ETV Bharat / sports

ಇಂಗ್ಲೆಂಡ್ ಪರ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಇವರು: ಪುಡಿಗಟ್ಟುತ್ತಾರಾ ತೆಂಡೂಲ್ಕರ್​​​ ದಾಖಲೆ? - Joe Root 33rd test hundred

author img

By ETV Bharat Karnataka Team

Published : Aug 30, 2024, 8:07 AM IST

ಇಂಗ್ಲೆಂಡ್‌ನ ಸ್ಟೈಲಿಶ್ ಟೆಸ್ಟ್ ಬ್ಯಾಟ್ಸ್‌ಮನ್ ಜೋ ರೂಟ್ ಕ್ರಿಕೆಟ್​ ಕಾಶಿ ಲಾರ್ಡ್ಸ್​​ನಲ್ಲಿ ತಮ್ಮ 33ನೇ ಟೆಸ್ಟ್ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಅವರು ಹಲವು ದಾಖಲೆಗಳನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ. ಇದೀಗ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ದಾಖಲೆಯು ರೂಟ್‌ನ ರಾಡಾರ್‌ನಲ್ಲಿದೆ.

Joe Root 33rd test hundred
ಜೋ ರೂಟ್ ಇಂಗ್ಲೆಂಡ್ ಪರ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ: ಪುಡಿಗಟ್ಟುತ್ತಾರಾ ತೆಂಡೂಲ್ಕರ್​​​ ದಾಖಲೆ? (AFP Photo)

ನವದೆಹಲಿ: ಇಂಗ್ಲೆಂಡ್‌ನ ಬಲಗೈ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಗುರುವಾರ ಲಾರ್ಡ್ಸ್‌ನಲ್ಲಿ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನ ಅದ್ಭುತ ಶತಕ ಗಳಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ. ಈ ಶತಕದೊಂದಿಗೆ ರೂಟ್ ಇಂಗ್ಲೆಂಡ್ ಪರ ಗರಿಷ್ಠ 33 ಟೆಸ್ಟ್ ಶತಕಗಳನ್ನು ಬಾರಿಸಿದ ಅಲ್ಲಿನ ದಂತಕಥೆ ಅಲೆಸ್ಟರ್ ಕುಕ್ ಅವರ ದಾಖಲೆ ಸರಿಗಟ್ಟಿದ್ದಾರೆ.

ರೂಟ್ 162 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 33ನೇ ಶತಕವನ್ನು ಪೂರೈಸಿದರು. ವೇಗದ ಬೌಲರ್ ಲಹಿರು ಕುಮಾರ ಅವರ ಬೌಲ್​​​​ ಅನ್ನು ಸ್ಲಿಪ್ ಮತ್ತು ಗಲ್ಲಿಯತ್ತ ಬಾರಿಸುವ ಮೂಲಕ ಮಹತ್ವದ ಶತಕ ಪೂರೈಸಿದರು. ಟಾಸ್​ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದ ಶ್ರೀಲಂಕಾ ಉತ್ತಮ ಆರಂಭ ಮಾಡಿದರೂ, ನಂತರ ಜೋ ರೂಟ್ ಅವರ ದಾಖಲೆಯ 33 ನೇ ಟೆಸ್ಟ್ ಶತಕ ಲಂಕಾ ಯೋಜನೆಗಳನ್ನೆಲ್ಲ ತಲೆಕೆಳಗಾಗುವಂತೆ ಮಾಡಿತು.

ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳು: ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ತಮ್ಮ 33 ನೇ ಶತಕವನ್ನು ಗಳಿಸುವ ಮೂಲಕ ಟಾಪ್​​​​​​​ 10 ಪಟ್ಟಿಯಲ್ಲಿ ಸ್ಥಾನ ಪಡೆದರು. ಇನ್ನು ಇಷ್ಟೇ ಶತಕ ಗಳಿಸಿರುವ ಕುಕ್ 161 ಪಂದ್ಯಗಳನ್ನು ಆಡಿದ್ದರೆ, ರೂಟ್ ಅವರ 145ನೇ ಪಂದ್ಯದಲ್ಲಿ ಆಡಿದ್ದಾರೆ.

