ETV Bharat / sports

ಸಿಕ್ಸರ್, ಬೌಂಡರಿಗಳ ಸುರಿಮಳೆಗೈದ ಕೆಕೆಆರ್​ ಬ್ಯಾಟರ್ಸ್: ಡೆಲ್ಲಿಗೆ 273 ರನ್​ಗಳ ಬೃಹತ್ ಟಾರ್ಗೆಟ್​! - Kolkata Knight Riders - KOLKATA KNIGHT RIDERS

ಆಂಧ್ರಪ್ರದೇಶದ ವಿಶಾಖಪಟ್ಟಣಂ ಕ್ರೀಡಾಂಗಣದಲ್ಲಿ ಕೆಕೆಆರ್​ ಬ್ಯಾಟರ್​ಗಳು ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆ ಸುರಿಸಿದ್ದಾರೆ. ಐಪಿಎಲ್​ ಇತಿಹಾಸದಲ್ಲೇ ಎರಡನೇ ಅತ್ಯಧಿಕ ಸ್ಕೋರ್​ ದಾಖಲಿಸಿದ್ದಾರೆ.

IPL 2024 16th Match; Delhi Capitals vs Kolkata Knight Riders
ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿದ ಕೆಕೆಆರ್​ ಬ್ಯಾಟರ್​ಗಳು: ಡೆಲ್ಲಿಗೆ 273 ರನ್​ಗಳ ಬೃಹತ್ ಟಾರ್ಗೆಟ್​
author img

By ETV Bharat Karnataka Team

Published : Apr 3, 2024, 10:33 PM IST

Updated : Apr 3, 2024, 11:03 PM IST

ವಿಶಾಖಪಟ್ಟಣಂ(ಆಂಧ್ರಪ್ರದೇಶ): ಐಪಿಎಲ್​ ಟೂರ್ನಿಯ ಇತಿಹಾಸದಲ್ಲೇ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ ಇಂದು ಹೊಸ ದಾಖಲೆ ನಿರ್ಮಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 272 ರನ್​ಗಳನ್ನು ಕೆಕೆಆರ್​ ಬ್ಯಾಟರ್​ಗಳು ಪೇರಿಸಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಎರಡನೇ ಬಾರಿಗೆ ಅತ್ಯಧಿಕ ರನ್​ ಬಾರಿಸಿದ ತಂಡವಾಗಿ ಕೋಲ್ಕತ್ತಾ ಹೊರಹಮ್ಮಿದೆ. ಇದೇ ಆವೃತ್ತಿಯಲ್ಲಿ ಮುಂಬೈ ವಿರುದ್ಧ ಹೈದರಾಬಾದ್​ ತಂಡ 277 ರನ್​ಗಳನ್ನು ಹೊಡೆದು ಅತೀ ಹೆಚ್ಚು ರನ್ ದಾಖಲೆ ಬರೆದಿತ್ತು.

ಇಂದು ವಿಶಾಖಪಟ್ಟಣಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್​ ಆಯ್ದುಕೊಂಡರು. ಆರಂಭದಲ್ಲೇ ಬ್ಯಾಟರ್​ಗಳು ಡೆಲ್ಲಿ ಬೌಲರ್​​ಗಳ ಮೇಲೆ ದಂಡೆತ್ತಿ ಹೋದರು. ಆರಂಭಿಕರಾದ ಫಿಲಿಪ್​ ಸಾಲ್ಟ್​ ಮತ್ತು ಸುನಿಲ್ ನರೈನ್​ ಮೊದಲ ವಿಕೆಟ್​ಗೆ 4.3 ಓವರ್​​ಗಳಲ್ಲೇ 60 ರನ್​ ಬಾರಿಸಿ ಉತ್ತಮ ಆರಂಭ ಒದಗಿಸಿದರು.

18 ರನ್​ ಗಳಿಸಿದ್ದ ಫಿಲಿಪ್​ ಸಾಲ್ಟ್ ವಿಕೆಟ್​ ಪಡೆಯುವ ಮೂಲಕ ಅನ್ರಿಚ್ ನಾರ್ಟ್ಜೆ ಈ ಜೋಡಿಯನ್ನು ಬೇರ್ಪಡಿಸಿದರು. ನಂತರ ಸುನಿಲ್ ನರೈನ್ ಜತೆಗೂಡಿದ ಅಂಗ್​ಕ್ರಿಶ್ ರಘುವಂಶಿ ಕೂಡ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶಿಸಿದರು. ಹೊಡಿ-ಬಡಿ ಆಟದ ಮೊರೆಹೋದ ಈ ಇಬ್ಬರು ಆಟಗಾರರು ಎರಡನೇ ವಿಕೆಟ್​ಗೆ 104 ರನ್​ಗಳ ಜತೆಯಾಟ ನೀಡಿದರು. ಅದರಲ್ಲೂ, ಸುನಿಲ್ ನರೈನ್ ಕೇವಲ 39 ಎಸೆತಗಳಲ್ಲಿ ತಲಾ ಏಳು ಸಿಕ್ಸರ್​, ಬೌಂಡರಿಗಳ ಸಮೇತವಾಗಿ 85 ರನ್​ ಸಿಡಿಸಿ ವಿಕೆಟ್​ ಒಪ್ಪಿಸಿದರು.

