು. ಈ ವೇಳೆ ನಾಯಕ ರುತುರಾಜ್ ಗಾಯಕ್ವಾಡ್ (69) ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡು 40 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಂಡದ ಸ್ಕೋರ್​ಗೆ ಅಮೋಘ ಕೊಡುಗೆ ನೀಡಿ ಪೆವಿಲಿಯನ್​ ಸೇರಿದರು.

ಮತ್ತೊಂದೆಡೆ ಶಿವಂ ದುಬೆ ಕೂಡ ಹೊಡಿ ಬಡಿ ಆಟವಾಡಿ 38 ಎಸೆತಗಳಲ್ಲಿ ಅಜೇಯವಾಗಿ 66 ರನ್​ಗಳನ್ನು ಸಿಡಿಸಿದರು. ಗಾಯಕ್ವಾಡ್​ ಬಳಿಕ ಕ್ರೀಸ್​ಗೆ ಬಂದಿದ್ದ ಮಿಚೆಲ್​ (17) ವಿಕೆಟ್​ ಬಿದ್ದ ತಕ್ಷಣ ಕ್ರೀಸ್​ಗೆ ಬಂದ ಧೋನಿ ಬೆಂಕಿ ಪ್ರದರ್ಶನ ತೋರಿದರು. ಕೊನೆಯ ಓವರ್​ನ ನಾಲ್ಕು ಎಸೆತಗಳನ್ನು ಎದುರಿಸಿದ ಅವರು ಹ್ಯಾಟ್ರಿಕ್​ 3 ಸಿಕ್ಸರ್​ ಸಮೇತ ಅಜೇಯ 20 ರನ್​ಗಳಿಸಿ ತಂಡದ ಸ್ಕೋರ್​ 206ರ ಗಡಿಗೆ ಕೊಂಡೊಯ್ಯಲು ನೆರವಾದರು. ಮುಂಬೈ ಪರ ಹಾರ್ದಿಕ್​ ಪಾಂಡ್ಯ 2 ವಿಕೆಟ್​ ಪಡೆದರು.

ಪ್ರಸಕ್ತ ಋತುವಿನಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ಎಡವಿದ್ದ ಮುಂಬೈ ಮೊದಲ 3 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಬಳಿಕ ಎರಡು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಿದೆ. ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ ಐದು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿದ್ದು ಎರಡು ಪಂದ್ಯಗಳಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಚೆನ್ನೈ 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, ಮುಂಬೈ 4 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.

ತಂಡಗಳು, ಮುಂಬೈ: ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿ.ಕೀ.), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೋ ಶೆಫರ್ಡ್, ಶ್ರೇಯಸ್ ಗೋಪಾಲ್, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ, ಆಕಾಶ್ ಮಧ್ವಲ್

ಇಂಪ್ಯಾಕ್ಟ್​ ಪ್ಲೇಯರ್ಸ್​: ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ನಮನ್ ಧೀರ್, ನೆಹಾಲ್ ವಧೇರಾ, ಹಾರ್ವಿಕ್ ದೇಸಾಯಿ

ಚೆನ್ನೈ: ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ(ವಿ.ಕೀ.), ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್

ಇಂಪ್ಯಾಕ್ಟ್​ ಪ್ಲೇಯರ್ಸ್​: ಮಥೀಶ ಪತಿರಾನ, ನಿಶಾಂತ್ ಸಿಂಧು, ಮಿಚೆಲ್ ಸ್ಯಾಂಟ್ನರ್, ಮೊಯಿನ್ ಅಲಿ, ಶೇಕ್ ರಶೀದ್

ಇದನ್ನೂ ಓದಿ: ಸವಾಲಿನ ಪಿಚ್​ನಲ್ಲಿ ಕೆಚ್ಚೆದೆಯ ಬ್ಯಾಟ್​ ಮಾಡಿ ಪಂಜಾಬ್​​ ಕಿಂಗ್ಸ್​​ ಮಣಿಸಿದ ರಾಜಸ್ಥಾನ ರಾಯಲ್ಸ್​ - RR win on PBKS

Last Updated : Apr 14, 2024, 10:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.