7ನೇ ಅತಿ ಹೆಚ್ಚು ಟೆಸ್ಟ್ ರನ್ ಸ್ಕೋರರ್: ರೂಟ್ ಇತ್ತೀಚೆಗೆ 12,000ನೇ ಟೆಸ್ಟ್ ಪೂರೈಸಿದ್ದಾರೆ. ಈ ಮೂಲಕ ಟೆಸ್ಟ್​​ ಕ್ರಿಕೆಟ್​ನಲ್ಲಿ 7ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ರೂಟ್ 145 ಟೆಸ್ಟ್ ಪಂದ್ಯಗಳ 265 ಇನ್ನಿಂಗ್ಸ್‌ಗಳಲ್ಲಿ 50.71 ಸರಾಸರಿಯೊಂದಿಗೆ ಒಟ್ಟು 12274 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 5 ದ್ವಿಶತಕ, 33 ಶತಕ ಮತ್ತು 64 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ರೂಟ್​ ಇದೇ ಫಾರ್ಮ್​ ಮುಂದುವರಿಸಿದರೆ, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೂ ಮುರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್, ಸಚಿನ್ ತೆಂಡೂಲ್ಕರ್ ಅವರ ಗರಿಷ್ಠ 15921 ರನ್‌ಗಳ ದಾಖಲೆಯನ್ನು ಮುರಿಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ರೂಟ್ ಇದುವರೆಗೆ 12274 ಟೆಸ್ಟ್ ರನ್ ಗಳಿಸಿದ್ದಾರೆ. ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲು ಅವರು ಕೇವಲ 3647 ರನ್‌ಗಳು ಬೇಕಿದೆ.

33 ವರ್ಷದ ರೂಟ್ ಈಗಾಗಲೇ 33 ಟೆಸ್ಟ್​ ಶತಕಗಳನ್ನು ಪೂರೈಸಿದ್ದಾರೆ. ಅವರ ಆಟದ ವೈಖರಿಯನ್ನು ನೋಡಿದರೆ, ತೆಂಡೂಲ್ಕರ್ ಅವರ 51 ಟೆಸ್ಟ್ ಶತಕಗಳ ದಾಖಲೆಯನ್ನು ಅವರು ಶೀಘ್ರದಲ್ಲೇ ಮುರಿಯಲಿದ್ದಾರೆ ಎಂದು ತೋರುತ್ತದೆ ಅಂತಿದ್ದಾರೆ ಕ್ರಿಕೆಟ್​ ತಜ್ಞರು. 1989-2013ರ ಅವಧಿಯಲ್ಲಿ 200 ಟೆಸ್ಟ್ ಪಂದ್ಯಗಳಲ್ಲಿ 51 ಶತಕಗಳನ್ನು ಗಳಿಸಿರುವ ಸಚಿನ್ ತೆಂಡೂಲ್ಕರ್​ ಅತಿ ಹೆಚ್ಚು ಟೆಸ್ಟ್ ಶತಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಬಾರಿಸಿರುವ ಆಟಗಾರರು:

  • ಸಚಿನ್ ತೆಂಡೂಲ್ಕರ್ 51
  • ಜಾಕ್ವೆಸ್ ಕಾಲಿಸ್ 45
  • ರಿಕಿ ಪಾಂಟಿಂಗ್ 41
  • ಕುಮಾರ್ ಸಂಗಕ್ಕಾರ 38
  • ರಾಹುಲ್ ದ್ರಾವಿಡ್ - 36
  • ಸುನಿಲ್ ಗವಾಸ್ಕರ್ 34
  • ಮಹೇಲಾ ಜಯವರ್ಧನೆ 34
  • ಬ್ರಿಯಾನ್ ಲಾರಾ 34
  • ಯೂನಿಸ್ ಖಾನ್ 34
  • ಅಲಿಸ್ಟರ್ ಕುಕ್ 33
  • ಜೋ ರೂಟ್​ 33

ಇದನ್ನು ಓದಿ:ಗುಜರಾತ್ ಪ್ರವಾಹದಲ್ಲಿ ಸಿಲುಕಿದ್ದ ಭಾರತ ಮಹಿಳಾ ಕ್ರಿಕೆಟ್​ ತಂಡದ ಬೌಲರ್​!​ - Gujarat Flood

ETV Bharat Logo

Copyright © 2024 Ushodaya Enterprises Pvt. Ltd., All Rights Reserved.