ETV Bharat / sports

IPL: ಇಂದು ಪಂಜಾಬ್​ Vs ಮುಂಬೈ ಫೈಟ್​​; ಸೋತ ತಂಡಕ್ಕೆ ಪ್ಲೇ ಆಫ್ ಹಾದಿ ಕಠಿಣ - PBKS VS MI

author img

By ETV Bharat Karnataka Team

Published : Apr 18, 2024, 6:29 PM IST

ಐಪಿಎಲ್​ನ ಇಂದಿನ ಪಂದ್ಯದಲ್ಲಿ ಪಂಜಾಬ್​ ​ಮತ್ತು ಮುಂಬೈ ತಂಡಗಳು ಸೆಣಸಲಿವೆ. ಪಿಚ್​, ಹೆಡ್​ ಟೂ ಹೆಡ್​ ವರದಿ ಇಲ್ಲಿದೆ.

IPL: ಇಂದು ಪಂಜಾಬ್​ ಕಿಂಗ್ಸ್​ Vs ಮುಂಬೈ ಇಂಡಿಯನ್ಸ್​ ಫೈಟ್

ಹೈದರಾಬಾದ್​: ಇಂಡಿಯನ್​ ಪ್ರೀಮಿಯರ್​​ ಲೀಗ್​ನ (ಐಪಿಎಲ್‌) 33ನೇ ಪಂದ್ಯದಲ್ಲಿಂದು ಪಂಜಾಬ್​ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಲಿವೆ. ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್​ ಅಂತಾರಾಷ್ಟ್ರೀಯ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.

ಪ್ರಸಕ್ತ ಋತುವಿನಲ್ಲಿ ಎರಡೂ ತಂಡಗಳು ಈವರೆಗೆ 6 ಪಂದ್ಯಗಳನ್ನಾಡಿದ್ದು 2ರಲ್ಲಿ ಮಾತ್ರ ಗೆಲುವು ಸಾಧಿಸಿವೆ. ಅಂಕಪಟ್ಟಿಯಲ್ಲಿ ಪಂಜಾಬ್​ ಮತ್ತು ಮುಂಬೈ ಕ್ರಮವಾಗಿ 8 ಮತ್ತು 9ನೇ ಸ್ಥಾನದಲ್ಲಿವೆ. ಹಾಗಾಗಿ ಇಂದಿನ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದು. ಉತ್ತಮ ರನ್​ ರೇಟ್​ನಿಂದ ಗೆಲುವು ಸಾಧಿಸುವ ತಂಡ 7ನೇ ಸ್ಥಾನಕ್ಕೆ ತಲುಪಲಿದೆ. ಸೋತ ತಂಡಕ್ಕೆ ಪ್ಲೇ ಆಫ್ ಹಾದಿ ಮತ್ತಷ್ಟು ದುರ್ಗಮ.

ಪಿಚ್​ ವರದಿ: ಮಹಾರಾಜ ಯದವೀಂದ್ರ ಸಿಂಗ್ ಮೈದಾನದಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 3 ಪಂದ್ಯಗಳಾಗಿವೆ. ಇದರಲ್ಲಿ ಎರಡು ಬಾರಿ ಚೇಸಿಂಗ್​ ತಂಡಗಳು ಗೆಲುವು ಸಾಧಿಸಿದ್ದರೆ ಒಂದು ಬಾರಿ ಮಾತ್ರ ಮೊದಲು ಬ್ಯಾಟ್​ ಮಾಡಿದ ತಂಡ ಗೆದ್ದಿದೆ. ಹಿಂದಿನ ಪಂದ್ಯಗಳನ್ನು ಪರಿಗಣಿಸುವುದಾದರೆ ಟಾಸ್​ ಗೆದ್ದ ತಂಡ ಮೊದಲಿಗೆ ಫೀಲ್ಡಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಈ ಪಿಚ್​ನಲ್ಲಿ ವೇಗದ ಬೌಲರ್​ಗಳು ಪ್ರಾಬಲ್ಯ ಹೊಂದಿದ್ದಾರೆ.

ಹೆಡ್​ ಟೂ ಹೆಡ್​: ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಪಂಜಾಬ್​ 15ರಲ್ಲಿ ಗೆದ್ದಿದೆ. ಮುಂಬೈ ವಿರುದ್ಧ ಪಂಜಾಬ್‌ನ ಗರಿಷ್ಠ ಸ್ಕೋರ್ 230 ಆಗಿದ್ದರೆ, ಪಂಜಾಬ್​ ವಿರುದ್ಧ ಮುಂಬೈನ ಗರಿಷ್ಠ ಸ್ಕೋರ್ 223.

ಯಾರು ಅಲಭ್ಯ?: ಪಂಜಾಬ್​ ತಂಡದ ಆರಂಭಿಕ​ ಬ್ಯಾಟರ್​ ಶಿಖರ್​ ಧವನ್​ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಇಂದಿನ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.

ವಿಶೇಷ ದಾಖಲೆ: ಮುಂಬೈ ಇಂಡಿಯನ್ಸ್​ ಮಾಜಿ ನಾಯಕ ರೋಹಿತ್​ ಶರ್ಮಾ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್​ನಲ್ಲಿ 250 ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ನ ನಾಯಕ ಎಂ.ಎಸ್​.ಧೋನಿ ಮೊದಲನೇ ಸ್ಥಾನದಲ್ಲಿದ್ದಾರೆ. ಅವರು ಈವರೆಗೂ 256 ಐಪಿಎಲ್​ ಪಂದ್ಯಗಳನ್ನು ಆಡಿದ್ದಾರೆ.

ಸಂಭಾವ್ಯ ತಂಡಗಳು- ಪಂಜಾಬ್​ ಕಿಂಗ್ಸ್​: ಜಾನಿ ಬೈರ್‌ಸ್ಟೋವ್, ಅಥರ್ವ ಟೈಡೆ, ಸ್ಯಾಮ್ ಕರ್ರನ್ (ನಾ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಅರ್ಷ್‌ದೀಪ್ ಸಿಂಗ್, ಕಗಿಸೋ ರಬಾಡ

ಪ್ರಭಾವಿ ಆಟಗಾರರು: ಪ್ರಭಾಸಿಮ್ರಾನ್ ಸಿಂಗ್/ರಾಹುಲ್ ಚಾಹರ್

ಮುಂಬೈ ಇಂಡಿಯನ್ಸ್​: ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿ.ಕೀ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾ), ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೋ ಶೆಫರ್ಡ್, ಶ್ರೇಯಸ್ ಗೋಪಾಲ್, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ, ಆಕಾಶ್ ಮಧ್ವಲ್.

ಪ್ರಭಾವಿ ಆಟಗಾರರು: ಸೂರ್ಯಕುಮಾರ್ ಯಾದವ್

ಪಂದ್ಯ ಆರಂಭ: 7.30ಕ್ಕೆ

ಇದನ್ನೂ ಓದಿ: IPL 2024: ಪುತ್ರ ಜೋರಾವರ್​ಗಾಗಿ ಭಾವನಾತ್ಮಕ ಸಂದೇಶ ಹಂಚಿಕೊಂಡ ಶಿಖರ್​ ದವನ್ - Dhawan Shares Emotional Note

ETV Bharat Logo

Copyright © 2024 Ushodaya Enterprises Pvt. Ltd., All Rights Reserved.