ETV Bharat / sports

ಮುಂಬೈ ಇಂಡಿಯನ್ಸ್ ಪರ 100 ಸಿಕ್ಸರ್​ ಬಾರಿಸಿದ ಹಾರ್ದಿಕ್ ಪಾಂಡ್ಯ; ಹೊಸ ದಾಖಲೆ - IPL 2024 - IPL 2024

2024ರ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಹೊಸ ನಾಯಕನಾಗಿ ಬಂದ ಆಲ್ ರೌಂಡರ್​ ಹಾರ್ದಿಕ್ ಪಾಂಡ್ಯ ಈವರೆಗೆ 100 ಸಿಕ್ಸರ್ ಸಿಡಿಸಿದ ಮೂರನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.​

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ
author img

By ETV Bharat Karnataka Team

Published : Mar 28, 2024, 4:04 PM IST

ಹೈದರಾಬಾದ್​ : ಬುಧವಾರ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್​ ನಡುವಿನ ಪಂದ್ಯದಲ್ಲಿ ಆನೇಕ ಹೊಸ ದಾಖಲೆಗಳು ಸೃಷ್ಟಿಯಾದವು. ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಪರ 100 ಸಿಕ್ಸರ್​ ಹೊಡೆದ ಮೂರನೇ ಆಟಗಾರನಾಗಿ ಸ್ಟಾರ್​ ಆಲ್​ ರೌಂಡರ್​ ಮತ್ತು ನಾಯಕ ಹಾರ್ದಿಕ್​ ಪಾಂಡ್ಯ ಹೊರಹೊಮ್ಮಿದರು.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ 94ನೇ ಪಂದ್ಯದಲ್ಲಿ ಪಾಂಡ್ಯ ಈ ಸಾಧನೆ ಮಾಡಿದ್ದಾರೆ. ಅಲ್ಲದೆ, ಐಪಿಎಲ್​ ಇತಿಹಾಸದಲ್ಲೇ ಅತಿವೇಗವಾಗಿ (1046 ಎಸೆತಗಳಲ್ಲಿ) 100 ಸಿಕ್ಸರ್​ ಹೊಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾಂಡ್ಯ ಪಾತ್ರರಾಗಿದ್ದಾರೆ. ಇನ್ನೊಂದೆಡೆ ಕೆಕೆಆರ್​ ಆಲ್‌ರೌಂಡರ್ ಆಂಡ್ರೆ ರಸೆಲ್ ಈ ಹೆಗ್ಗುರುತನ್ನು ಕೇವಲ 657 ಎಸೆತಗಳಲ್ಲಿ ಸಾಧಿಸಿದ್ದಾರೆ. ಬಳಿಕ ಮತ್ತೊಬ್ಬ ದಾಂಡಿಗ ಕ್ರಿಸ್ ಗೇಲ್ ಅವರು 943 ಎಸೆತಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ.

ಎಂಐ ಗೆ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು : ಕೆರಿಬಿಯನ್​ ಆಲ್​ ರೌಂಡರ್ ಮತ್ತು ಪ್ರಸ್ತುತ ಮುಂಬೈಗೆ ಬ್ಯಾಟಿಂಗ್ ಕೋಚ್ ಆಗಿರುವ ಕೀರಾನ್ ಪೊಲಾರ್ಡ್ 223 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಆರಂಭಿಕ ಬ್ಯಾಟರ್ ಹಾಗು ಮಾಜಿ ನಾಯಕ​ ರೋಹಿತ್ ಶರ್ಮಾ 210 ಸಿಕ್ಸರ್‌ಗಳನ್ನು ಸಿಡಿಸಿ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಈಗಗಲೇ ಪೊಲಾರ್ಡ್ ಕ್ರಿಕೆಟ್​ನಿಂದ ನಿವೃತ್ತಿ ಆಗಿದ್ದು, 13 ಸಿಕ್ಸರ್ ಬಾರಿಸಿದರೆ​ ರೋಹಿತ್​ ಶರ್ಮಾ ಅವರು ಮುಂಬೈ ಪರ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಆಗ್ರಸ್ಥಾನಕ್ಕೇರಲಿದ್ದಾರೆ. ಟೂರ್ನಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿರುವ ಮುಂಬೈ ಇನ್ನೂ 7 ತಂಡಗಳನ್ನು ಎದುರಿಸಬೇಕಿದೆ.

ಬೌಂಡರಿ ಗಳಿಸಿದ ಆಟಗಾರರ ಅಂಕಿ ಅಂಶ : ಸಿಕ್ಸರ್​ ಅಲ್ಲದೆ ಪಾಂಡ್ಯ ಅವರಿಗೆ 100 ಬೌಂಡರಿಗಳನ್ನು ಪೂರ್ಣಗೊಳಿಸಲು ಕೇವಲ ಒಂದು ಬೌಂಡರಿ ಕೊರತೆಯಿದೆ. ಹಾರ್ದಿಕ್​ ಮುಂಬೈ ಪರ ಒಟ್ಟು 99 ಬೌಂಡರಿಗಳನ್ನು ಗಳಿಸಿದ್ದು, ಪ್ರಸ್ತುತ ಫ್ರಾಂಚೈಸಿಗಾಗಿ ಅತಿ ಹೆಚ್ಚು ಬೌಂಡರಿಗಳನ್ನು ಗಳಿಸಿದವರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ. ರೋಹಿತ್ 466 ಬೌಂಡರಿಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಎಂಐ ಮಾಜಿ ನಾಯಕ, ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ (295), ಸೂರ್ಯಕುಮಾರ್ ಯಾದವ್ (295), ಪೊಲಾರ್ಡ್ (218), ಅಂಬಟಿ ರಾಯುಡು (205), ಇಶಾನ್ ಕಿಶನ್ (188), ಕ್ವಿಂಟನ್ ಡಿ ಕಾಕ್ (120), ಪಾರ್ಥಿವ್ ಪಟೇಲ್ (119), ಲೆಂಡ್ಲ್ ಸಿಮನ್ಸ್ (109) ಮತ್ತು ಕೃನಾಲ್ ಪಾಂಡ್ಯ (105) ಹೀಗೆ ಕ್ರಮಾನುಸಾರವಾಗಿದ್ದಾರೆ.

ಇದನ್ನೂ ಓದಿ : ಐಪಿಎಲ್​ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಿ ಮುಂಬೈ ಮಣಿಸಿದ ಸನ್​ರೈಸರ್ಸ್​: ದಾಖಲೆಗಳು ಹಲವು - Sunrisers Hyderabad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.