ಚೆನ್ನೈ(ತಮಿಳುನಾಡು): ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳ ಸಂಘಟಿತ ಪ್ರದರ್ಶನ ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 137 ರನ್ಗಳ ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದೆ. ತವರಿನಲ್ಲಿ ಸಿಎಸ್ಕೆ ಗೆಲ್ಲಲು 138 ರನ್ಗಳ ಅವಶ್ಯಕತೆ ಇದೆ. ಕಳೆದ ಪಂದ್ಯಕ್ಕೆ ಹೋಲಿಸಿದರೆ ಸಿಎಸ್ಕೆ ಎದುರು ಕೆಕೆಆರ್ ಬ್ಯಾಟರ್‌ಗಳ ಆಟ ನಡೆಯಲಿಲ್ಲ.
ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ಆರಂಭದಲ್ಲೇ ಫಿಲಿಪ್ ಸಾಲ್ಟ್ ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಅದ್ಭುತವಾಗಿ ಆಡಿದ್ದ ಸಾಲ್ಟ್, ಸಿಎಸ್ಕೆ ಎದುರು ಮಂಕಾದರು. 2ನೇ ವಿಕೆಟ್ಗೆ ಬಂದ ಯುವ ಬ್ಯಾಟರ್ ಅಂಗಕೃಷ್ ರಘುವಂಶಿ ಅವರು ಸುನಿಲ್ ನರೈನ್ ಜತೆಗೂಡಿ ಉತ್ತಮ ಪ್ರದರ್ಶನ ತೋರಿದರು. ಸಿಕ್ಸರ್, ಬೌಂಡರಿ ಸಿಡಿಸಿ ಬೃಹತ್ ರನ್ ಕಲೆಹಾಕುವ ಸುಳಿವು ನೀಡಿದರು.
ಆದರೆ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ರಘುವಂಶಿ ವಿಕೆಟ್ ಒಪ್ಪಿಸಿದರು. ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದ್ದ ಸುನಿಲ್ ನರೈನ್ (27) ಅವರನ್ನೂ ತಮ್ಮದೇ ಓವರ್ನಲ್ಲಿ ಜಡೇಜಾ ಔಟ್ ಮಾಡಿದರು. ವೆಂಕಟೇಶ್ ಅಯ್ಯರ್ ಕೂಡಾ ತಂಡಕ್ಕೆ ಆಸರೆಯಾಗಲಿಲ್ಲ.
ಹೀಗೆ ವಿಕೆಟ್ಗಳು ಬೀಳುತ್ತಿದ್ದರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಮಂದಗತಿ ಆಟದ ಮೂಲಕ ರನ್ ಸೇರಿಸಿದರು. ಈ ಹಂತದಲ್ಲಿ 13 ರನ್ಗಳಿಸಿದ ರಮಣದೀಪ್ ಸಿಂಗ್ ಮಹೇಶ್ ತೀಕ್ಷಣ ಅವರಿಗೆ ವಿಕೆಟ್ ಒಪ್ಪಿಸಿದರು. ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಹೊಡಿ ಬಡಿ ಆಟಗಾರ ರಿಂಕು ಸಿಂಗ್ (9) ಕೂಡಾ ತಂಡಕ್ಕೆ ಅವಶ್ಯಕತೆ ಇದ್ದಾಗ ಹೇಳಿಕೊಳ್ಳವಂತಹ ಪ್ರದರ್ಶನ ನೀಡಲಿಲ್ಲ.
ದೈತ್ಯ ಬ್ಯಾಟರ್ ಆಂಡ್ರೆ ರಸೆಲ್ (10) ಎರಡು ಬೌಂಡರಿಗಳಷ್ಟೇ ಸೀಮಿತವಾಗಿ ಆಟ ನಿಲ್ಲಿಸಿದರು. ಕೊನೆ ಓವರ್ನಲ್ಲಿ ಕೆಕೆಆರ್ ತಂಡದ ಮೊತ್ತ ಹೆಚ್ಚಿಸಲು ದೊಡ್ಡ ಹೊಡೆತಕ್ಕೆ ಕೈ ಹಾಕಿದ ಶ್ರೇಯಸ್ ಅಯ್ಯರ್ 34 ರನ್ಗಳಿಸಿ ಔಟಾದರು. ಮಿಚೆಲ್ ಸ್ಟಾರ್ಕ್ ಕೂಡ ಶೂನ್ಯಕ್ಕೆ ವಿಕೆಟ್ ನೀಡಿದರು. ಅಂತಿಮವಾಗಿ ಅನುಕೂಲ್ ರಾಯ್ (3) ಮತ್ತು ವರುಣ್ ಚಕ್ರವರ್ತಿ ಅಜೇಯರಾಗುಳಿದರು.
ಸಂಘಟಿತ ಮತ್ತು ಆಕ್ರಮಣಕಾರಿ ಬೌಲಿಂಗ್ ಮಾಡಿದ ಸಿಎಸ್ಕೆ ಬೌಲರ್ಗಳಾದ ರವೀಂದ್ರ ಜಡೇಜಾ ಮತ್ತು ತುಷರ್ ದೇಶಪಾಂಡೆ 3 ಮೂರು ವಿಕೆಟ್ ಕಬಳಿಸಿದರೆ, ಮುಸ್ತಾಫಿಜುರ್ ರೆಹಮಾನ್ ಎರಡು ಹಾಗು ಮಹೇಶ್ ತೀಕ್ಷಣ ಒಂದು ವಿಕೆಟ್ ಪಡೆದುಕೊಂಡರು.
ತಂಡಗಳು- ಕೋಲ್ಕತ್ತಾ ನೈಟ್ ರೈಡರ್ಸ್: ಫಿಲಿಪ್ ಸಾಲ್ಟ್(ವಿ.ಕೀ), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ), ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿ.ಕೀ), ಶಾರ್ದೂಲ್ ಠಾಕೂರ್, ಮುಸ್ತಾಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ಇದನ್ನೂ ಓದಿ: ಧೋನಿ ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ: ಗೌತಮ್ ಗಂಭೀರ್ - Gautam Gambhir