ETV Bharat / sports

ಲಕ್ನೋ ಸೂಪರ್​ ಜೈಂಟ್ಸ್​ ಮಾಲೀಕನ ಭೇಟಿಯಾದ ಕೆ.ಎಲ್​ ರಾಹುಲ್​: ಇಬ್ಬರ ನಡುವಿನ ಮಾತುಕತೆ ಬಹಿರಂಗ! - KL Rahul

author img

By ETV Bharat Sports Team

Published : Aug 27, 2024, 2:58 PM IST

ಸ್ಟಾರ್​ ಬ್ಯಾಟರ್​​ ಕೆ.ಎಲ್​ ರಾಹುಲ್​ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಮಾಲೀಕ ಗೋಯೆಂಕಾ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ತಂಡದ ಸಂಯೋಜನೆ ಮತ್ತು ರಿಟೇನ್​ ಕುರಿತು ಚರ್ಚೆ ನಡೆದಿದೆ ಎಂದು ವರದಿಯಾಗಿದೆ.

ಕೆ ಎಲ್​ ರಾಹುಲ್​ ಮತ್ತು ಸಂಜೀವ್​ ಗೋಯೆಂಕಾ
ಕೆ ಎಲ್​ ರಾಹುಲ್​ ಮತ್ತು ಸಂಜೀವ್​ ಗೋಯೆಂಕಾ (IANS Photos)

ನವದೆಹಲಿ: ಭಾರತ ಕ್ರಿಕೆಟ್ ​ತಂಡದ ಸ್ಟಾರ್​ ಬ್ಯಾಟರ್​ ಕೆ.ಎಲ್ ರಾಹುಲ್​ 2025ರ ಐಪಿಎಲ್​ ಮೆಗಾ ಹರಾಜಿಗೂ ಮುನ್ನವೇ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಮಾಲೀಕ ಸಂಜೀವ್​ ಗೋಯೆಂಕಾ ಅವರನ್ನು ಕೋಲ್ಕತ್ತಾದಲ್ಲಿ ಭೇಟಿಯಾಗಿದ್ದಾರೆ. ಕಳೆದ ಸೀಸನ್​ನಲ್ಲಿ ಲಕ್ನೋ ಮಾಲೀಕರೊಂದಿಗೆ ಅಸಮಾಧಾನ ಹೊಂದಿದ್ದ ರಾಹುಲ್​ ಈ ಬಾರಿ ಲಕ್ನೋ ತಂಡವನ್ನು ತೊರೆಯಬಹುದು ಎಂಬ ಊಹಾಪೋಹಗಳ ನಡುವೆಯೇ ಅವರ ಈ ಭೇಟಿ ಕುತೂಹಲ ಕೆರಳಿಸಿದೆ.

ಕ್ರಿಕ್​ಬಜ್​ನ ವರದಿಯ ಪ್ರಕಾರ, ಕೆಎಲ್​ ರಾಹುಲ್ ಮತ್ತು ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಡುವೆ 1 ಗಂಟೆ ಕಾಲ ಮಾತುಕತೆ ನಡೆಯಿತು. ಈ ವೇಳೆ ಮುಂದಿನ ಋತುವಿಗಾಗಿ ತಂಡದ ಸಂಯೋಜನೆ ಮತ್ತು ರಿಟೇನ್​ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಲಕ್ನೋ ತಂಡದಲ್ಲೇ ಮುಂದುವರೆಯುವ ಇಂಗಿತವನ್ನು ರಾಹುಲ್​ ಕೂಡ ವ್ಯಕ್ತಪಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಆದರೆ ಫ್ರಾಂಚೈಸಿ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​​ ರಾಹುಲ್​ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲವಾದರೂ ಈ ಭೇಟಿಯಿಂದ ತಂಡದಲ್ಲಿ ಉಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಈ ಭೇಟಿ ಬಳಿಕ ಐಪಿಎಲ್ ಆಡಳಿತ ಮಂಡಳಿಯ ಸದಸ್ಯರೊಬ್ಬರು ಪಿಟಿಐಗೆ ಈ ಬಗ್ಗೆ ಮಾಹಿತಿ ನೀಡಿದ್ದು, 'ಕೆ ಎಲ್​ ರಾಹುಲ್ ಕೋಲ್ಕತ್ತಾಗೆ ಬಂದು ಗೋಯೆಂಕಾ ಅವರನ್ನು ಭೇಟಿ ಮಾಡಿದ್ದಾರೆ. ಗೋಯೆಂಕಾ ಕೂಡ ರಾಹುಲ್​ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಬಯಸಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ ಬಿಸಿಸಿಐ ರಿಟೇನ್​ ಕುರಿತಾದ ಯಾವುದೇ ನಿಯಮಗಳನ್ನು ಇನ್ನೂ ಪ್ರಕಟಿಸಿಲ್ಲ. ಈ ನಿಯಮಗಳು ತಿಳಿದ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಳೆದ ಮೂರು ಸೀಸನ್​ಗಳಲ್ಲಿ ಕೆ ಎಲ್​ ರಾಹುಲ್​ ನಾಯಕನಾಗಿ ಲಕ್ನೋ ತಂಡವನ್ನು ಮುನ್ನಡೆಸಿದ್ದಾರೆ. ಆದರೇ ಕಳೆದ ಸೀಸನ್​ನ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಲಕ್ನೋ ಹೀನಾಯವಾಗಿ ಸೋಲನುಭವಿಸಿದ ಬಳಿಕ ಎಲ್​ಎಸ್​ ಮಾಲೀಕ ಗೋಯೆಂಕಾ ಅವರು ನಾಯಕ ರಾಹುಲ್ ಮೇಲೆ ಕೋಪಗೊಂಡಿದ್ದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಇದರ ಬೆನ್ನಲ್ಲೇ ಮುಂದಿನ ಆವೃತ್ತಿಯಲ್ಲಿ ಕೆ ಎಲ್​ ರಾಹುಲ್​ ಲಕ್ನೋ ತೊರೆಯಲಿದ್ದಾರೆ ಎಂಬ ಮಾತುಗಳು ಹರಿದಾಡಲಾರಂಭಿಸಿವೆ.

ಇದನ್ನೂ ಓದಿ: ಜಯ್​ ಶಾ ಬಳಿಕ ಬಿಸಿಸಿಐ ಮುಂದಿನ ಕಾರ್ಯದರ್ಶಿ ಯಾರು?: ಮುಂಚೂಣಿಯಲ್ಲಿ ದಿವಂಗತ ಬಿಜೆಪಿ ನಾಯಕ ಮಗನ ಹೆಸರು! - BCCI next secretary

ETV Bharat Logo

Copyright © 2024 Ushodaya Enterprises Pvt. Ltd., All Rights Reserved.