ಮತ್ತೊಂದೆಡೆ, ರಘುವಂಶಿ 27 ಬಾಲ್​ಗಳನ್ನು ಎದುರಿಸಿ ಮೂರು ಸಿಕ್ಸರ್​, ಐದು ಬೌಂಡರಿಗಳ ಸಮೇತ 54 ರನ್​ ಬಾರಿಸಿ ನಿರ್ಗಮಿಸಿದರು. ನರೈನ್ ಬಳಿಕ ಬಂದ ಆಂಡ್ರೆ ರಸೆಲ್ ಸಹ ಡೆಲ್ಲಿ ಬೌಲರ್​ಗಳ ಬೆವರಿಳಿಸಿದರು. ಇದರಿಂದ 15.2 ಓವರ್​ಗಳಲ್ಲೇ ಕೋಲ್ಕತ್ತಾ ತಂಡ 200 ರನ್​ಗಳ ಗಡಿ ದಾಡಿತು. ನಾಯಕ ಶ್ರೇಯಸ್​ ಅಯ್ಯರ್​ 18 ರನ್​ಗೆ ಸೀಮಿತವಾದರು. ರಿಂಕು ಸಿಂಗ್​ 8 ಬಾಲ್​ಗಳಲ್ಲಿ ಮೂರು ಸಿಕ್ಸರ್​, ಒಂದು ಬೌಂಡರಿಯೊಂದಿಗೆ 26 ರನ್​ ಬಾರಿಸಿದರು. ರಸೆಲ್ 19 ಎಸೆತಗಳಲ್ಲಿ ಮೂರು ಸಿಕ್ಸರ್​, ನಾಲ್ಕು ಬೌಂಡರಿಗಳೊಂದಿಗೆ 41 ರನ್​ ಸೇರಿಸಿದರು.

ವೆಂಕಟೇಶ್ ಅಯ್ಯರ್​ (5 ಅಜೇಯ), ರಮನ್​ದೀಪ್ ಸಿಂಗ್​ (2), ಮಿಚೆಲ್ ಸ್ಟಾರ್ಕ್ ಅಜೇಯ 1 ರನ್​ ಕೊಡುಗೆ ನೀಡಿದರು. ಇದರೊಂದಿಗೆ ಅಂತಿಮವಾಗಿ ಕೆಕೆಆರ್​ ನಿಗದಿತ 20 ಓವರ್​ಗಳಲ್ಲಿ ಏಳು ವಿಕೆಟ್​ ನಷ್ಟಕ್ಕೆ 272 ರನ್​ಗಳ ಪೇರಿಸಿ, ಎದುರಾಳಿ ತಂಡಕ್ಕೆ 273 ರನ್​ಗಳು ಗುರಿ ನೀಡಿತು. ಇಡೀ ಇನ್ನಿಂಗ್ಸ್​ನಲ್ಲಿ ಕೋಲ್ಕತ್ತಾ ಬ್ಯಾಟರ್​ಗಳು 18 ಸಿಕ್ಸರ್​ಗಳ ಸುರಿಮಳೆ ಸುರಿಸಿದರು.

ಡೆಲ್ಲಿ ಪರ ಅನ್ರಿಚ್ ನಾರ್ಟ್ಜೆ 59 ರನ್​ ನೀಡಿ 3 ವಿಕೆಟ್​ ಪಡೆದರೆ, ಇಶಾಂತ್ ಶರ್ಮಾ 3 ಓವರ್​ಗಳಲ್ಲಿ 43 ವಿಕೆಟ್​ಗೆ 2 ವಿಕೆಟ್ ಕಬಳಿಸಿದರು. ಮಿಚೆಲ್ ಮಾರ್ಷ್, ಖಲೀಲ್ ಅಹಮದ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: ದೇಶದೊಳಗೆ 300 ಟಿ-20 ಪಂದ್ಯಗಳನ್ನು ಆಡಿದ ದಿನೇಶ್​ ಕಾರ್ತಿಕ್​ ಅಪರೂಪದ ದಾಖಲೆ

Last Updated : Apr 3, 2024, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.