ಪ್ಯಾರಿಸ್ (ಫ್ರಾನ್ಸ್): ಬುಧವಾರ ರಾತ್ರಿ ನಡೆದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಸ್ಟಾರ್ ಷಟ್ಲರ್ ಎಚ್.ಎಸ್.ಪ್ರಣಯ್ 16-21, 21-11, 21-12 ಅಂತರದಿಂದ ವಿಯೆಟ್ನಾಂನ್ ಲೆ ಡಕ್ ಫಾಟ್ ವಿರುದ್ಧ ಗೆಲುವು ಸಾಧಿಸಿದರು. ಈ ಗೆಲುವಿನೊಂದಿಗೆ ಪ್ರೀ-ಕ್ವಾರ್ಟರ್ ಫೈನಲ್ಗೂ ಪ್ರವೇಶಿಸಿದರು. ಇದೀಗ ಅವರು 16ನೆ ಸುತ್ತಿನಲ್ಲಿ ಭಾರತದ ಲಕ್ಷ್ಯ ಸೇನ್ ಅವರನ್ನು ಎದುರಿಸಲಿದ್ದಾರೆ, ಈ ಪಂದ್ಯ ಇಂದು ಸಂಜೆ 5:40ಕ್ಕೆ ನಡೆಯಲಿದೆ.
An all-Indian clash!!! 🥶
— JioCinema (@JioCinema) July 31, 2024
Lakshya Sen & HS Prannoy will go head-to-head in a thrilling R16 match tomorrow 🏸
Catch all the action from this mouthwatering clash LIVE on #Sports18 and stream for FREE on #JioCinema! 👈#OlympicsOnJioCinema #OlympicsOnSports18 #JioCinemaSports… pic.twitter.com/qnt7trWlFO
ನಿನ್ನೆ ರಾತ್ರಿ ಲಾ ಚಾಪೆಲ್ಲೆ ಅರೆನಾದಲ್ಲಿ ನಡೆದ ಪಂದ್ಯದಲ್ಲಿ 13ನೇ ಶ್ರೇಯಾಂಕಿತ ಆಟಗಾರ ಪ್ರಣಯ್, 62 ನಿಮಿಷಗಳಲ್ಲಿ ಶ್ರೇಯಾಂಕ ರಹಿತ ವಿಯೆಟ್ನಾಂ ಎದುರಾಳಿಯನ್ನು ಸುಲಭವಾಗಿ ಮಣಿಸಿದರು. ಕಳೆದ ವರ್ಷ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ 32ರ ಹರೆಯದ ಭಾರತದ ಷಟ್ಲರ್ ಒಲಿಂಪಿಕ್ಸ್ನ ಮೊದಲ ಪಂದ್ಯದಲ್ಲಿ ಅನಿರೀಕ್ಷಿತ ಸೋಲು ಎದುರಿಸಬೇಕಾಯಿತು. ಆದಾಗ್ಯೂ, ಪ್ರಣಯ್ ಬಲವಾದ ಪುನರಾಗಮನ ಮಾಡಿ ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ಗೆಲುವು ಸಾಧಿಸಿದರು.
ಪ್ರಣಯ್ Vs ಲಕ್ಷ್ಯ ಫೈಟ್: ಮತ್ತೊಂದೆಡೆ ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್ ಕೂಡ 21-18, 21-12 ಅಂತರದಿಂದ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರನ್ನು ಸೋಲಿಸಿ ಪ್ರೀ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಇದೀಗ ಇಂದು ನಡೆಯಲಿರುವ 16ರ ಘಟ್ಟದ ಪಂದ್ಯದಲ್ಲಿ ಭಾರತದ ಈ ಇಬ್ಬರು ಸ್ಟಾರ್ ಷಟ್ಲರ್‌ಗಳು ಮುಖಾಮುಖಿಯಾಗಲಿದ್ದಾರೆ. ಈ ಪಂದ್ಯದಲ್ಲಿ ಯಾರೇ ಸೋತರು ಅವರ ಒಲಿಂಪಿಕ್ ಅಭಿಯಾನ ಕೊನೆಗೊಳ್ಳಲಿದೆ.
ಪ್ರಣಯ್ Vs ಲಕ್ಷ್ಯ ಹೆಡ್ ಟು ಹೆಡ್: ಭಾರತದ ಅನುಭವಿ ಶಟ್ಲರ್ ಎಚ್ ಎಸ್ ಪ್ರಣಯ್ ಮತ್ತು ಯುವ ತಾರೆ ಲಕ್ಷ್ಯ ಸೇನ್ ಇದೂವರೆಗೆ 7 ಬಾರಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ಲಕ್ಷ್ಯ ಸೇನ್ ಮುನ್ನಡೆ ಸಾಧಿಸಿದ್ದಾರೆ. ಇವರಿಬ್ಬರ ನಡುವೆ ಆಡಿದ ಒಟ್ಟು 7 ಪಂದ್ಯಗಳಲ್ಲಿ ಲಕ್ಷ್ಯ ಸೇನ್ 4 ಬಾರಿ ಗೆಲುವು ಸಾಧಿಸಿದ್ದರೇ, ಪ್ರಣಯ್ ಮೂರು ಬಾರಿ ಗೆದ್ದಿದ್ದಾರೆ.
ಈ ಇಬ್ಬರೂ ಕೊನೆಯ ಬಾರಿಗೆ 2022 ರಂದು ನಡೆದ ಇಂಡಿಯಾ ಓಪನ್ ಬ್ಯಾಡ್ಮಿಂಟನ್ನಲ್ಲಿ ಮುಖಾಮುಖಿಯಾಗಿದ್ದರು. ಇದರಲ್ಲಿ ಲಕ್ಷ್ಯ ಸೇನ್ 21-14, 9-21, 14-21 ಅಂತರದಿಂದ ಪ್ರಣಯ್ ವಿರುದ್ಧ ಗೆಲುವು ಸಾಧಿಸಿದ್ದರು. ಹಾಗಾಗಿ ಇಂದು ಇಬ್ಬರು ಶಟ್ಲರ್‌ಗಳ ನಡುವೆ ಕಠಿಣ ಪೈಪೋಟಿ ಏರ್ಪಡಲಿದೆ.
ಇದನ್ನೂ ಓದಿ: ಕರಾವಳಿ ಜಿಂಕೆಗೆ ಸಿಗುವುದೇ ಚಿನ್ನದ ಗರಿ?: ಪ್ಯಾರಿಸ್ ಒಲಿಂಪಿಕ್ನಲ್ಲಿ ಕರ್ನಾಟಕದ ಅಥ್ಲಿಟಿಕ್ ಪೂವಮ್ಮ! - Poovamma