ETV Bharat / sports

ಐಪಿಎಲ್​ ಟ್ರೋಫಿಗಾಗಿ RRRR ನಡುವೆ ಫೈಪೋಟಿ: ಏನಿದು R ವಿಶೇಷ? - WHAT A WONDER RRRR FIGHT - WHAT A WONDER RRRR FIGHT

ಇಂದಿನಿಂದ ಐಪಿಎಲ್​ನ ಪ್ಲೇಆಫ್​ ಪಂದ್ಯಗಳು ಆರಂಭವಾಗಲಿವೆ. ಪ್ರಶಸ್ತಿ ಸುತ್ತಿಗೆ ಬಂದಿರುವ ನಾಲ್ಕು ತಂಡಗಳಲ್ಲಿ ಒಂದು ಕಾಮನ್ ಪಾಯಿಂಟ್​ ಅಡಗಿದೆ. ಅದೇನಪ್ಪಾ ಅಂದರೆ..

ಐಪಿಎಲ್​ ಟ್ರೋಫಿಗಾಗಿ RRRR ನಡುವೆ ಫೈಪೋಟಿ
ಐಪಿಎಲ್​ ಟ್ರೋಫಿಗಾಗಿ RRRR ನಡುವೆ ಫೈಪೋಟಿ (ETV Bharat)
author img

By ETV Bharat Karnataka Team

Published : May 21, 2024, 6:37 PM IST

ಹೈದರಾಬಾದ್​: ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್​ ಎಸ್ ರಾಜಮೌಳಿ ಅವರ ನಿರ್ದೇಶನದ ಸೂಪರ್​ಹಿಟ್​ ಸಿನಿಮಾ 'ಆರ್​ಆರ್​ಆರ್​' ನೋಡೇ ಇರ್ತೀರಿ. ಈ ಪ್ಯಾನ್​ ಇಂಡಿಯಾ ಸಿನಿಮಾ ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರಿದಿತ್ತು. ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದ ಸಿನಿಮಾ ಸ್ವಾತಂತ್ರ್ಯ ಕಾಲದ ಕಥಾಹಂದರವನ್ನು ಹೊಂದಿತ್ತು.

ಸಿನಿ ಅಭಿಮಾನಿಗಳ ಮನಸ್ಸನ್ನು ಸೂರೆಗೈದಿದ್ದ ಆರ್​ಆರ್​ಆರ್​ ಸಿನಿಮಾಕ್ಕೆ ಟಕ್ಕರ್​ ನೀಡುವಂತೆ 'ಆರ್​ಆರ್​ಆರ್​ಆರ್​' ಸಜ್ಜಾಗಿದೆ. ಇದ್ಯಾವುದು ಹೊಸ ಸಿನಿಮಾ ಅನ್ಕೊಂಡ್ರಾ. ಇದು ಸಿನಿಮಾವಲ್ಲ. ಅದಕ್ಕಿಂತಲೂ ರೋಚಕತೆ ನೀಡುವ ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​)ನ ಪ್ಲೇಆಫ್​ನಲ್ಲಿ ಸ್ಥಾನ ಪಡೆದಿರುವ ತಂಡಗಳ ಹೆಸರು.

ಹೌದು, ಚುಟುಕು ಕ್ರಿಕೆಟ್​ ಕದನದಲ್ಲಿ ಘಟಾನುಘಟಿ ತಂಡಗಳನ್ನು ಬಗ್ಗುಬಡಿದು ಪ್ರಶಸ್ತಿ ಹಂತಕ್ಕೆ ಬಂದಿರುವ ಕೋಲ್ಕತ್ತಾ ನೈಟ್​ ರೈಡರ್ಸ್​(KKR) , ರಾಜಸ್ಥಾನ ರಾಯಲ್ಸ್​(RR), ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB), ಸನ್​ರೈಸರ್ಸ್​ ಹೈದರಾಬಾದ್​(SRH) ತಂಡಗಳ ಹೆಸರಿನಲ್ಲಿ ಕಾಮನ್​ ಪಾಯಿಂಟ್ ಎಂದರೆ ಅದು 'ಆರ್​'. ಈ 'ಆರ್​' ತಂಡಗಳ ನಡುವೆ ಇಂದಿನಿಂದ ಕ್ವಾಲಿಫೈಯರ್​ ಪಂದ್ಯಗಳು ಆರಂಭವಾಗಲಿವೆ.

