ETV Bharat / sports

ಟಿಕೆಟ್​ ದರ 15 ರೂ. ಮಾಡಿದರೂ ಪಾಕ್​ನಲ್ಲಿ ಪಂದ್ಯ ವೀಕ್ಷಣೆಗೆ ಬಾರದ ಜನ: ಉಚಿತ ಪ್ರವೇಶ ಘೋಷಿಸಿದ ಪಿಸಿಬಿ! - PCB Announce Free Ticket - PCB ANNOUNCE FREE TICKET

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಟೆಸ್ಟ್​ ಸರಣಿ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ ಉಂಟಾಗಿದ್ದು.

ಪಾಕಿಸ್ತಾನ ಕ್ರಿಕೆಟ್​ ಮಂಡಳಿ
ಪಾಕಿಸ್ತಾನ ಕ್ರಿಕೆಟ್​ ಮಂಡಳಿ (AP Photos)
author img

By ETV Bharat Sports Team

Published : Aug 24, 2024, 4:15 PM IST

ನವದೆಹಲಿ: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್ ಸರಣಿ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ ಎದುರಾಗಿದೆ. ಉಭಯ ತಂಡಗಳ ನುಡೆವೆ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಿ ಇಂದು ನಾಲ್ಕನೇ ದಿನದಾಟಕ್ಕೆ ಕಾಲಿಟ್ಟಿದೆ. ಆದರೂ ಅಭಿಮಾನಿಗಳು ಮ್ಯಾಚ್​ ನೋಡಲು ಮೈದಾನಕ್ಕೆ ಬಾರದೆ ಇರುವುದರಿಂದ ಪಾಕ್​ ಕ್ರಿಕೆಟ್​ ಮಂಡಳಿಗೆ ತಲೆನೋವಾಗಿದೆ.

ಹೇಗಾದರೂ ಮಾಡಿ ಜನರನ್ನು ಮೈದಾನಕ್ಕೆ ಕರೆತರಲೆಂದು ನಾನಾ ಕಸರತ್ತನ್ನು ನಡೆಸಿದೆ. ಇದಕ್ಕಾಗಿ ಟಿಕೆಟ್​ ದರವನ್ನು ಕಡಿಮೆ ಮಾಡಿದರೂ ಖರೀದಿಸಲು ಯಾರೂ ಮುಂದೆ ಬಾರದೇ ಇರುವುದರಿಂದ ರೋಸಿಹೋದ ಪಿಸಿಬಿ ದೊಡ್ಡ ಹೆಜ್ಜೆ ಇಟ್ಟಿದೆ. ಪಾಕ್​ ಮತ್ತು ಬಾಂಗ್ಲಾ ಟೆಸ್ಟ್​ ಪಂದ್ಯವನ್ನು ವೀಕ್ಷಿಸಲು ಎಲ್ಲಾ ಪ್ರೇಕ್ಷಕರಿಗೆ ಉಚಿತ ಪ್ರವೇಶವನ್ನು ಘೋಷಿಸಿದೆ. ಸತತ ವೀಕ್ಷಕರ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಪಿಸಿಬಿ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಈ ನಿರ್ಧಾರಕ್ಕೆ ಬಂದಿದೆ. ಆದರೆ, ಮಂಡಳಿ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ವಾರಾಂತ್ಯವಾದ ಕಾರಣ ಪ್ರೇಕ್ಷಕರಿಗೆ ಉಚಿತ ಟಿಕೆಟ್ ಘೋಷಿಸಿದ್ದೇವೆ ಎಂದು ತಿಳಿಸಿದೆ.

ವಾರಾಂತ್ಯದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಉಚಿತ ಟಿಕೆಟ್‌ಗಳನ್ನು ಘೋಷಿಸಿದ್ದು, ಅವರು ಕ್ರಿಕೆಟ್ ಮತ್ತು ತಮ್ಮ ನೆಚ್ಚಿನ ಆಟಗಾರರನ್ನು ಬೆಂಬಲಿಸಲು ಮೈದಾನಕ್ಕೆ ಉಚಿತವಾಗಿ ಬರಬಹುದೆಂದು ಪಿಸಿಬಿ ಹೇಳಿದೆ. ಕಳೆದ 2 ದಿನಗಳ ಹಿಂದಷ್ಟೇ ಪಿಸಿಬಿ ಈ ಘೋಷಣೆ ಮಾಡಿದೆ. ಇನ್ನು ಈಗಾಗಲೇ ಪಂದ್ಯ ವೀಕ್ಷಣೆಗಾಗಿ ಟಿಕೆಟ್ ಖರೀದಿಸಿದವರಿಗೆ ಹಣ ಮರುಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದೆ. ಬಾಂಗ್ಲಾ ಮತ್ತು ಪಾಕ್​ ಟೆಸ್ಟ್​ ಪಂದ್ಯದ ಟಿಕೆಟ್​ ದರವನ್ನು 50 ಪಾಕಿಸ್ತಾನಿ ರೂಪಾಯಿಗಳಲ್ಲಿ ಇರಿಸಿದೆ ಎಂದು ತಿಳಿದು ಬಂದಿದೆ. ಇದು ಭಾರತೀಯ 15 ರೂಪಾಯಿಗೆ ಸಮಾನವಾಗಿದೆ. ಇಷ್ಟು ಕಡಿಮೆ ಬೆಲೆಯ ಹೊರತಾಗಿಯೂ, ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಲು ಮೈದಾನಕ್ಕೆ ಆಗಮಿಸದೇ ಇರುವುದಕ್ಕೆ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಈ ಸುದ್ದಿ ತಿಳಿದು ಪಾಕ್​ ಮಂಡಳಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್​ ಮಾಡಲಾಗುತ್ತಿದೆ.

ಏತನ್ಮಧ್ಯೆ, ಪಾಕಿಸ್ತಾನವೂ ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಮೈದಾನಗಳ ನವೀಕರಣ ಕಾರ್ಯವನ್ನು ಆರಂಭಿಸಿದೆ. ಹಣವನ್ನು ಉಳಿತಾಯ ಮಾಡಲು ಪಾಕ್​ ಮಂಡಳಿ ಮೈದಾನಕ್ಕೆ ಅಳವಡಿಸುವ ಫ್ಲಡ್ ಲೈಟ್‌ಗಳು ಮತ್ತು ಜನರೇಟರ್ ಅನ್ನು ಒಂದು ವರ್ಷಕ್ಕೆ ಬಾಡಿಗೆಗೆ ತೆಗೆದುಕೊಳ್ಳಲು ಮುಂದಾಗಿದೆ. ಕೆಲ ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಇಲ್ಲಿನ ಕ್ರೀಡಾಂಗಣಗಳು ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲು ಸೂಕ್ತವಾಗಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ಕ್ರಿಕೆಟ್​ನಲ್ಲಿ ದಾಖಲೆಗಳ ಶಿಖರ ಕಟ್ಟಿರುವ ಧವನ್​: ಈ ಐದು ರೆಕಾರ್ಡ್​ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ! - Shikhar Dhawan

ETV Bharat Logo

Copyright © 2025 Ushodaya Enterprises Pvt. Ltd., All Rights Reserved.