ETV Bharat / sports

ಕೊಹ್ಲಿ​, ಪಾಟಿದಾರ್​ ಅಬ್ಬರದ ಅರ್ಧಶತಕ: ಪಂಜಾಬ್​ಗೆ 242 ರನ್​ ಗುರಿ ನೀಡಿದ ಆರ್​ಸಿಬಿ - IPL 2024 - IPL 2024

ಐಪಿಎಲ್​ನ ಇಂದಿನ ಪಂದ್ಯದಲ್ಲಿ​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಪಂಜಾಬ್​ ಕಿಂಗ್ಸ್​ ವಿರುದ್ದ 7 ವಿಕೆಟ್​ಗಳ​ ನಷ್ಟಕ್ಕೆ 241 ರನ್​ ಪೇರಿಸಿದೆ.

Royal Challengers Bengaluru
ವಿರಾಟ್​ ಕೊಹ್ಲಿ, ರಜತ್​ ಪಟಿದಾರ್ (IANS)
author img

By ETV Bharat Karnataka Team

Published : May 9, 2024, 10:03 PM IST

Updated : May 9, 2024, 10:23 PM IST

ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ 2024ರ 58ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಪಂಜಾಬ್​ ಕಿಂಗ್ಸ್​ಗೆ 242 ರನ್​ ಗೆಲುವಿನ​ ಗುರಿ ನೀಡಿದೆ. ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ (92), ರಜತ್​ ಪಾಟಿದಾರ್ (55) ಹಾಗೂ ಕ್ಯಾಮರೂನ್​ ಗ್ರೀನ್ (46)​ ಅವರ​ ಅಬ್ಬರದ ಬ್ಯಾಟಿಂಗ್​ನಿಂದ ಆರ್​ಸಿಬಿ 7 ವಿಕೆಟ್​​ ನಷ್ಟಕ್ಕೆ ಬೃಹತ್​ ಮೊತ್ತ ಕಲೆ ಹಾಕಿದೆ.

ಟಾಸ್​ ಗೆದ್ದ ಪಂಜಾಬ್​ ಕಿಂಗ್ಸ್​ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್​ ಆರಂಭಿಸಿದ ಬೆಂಗಳೂರು ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಮೂರನೇ ಓವರ್​ನಲ್ಲಿ 9 ರನ್​ ಗಳಿಸಿದ್ದ ನಾಯಕ ಫಾಫ್​​ ಡು ಪ್ಲೆಸಿಸ್​ ವಿಧ್ವತ್​ ಕಾವೇರಪ್ಪ ಬೌಲಿಂಗ್​ನಲ್ಲಿ ಶಶಾಂಕ್​ ಸಿಂಗ್​ಗೆ ಕ್ಯಾಚ್​ ನೀಡಿ ಹೊರನಡೆದರು. ಬಳಿಕ ಬಂದ ವಿಲ್​ ಝಾಕ್ಸ್​ ಕೂಡ ನಿರೀಕ್ಷೆ ಹುಸಿಗೊಳಿಸಿದರು. ತಲಾ ಒಂದು ಸಿಕ್ಸರ್​ ಹಾಗೂ ಬೌಂಡರಿ ಬಾರಿಸಿದ್ದ ಅವರು ಕೇವಲ 12 ರನ್​ಗೆ ಪೆವಿಲಿಯನ್​ಗೆ ಮರಳಿದರು.

ಆ ಬಳಿಕ ವಿರಾಟ್​ ಕೊಹ್ಲಿ ಜೊತೆ ಒಂದಾದ ರಜತ್​ ಪಾಟಿದಾರ್​ ಬೆಂಗಳೂರು ತಂಡದ ಮೊತ್ತಕ್ಕೆ ಬಲ ತುಂಬಿದರು. ಭರ್ಜರಿ 6 ಸಿಕ್ಸರ್​ ಬಾರಿಸಿದ ಪಾಟಿದಾರ್​ 23 ಎಸೆತಗಳಲ್ಲಿ ಬಿರುಸಿದ ಅರ್ಧಶತಕ (55) ದಾಖಲಿಸಿದರು. ಅದರ ಬೆನ್ನಲ್ಲೇ ಸ್ಯಾಮ್​ ಕರನ್​ ಬೌಲಿಂಗ್​ನಲ್ಲಿ ಬೈರ್​ಸ್ಟೋಗೆ ಕ್ಯಾಚ್​ ನೀಡಿ ಹೊರನಡೆದರು.

ಇನ್ನೊಂದು ತುದಿಯಲ್ಲಿ ಅಬ್ಬರದ ಬ್ಯಾಟಿಂಗ್​ ಮುಂದುವರೆಸಿದ ವಿರಾಟ್​ ಕೊಹ್ಲಿ, 47 ಬಾಲ್​ಗಳಲ್ಲಿ 92 ರನ್​ ಸಿಡಿಸಿದರು. ಪಂಜಾಬ್​ ಬೌಲರ್​​ಗಳನ್ನು ಬೆಂಡೆತ್ತಿದ ಕೊಹ್ಲಿ, 7 ಬೌಂಡರಿ ಹಾಗೂ 6 ಸಿಕ್ಸರ್​ ಸಿಡಿಸಿದರು. ಶತಕದ ಅಂಚಿನಲ್ಲಿದ್ದ ಕೊಹ್ಲಿ ಅರ್ಶದೀಪ್​ ಬೌಲಿಂಗ್​​ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್​ ಒಪ್ಪಿಸಿದರು.

ಕೊಹ್ಲಿ ಜೊತೆ 46 ಎಸೆತಗಳಲ್ಲಿ 92 ರನ್​ಗಳ ಜೊತೆಯಾಟ ಆಡಿದ ಕ್ಯಾಮರೂನ್​ ಗ್ರೀನ್​ ಕೊನೇಯ ಎಸೆತದಲ್ಲಿ ಸ್ಯಾಮ್​ ಕರನ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. 46 ರನ್​ ಗಳಿಸಿ ಅಂತಿಮ ಬಾಲ್​ನಲ್ಲಿ ಔಟಾದರು. ಈ ನಡುವೆ ದಿನೇಶ್​ ಕಾರ್ತಿಕ್​ 7 ಎಸೆತಗಳಲ್ಲಿ 18 ರನ್​ ಬಾರಿಸಿ ತಂಡದ ಮೊತ್ತ ಹಿಗ್ಗಿಸುವಲ್ಲಿ ಶ್ರಮಿಸಿದರು.

ಅಂತಿಮವಾಗಿ ಬೆಂಗಳೂರು ತಂಡ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 241 ಪೇರಿಸಿದೆ. ಪಂಜಾಬ್​ ಪರ ಹರ್ಷಲ್​ ಪಟೇಲ್​ 38 ರನ್​ಗೆ 3 ವಿಕೆಟ್​ ಕಬಳಸಿದರು. ಐಪಿಎಲ್​ ಪ್ಲೇ ಆಪ್​ ರೇಸ್​ನಲ್ಲಿ ಉಳಿದುಕೊಳ್ಳಲು ಎರಡೂ ತಂಡಗಳಿಗೆ ಈ ಪಂದ್ಯವು ಬಹಳ ಮಹತ್ವದ್ದಾಗಿದೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ, ಎಂಎಸ್​ ಧೋನಿ, ರೋಹಿತ್ ಶರ್ಮಾ ಎಷ್ಟು ಸಲ 'ಡಕ್​ ಔಟ್​' ಆಗಿದ್ದಾರೆ ಗೊತ್ತಾ? - duck out in IPL

Last Updated : May 9, 2024, 10:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.