ಇನ್ನೊಂದು R ನಿಂದ ಪೈಪೋಟಿ: ನಾಲ್ಕು R ತಂಡಗಳ ಜೊತೆಗೆ ಇನ್ನೊಂದು R ಕೂಡ ಸೇರ್ಪಡೆಯಾಗುವ ಸಾಧ್ಯತೆ ಇದೆ. ಮಳೆಯು (R-Rain) ಪ್ಲೇಆಫ್​ ಕಾದಾಟಕ್ಕೆ ಅಡ್ಡಿ ಉಂಟು ಮಾಡುವ ಸಾಧ್ಯತೆ ಇದೆ. ಗುಜರಾತ್​ನ ಅಹಮದಾಬಾದ್​ನಲ್ಲಿ ಮೊದಲ ಕ್ವಾಲಿಫೈಯರ್​ ಮತ್ತು ಎಲಿಮಿನೇಟರ್​ ಪಂದ್ಯಗಳು ನಡೆಯಲಿವೆ. ಎರಡೂ ಪಂದ್ಯಗಳಿಗೆ ಮಳೆ ಭೀತಿ ಉಂಟಾಗಿದೆ. ಈ ಸಾಲಿನ ಐಪಿಎಲ್​ನಲ್ಲಿ R ಗಳ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಪ್ಲೇಆಫ್​ ವೇಳಾಪಟ್ಟಿ ಹೀಗಿದೆ: ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆದ ಕೋಲ್ಕತ್ತಾ - ಹೈದರಾಬಾದ್ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇಂದು (ಮೇ 21) ಸಂಜೆ 7.30ಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇತ್ತಂಡಗಳು ಸೆಣಸಾಟ ನಡೆಸಲಿವೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ ತಲುಪಲಿದೆ. ಸೋತ ತಂಡ ಎರಡನೇ ಕ್ವಾಲಿಫೈಯರ್​ ಆಡುವ ಅವಕಾಶ ಪಡೆಯಲಿದೆ.

ಮೇ 22ರಂದು ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ- ಆರ್‌ಸಿಬಿ ತಂಡಗಳು ಪೈಪೋಟಿ ನಡೆಸಲಿವೆ. ಈ ಪಂದ್ಯವೂ ಸಂಜೆ 7.30ಕ್ಕೆ ಆರಂಭವಾಗಲಿದೆ. ಗೆಲ್ಲುವ ತಂಡ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯುತ್ತದೆ. ಎರಡನೇ ಕ್ವಾಲಿಫೈಯರ್ ಪಂದ್ಯ ಮೇ 24 ರಂದು ಚೆನ್ನೈನಲ್ಲಿ ನಡೆಯಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡ ಎಲಿಮಿನೇಟರ್​ನಲ್ಲಿ ಗೆದ್ದ ತಂಡಗಳ ನಡುವೆ ವಿಜೇತವಾದ ತಂಡ ಫೈನಲ್​ಗೆ ಬರಲಿದೆ. ಮೇ 26ರಂದು ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ಫೈನಲ್ ಫೈಟ್ ನಡೆಯಲಿದೆ.

ಇದನ್ನೂ ಓದಿ: ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ: 3,000ಕ್ಕೂ ಹೆಚ್ಚು ಸಿಬ್ಬಂದಿಯಿಂದ ಭದ್ರತೆ - First Qualifier Match

ETV Bharat Logo

Copyright © 2025 Ushodaya Enterprises Pvt. Ltd., All Rights Reserved.