ETV Bharat / sports

IPL 2024: ಪುತ್ರ ಜೋರಾವರ್​ಗಾಗಿ ಭಾವನಾತ್ಮಕ ಸಂದೇಶ ಹಂಚಿಕೊಂಡ ಶಿಖರ್​ ದವನ್ - Dhawan Shares Emotional Note - DHAWAN SHARES EMOTIONAL NOTE

ಶಿಖರ್​ ದವನ್​ ತಮ್ಮ ಪುತ್ರ ಜೋರಾವರ್​ ನೆನದು ತಮ್ಮ ಸೋಷಿಯಲ್​ ಮೀಡಿಯಾ ಹ್ಯಾಂಡಲ್​ನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಈ ಸಂದೇಶವೀಗ ಭಾರಿ ಸದ್ದು ಮಾಡುತ್ತಿದೆ.

BlankShikhar Dhawan Shares Emotional Note For His Son Zoravar
IPL 2024: ಪುತ್ರ ಜೋರಾವರ್​ಗಾಗಿ ಭಾವನಾತ್ಮಕ ಸಂದೇಶ ಹಂಚಿಕೊಂಡ ಶಿಖರ್​ ದವನ್
author img

By ETV Bharat Karnataka Team

Published : Apr 18, 2024, 6:48 AM IST

ಹೈದರಾಬಾದ್: ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಇತ್ತೀಚೆಗೆ ತಮ್ಮ ಪುತ್ರ ಜೋರಾವರ್‌ಗಾಗಿ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಈ ಸಂದೇಶ ಇದೀಗ ಭಾರಿ ಸದ್ದು ಮಾಡುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ ನಲ್ಲಿ ಧವನ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪಂಜಾಬ್​ ಕಿಂಗ್ಸ್​ ಇದುವರೆಗೆ ಆಡಿದ ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋಲು ಕಂಡಿದ್ದರೆ ಎರಡರಲ್ಲಿ ಜಯ ಸಾಧಿಸಿದೆ. ಪಂಜಾಬ್ ಕಿಂಗ್ಸ್​​ ಶಿಖರ್​ ದವನ್​ ಅವರ ಮೇಲೆ ನಂಬಿಕೆ ಇಟ್ಟು ನಾಯಕತ್ವವನ್ನು ನೀಡಿದೆ.

ಪ್ರಸ್ತುತ ಐಪಿಎಲ್​ ಋತುವಿನ ನಡುವೆ ಧವನ್ ತಮ್ಮ ಮಗ ಜೋರಾವರ್​ ಗಾಗಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗನ ಹೆಸರನ್ನು ಮುದ್ರಿಸಿದ ಜೆರ್ಸಿ ಇರುವ ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ. "ನೀವು ಯಾವಾಗಲೂ ನನ್ನೊಂದಿಗೆ ಇದ್ದೀರಿ ಎಂಬ ಶೀರ್ಷಿಕೆಯೊಂದಿಗೆ ಅವರು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಧವನ್ 2013 ರಲ್ಲಿ ಆಯೇಷಾ ಮುಖರ್ಜಿ ಅವರನ್ನು ವಿವಾಹವಾಗಿದ್ರು. ಎಂಟು ವರ್ಷಗಳ ಕಾಲ ಸುಖಕರವಾದ ದಾಂಪತ್ಯವನ್ನು ಕೂಡಾ ನಡೆಸಿದ್ದರು. ಆದರೆ ಇದೀಗ ಆಯೇಷಾ ಮತ್ತು ಶಿಖರ್​ ದವನ್ ವಿಚ್ಚೇದನ ಪಡೆದುಕೊಂಡು ಬೇರೆ ಬೇರೆ ಆಗಿದ್ದಾರೆ. ಇಬ್ಬರ ನಡುವೆ ಹೊಂದಾಣಿಕೆ ಆಗದ ಕಾರಣದ ಮೇಲೆ ದೆಹಲಿ ಕೋರ್ಟ್ ಅವರಿಗೆ ವಿಚ್ಛೇದನ ನೀಡಿದೆ. ವಿಚ್ಚೇದನದ ಬಳಿಕ ದವನ್​ ಅವರ ಮಗ ತಾಯಿಯೊಂದಿಗೆ ಬದುಕು ಸಾಗಿಸುತ್ತಿದ್ದಾನೆ. ಹೀಗಾಗಿ ಪುತ್ರನನ್ನು ನೆನಪು ಮಾಡಿಕೊಂಡು ಶಿಖರ್​ ತಮ್ಮ ಸಾಮಾಜಿಕ ಮಾಧ್ಯಮಗಳ ಹ್ಯಾಂಡಲ್​ನಲ್ಲಿ ಭಾವನಾತ್ಮಕ ಪೋಸ್ಟ್​ಗಳನ್ನು ಮಾಡುತ್ತಿರುತ್ತಾರೆ.

ಐಪಿಎಲ್ 2024ರ ಸಮಯದಲ್ಲಿ ಧವನ್ ಅವರು ತಮ್ಮ ಆಟದಲ್ಲಿ ಸುಧಾರಣೆ ಮಾಡಿಕೊಳ್ಳುತ್ತಾ ಸಾಗುತ್ತಿದ್ದಾರೆ. ಎಡಗೈ ವೇಗಿ ಸ್ಯಾಮ್ ಕುರ್ರಾನ್ ಅವರು ಗಾಯದಿಂದ ಚೇತರಿಸಿಕೊಳ್ಳುವವರೆಗೆ ತಂಡದ ನಾಯಕತ್ವವನ್ನು ಶಿಖರ್​ ವಹಿಸಿಕೊಂಡಿದ್ದಾರೆ. PBKS ಪ್ರಸ್ತುತ 6 ಪಂದ್ಯಗಳಿಂದ ಎರಡು ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಇನ್ನು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್​​ ಕಿಂಗ್ಸ್​​ ಮುಂದಿನ ಪಂದ್ಯ ಆಡಲಿದೆ.

ಇದನ್ನು ಓದಿ: IPL : ಡೆಲ್ಲಿ ಕ್ಯಾಪಿಟಲ್ಸ್​ ಎದುರು ಗುಜರಾತ್​ಗೆ ಹೀನಾಯ ಸೋಲು​ - GT VS DC

ETV Bharat Logo

Copyright © 2024 Ushodaya Enterprises Pvt. Ltd., All Rights Reserved.