ಚೆನ್ನೈ: ಏಕಪಕ್ಷೀಯ ಪಂದ್ಯವಾಗಿ ಕಂಡುಬಂದ ಐಪಿಎಲ್ 2024 ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ 8 ವಿಕೆಟ್ಗಳ ಜಯ ದಾಖಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಬಾರಿಗೆ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಮಿಚೆಲ್ ಸ್ಟಾರ್ಕ್ ಸೇರಿದಂತೆ ಎಲ್ಲ ಬೌಲರ್ಗಳ ಮಾರಕ ದಾಳಿ ಹಾಗೂ ವೆಂಕಟೇಶ್ ಅಯ್ಯರ್ ಅಜೇಯ ಅರ್ಧಶತಕದ ಬಲದಿಂದ ಕೆಕೆಆರ್ ಗೆದ್ದು ಬೀಗಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ನಿರ್ಧಾರ ಫಲಿಸಲಿಲ್ಲ. ಮೊದಲ ಓವರ್ನಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಸನ್‌ರೈಸರ್ಸ್ 18.3 ಓವರ್ಗಳಲ್ಲಿ ಕೇವಲ 113 ರನ್ಗಳಿಗೆ ಆಲೌಟ್ ಆಯಿತು. ಟೂರ್ನಿಯುದ್ದಕ್ಕೂ ಗುಡುಗಿದ್ದ ಸನ್‌ರೈಸರ್ಸ್ ಬ್ಯಾಟರ್ಗಳು ಫೈನಲ್‌ನಲ್ಲಿ ಮಂಕಾದರು. 114 ರನ್‌ಗಳ ಅಲ್ಪ ಮೊತ್ತವನ್ನು 10.3 ಓವರ್ಗಳಲ್ಲೇ ಬೆನ್ನಟ್ಟಿದ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ಇತಿಹಾಸ ಬರೆಯಿತು.
ಈ ಹಿಂದೆ 2012, 2014ರಲ್ಲಿ ಗೌತಮ್ ಗಂಭೀರ್ ನೇತೃತ್ವದಲ್ಲಿ ಕೋಲ್ಕತ್ತಾ ಚಾಂಪಿಯನ್ ಆಗಿತ್ತು. ಈ ವರ್ಷ ಮೆಂಟರ್ ಆಗಿ ಮರಳಿ ಪರ್ಪಲ್ ಆರ್ಮಿ ಸೇರಿದ್ದ ಗಂಭೀರ್, ತಂಡಕ್ಕೆ ಮತ್ತೊಂದು ಪ್ರಶಸ್ತಿ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ಹಲವಾರು ಹೊಸ ಪ್ರತಿಭೆಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಅದರಂತೆ ಶ್ರೇಷ್ಠ ಪ್ರದರ್ಶನ ತೋರಿದ ಆಟಗಾರರಿಗೆ ವಿವಿಧ ಪ್ರಶಸ್ತಿ, ಗೌರವಗಳನ್ನು ನೀಡಲಾಗಿದೆ. ಈ ಕುರಿತಾದ ಮಾಹಿತಿ ಈ ಕೆಳಗಿನಂತಿದೆ.
ಚಾಂಪಿಯನ್ ಪ್ರಶಸ್ತಿ: ಕೋಲ್ಕತ್ತಾ ನೈಟ್ ರೈಡರ್ಸ್ - 20 ಕೋಟಿ ರೂ. ನಗದು ಬಹುಮಾನ
ರನ್ನರ್ಸ್ ಅಪ್: ಸನ್‌ರೈಸರ್ಸ್ ಹೈದರಾಬಾದ್ - 12.5 ಕೋಟಿ ರೂ. ನಗದು
ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್: ಸುನೀಲ್ ನರೈನ್ (482 ರನ್, 17 ವಿಕೆಟ್- ಕೆಕೆಆರ್)
ಎಮರ್ಜಿಂಗ್ ಪ್ಲೇಯರ್: ನಿತೀಶ್ ಕುಮಾರ್ ರೆಡ್ಡಿ
ಆರೆಂಜ್ ಕ್ಯಾಪ್: ವಿರಾಟ್ ಕೊಹ್ಲಿ (741 ರನ್, ಆರ್ಸಿಬಿ)
ಪರ್ಪಲ್ ಕ್ಯಾಪ್: ಹರ್ಷಲ್ ಪಟೇಲ್ (24 ವಿಕೆಟ್, ಪಂಜಾಬ್ ಕಿಂಗ್ಸ್)
ಗೇಮ್ ಚೇಂಜರ್ ಆಫ್ ದಿ ಸೀಸನ್: ಸುನೀಲ್ ನರೈನ್ (ಕೆಕೆಆರ್)
ಇಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್: ಜಾಕ್ ಪ್ರೆಸರ್ ಮಕ್ಗರ್ಕ್
ಪರ್ಫೆಕ್ಟ್ ಕ್ಯಾಚ್ ಆಫ್ ದಿ ಸೀಸನ್: ರಮಣದೀಪ್ ಸಿಂಗ್
ಫೇರ್ಪ್ಲೇ ಅವಾರ್ಡ್: ಸನ್‌ರೈಸರ್ಸ್ ಹೈದರಾಬಾದ್
ಇದನ್ನೂ ಓದಿ: IPL Final: ದಶಕಗಳ ಬಳಿಕ ಚಾಂಪಿಯನ್ ಪಟ್ಟಕೇರಿದ ಕೆಕೆಆರ್ - KKR won the IPL trophy