ETV Bharat / sports

ರಾಹುಲ್ ದ್ರಾವಿಡ್ ಟಿ-20 ವಿಶ್ವಕಪ್‌ವರೆಗೆ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ; ಜಯ್ ಶಾ

ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ
author img

By ETV Bharat Karnataka Team

Published : Feb 15, 2024, 1:41 PM IST

ರಾಜ್‌ಕೋಟ್(ಗುಜರಾತ್): ಈ ವರ್ಷ ಜೂನ್‌ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಪಂದ್ಯಾವಳಿವರೆಗೆ ರಾಹುಲ್ ದ್ರಾವಿಡ್ ಅವರು, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಇರಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

ಬುಧವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾ, ''ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕಳೆದ ವರ್ಷದ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಅಂತ್ಯಗೊಂಡಿತ್ತು. ಆದರೆ, ಡಿಸೆಂಬರ್ - ಜನವರಿಯಲ್ಲಿ ರಾಹುಲ್ ದ್ರಾವಿಡ್ ಮತ್ತು ಇತರ ತರಬೇತಿ ಸಿಬ್ಬಂದಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸದವರೆಗೆ ಹುದ್ದೆಯಲ್ಲಿ ಮುಂದುವರಿಯಲು ಅವರನ್ನು ಕೇಳಲಾಯಿತು. ಆಗ ಅವರಿಗೆ ತಮ್ಮ ಅವಧಿಯ ಬಗ್ಗೆ ತಿಳಿಸಿರಲಿಲ್ಲ. ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ವರೆಗೆ ಮುಖ್ಯ ಕೋಚ್ ಆಗಿ ಮುಂದುವರಿಸುವ ಬಗ್ಗೆ ರಾಹುಲ್ ದ್ರಾವಿಡ್ ಜೊತೆ ಪ್ರಾಥಮಿಕ ಮಾತುಕತೆ ನಡೆಸಿದ್ದೇವೆ. ಏಕದಿನ ವಿಶ್ವಕಪ್ ಬಳಿಕ ದ್ರಾವಿಡ್ ಅವರು ಕೂಡಲೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಬೇಕಿತ್ತು. ಹಾಗಾಗಿ ಅವರ ಜೊತೆ ಮಾತನಾಡಲು ಸಮಯ ಸಿಕ್ಕಿರಲಿಲ್ಲ. ಇದೀಗ ಸಾಧ್ಯವಾಯಿತು'' ಎಂದು ಅವರು ಇದೇ ವೇಳೆ ಸಮಜಾಯಿಷಿ ಕೂಡಾ ನೀಡಿದರು.

ಇದೇ ವೇಳೆ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಯ್ ಶಾ, ''ರಾಹುಲ್ ದ್ರಾವಿಡ್‌ ಅವರಂತಹ ಹಿರಿಯ ವ್ಯಕ್ತಿಯ ಒಪ್ಪಂದದ ಬಗ್ಗೆ ನೀವೇಕೆ ಇಷ್ಟು ತಲೆಕೆಡಿಸಿಕೊಳ್ಳುತ್ತಿದ್ದೀರಿ? ಟಿ20 ವಿಶ್ವಕಪ್‌ ಪಂದ್ಯಾವಳಿವರೆಗೆ ರಾಹುಲ್ ದ್ರಾವಿಡ್​ ಮುಖ್ಯ ಕೋಚ್ ಆಗಿ ಇರಲಿದ್ದಾರೆ. ಈ ಬಗ್ಗೆ ಅವರ ಜೊತೆ ಮತ್ತಷ್ಟು ಮಾತುಕತೆ ನಡೆಸಲಿದ್ದೇವೆ'' ಎಂದು ಅವರು ಹೇಳಿದ್ದಾರೆ.

''ಸಮಯ ಸಿಕ್ಕಾಗಲೆಲ್ಲಾ ಅವರ ಜೊತೆ ನಾನು ಮಾತುಕತೆ ನಡೆಸುತ್ತೇನೆ. ಒಂದರ ಹಿಂದೊಂದರಂತೆ ಸರಣಿಗಳು ಬರುತ್ತಿವೆ. ವಿಶ್ವಕಪ್ ಪಂದ್ಯಾವಳಿಗಳು ಮುಗಿದ ಕೂಡಲೇ ಪ್ರವಾಸಗಳು ನಿಗದಿ ಆಗಿವೆ. ದಕ್ಷಿಣ ಆಫ್ರಿಕಾ ಸರಣಿ, ಬಳಿಕ, ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿ, ಈಗ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಳು ನಡೆಯುತ್ತಿವೆ. ಈ ನಡುವೆ ನಮಗೆ ಮಾತುಕತೆಗೆ ಸಮಯವೇ ಸಿಕ್ಕಿಲ್ಲ. ಟಿ20 ವಿಶ್ವಕಪ್‌ಗೂ ಮುನ್ನ ಅವರ ಮತ್ತು ನಮ್ಮ ನಡುವೆ ಕೆಲವು ಸುತ್ತಿನ ಮಾತುಕತೆ ನಡೆಯಲಿದೆ'' ಎಂದು ಜಯ್ ಶಾ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ್ದ ಅವರು, ಈ ವರ್ಷ ವೆಸ್ಟ್ ಇಂಡೀಸ್ - ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಮುಂಬರುವ ಸರಣಿಗಳಲ್ಲೂ ಭಾರತ ತಂಡದ ನಾಯಕರಾಗಿ ಅವರು ಮುಂದುವರೆಯಲಿದ್ದಾರೆ ಎಂದು ಸಹ ತಿಳಿಸಿದ್ದಾರೆ.

ಇದನ್ನೂ ಓದಿ: ಕೊನೆಗೂ 'ಟೆಸ್ಟ್​' ಪಾಸ್​ ಆದ ಸರ್ಫರಾಜ್​; ಮೈದಾನದಲ್ಲಿ ಭಾವುಕ ಅಪ್ಪನಿಗೆ ಮಗನ ಅಪ್ಪುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.