ETV Bharat / sports

ಒಲಿಂಪಿಕ್ಸ್‌ ಹಾಕಿ: 52 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಭಾರತ - Indian Hockey Team Beats Australia

author img

By ETV Bharat Sports Team

Published : Aug 2, 2024, 10:03 PM IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಂದು ಭಾರತ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿತು.

INDIAN HOCKEY TEAM  AUSTRALIAN HOCKEY TEAM  PARIS 2024 OLYMPICS  OLYMPICS 2024
ಭಾರತ ಹಾಕಿ ತಂಡ (AP)

ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದೆ. ಕೊನೆಯ ಗುಂಪಿನ ಪಂದ್ಯದಲ್ಲಿ ಭಾರತ 3-2 ಗೋಲುಗಳಿಂದ ಜಯಭೇರಿ ಬಾರಿಸಿತು. ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಒಲಿಂಪಿಕ್ಸ್​ನಲ್ಲಿ ಭಾರತದ 52 ವರ್ಷಗಳ ಗೆಲುವಿನ ಬರ ನೀಗಿತು. 1972ರಲ್ಲಿ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿತ್ತು.

ಭಾರತ ಆಗಸ್ಟ್ 4ರಂದು ಕ್ವಾರ್ಟರ್ ಫೈನಲ್‌ನಲ್ಲಿ ಸ್ಪರ್ಧಿಸಲಿದೆ. ‘ಎ’ ಗುಂಪಿನ ಮೂರನೇ ಸ್ಥಾನದಲ್ಲಿರುವ (ಎ3) ತಂಡದೊಂದಿಗೆ ಪೈಪೋಟಿ ನಡೆಸಲಿದೆ. ಎ ಗುಂಪಿನಲ್ಲಿ ಜರ್ಮನಿ ಮತ್ತು ಬ್ರಿಟನ್ ಎರಡು ಮತ್ತು ಮೂರನೇ ಸ್ಥಾನ ಗಳಿಸಬಹುದು. ನೆದರ್ಲ್ಯಾಂಡ್ಸ್ ಮತ್ತು ಸ್ಪೇನ್ ಕೂಡ ಎ ಗುಂಪಿನಿಂದ ಕ್ವಾರ್ಟರ್ ಫೈನಲ್ ತಲುಪಿವೆ. ನಾಲ್ಕೂ ಪಂದ್ಯಗಳನ್ನು ಗೆಲ್ಲುವ ಮೂಲಕ ಬೆಲ್ಜಿಯಂ ಈ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ (10) ಎರಡನೇ ಸ್ಥಾನದಲ್ಲಿದೆ, ಆಸ್ಟ್ರೇಲಿಯಾ (9) ಮೂರನೇ ಮತ್ತು ಅರ್ಜೆಂಟೀನಾ (7) ನಾಲ್ಕನೇ ಸ್ಥಾನದಲ್ಲಿದೆ.

ಮೊದಲ ಕ್ವಾರ್ಟರ್‌ನ 12ನೇ ನಿಮಿಷದಲ್ಲಿ ಭಾರತ ಗೋಲು ದಾಖಲಿಸಿತು. ಇದು ಪಂದ್ಯದ ಮೊದಲ ಗೋಲಾಯಿತು. ಇದರೊಂದಿಗೆ ಭಾರತ 1-0 ಮುನ್ನಡೆ ಸಾಧಿಸಿತ್ತು. ಒಂದು ನಿಮಿಷದ ನಂತರ ತಂಡ ಮತ್ತೊಂದು ಗೋಲು ಗಳಿಸಿತು. ಸುರ್ಜೀತ್ ಮತ್ತು ಗುರ್ಜಂತ್ ಪೆನಾಲ್ಟಿ ಕಾರ್ನರ್ ನೀಡಿದರು. ಅದರ ಮೇಲೆ ನಾಯಕ ಹರ್ಮನ್ಪ್ರೀತ್ ಸಿಂಗ್ ಗೋಲು ಗಳಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಹರ್ಮನ್ ಅಬ್ಬರದ ಹೊಡೆತ ಆಸ್ಟ್ರೇಲಿಯಾದ ಗೋಲ್‌ಕೀಪರ್‌ನ ಎಡಭಾಗದ ಗೋಲ್‌ಪೋಸ್ಟ್‌ ಸೇರಿತು.

ಎರಡನೇ ಕ್ವಾರ್ಟರ್‌ನ ಆರಂಭದಲ್ಲಿ ಭಾರತದ ವಿವೇಕ್‌ಗೆ ಗ್ರೀನ್‌ ಕಾರ್ಡ್‌ ತೋರಿಸಲಾಯಿತು. ಐದು ನಿಮಿಷಗಳ ಕಾಲ ಅವರು ಮೈದಾನದಿಂದ ಹೊರಗಿದ್ದರು. 19ನೇ ನಿಮಿಷದಲ್ಲಿ ಆಸ್ಟ್ರೇಲಿಯಾಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ, ಗೋಲು ಗಳಿಸಲು ಸಾಧ್ಯವಾಗಲಿಲ್ಲ. 25ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಗೋಲು ಗಳಿಸುವ ಯತ್ನ ಫಲ ನೀಡಿತು. ಥಾಮಸ್ ಕ್ರೇಗ್ ಗೋಲು ಗಳಿಸುವ ಮೂಲಕ ಭಾರತದ ಮುನ್ನಡೆಯನ್ನು ತಗ್ಗಿಸಿದರು. ಪಂದ್ಯದ ಎರಡನೇ ಕ್ವಾರ್ಟರ್ ಅಂತ್ಯದವರೆಗೆ ಭಾರತ 2-1 ಮುನ್ನಡೆಯಲ್ಲಿತ್ತು.

ಮೂರನೇ ಗೋಲು ಗಳಿಸಿದ ಭಾರತ: ಮೂರನೇ ಕ್ವಾರ್ಟರ್​ನ ಆರಂಭ ಚುರುಕಿನಿಂದ ಶುರುವಾಗಿತ್ತು. ಮೊದಲ ನಿಮಿಷದಲ್ಲಿ ಆಸ್ಟ್ರೇಲಿಯಾ ಗೋಲು ಗಳಿಸಲು ಪ್ರಯತ್ನಿಸಿದ್ರೂ ಸಾಧ್ಯವಾಗಲಿಲ್ಲ. ಭಾರತ ತಕ್ಷಣವೇ ಪ್ರತಿದಾಳಿ ನಡೆಸಿ ಪೆನಾಲ್ಟಿ ಕಾರ್ನರ್ ಗೆದ್ದುಕೊಂಡಿತು. ಈ ಪೆನಾಲ್ಟಿ ಕಾರ್ನರ್ ಉಳಿಸುವಲ್ಲಿ ಆಸ್ಟ್ರೇಲಿಯಾ ಎಡವಿತು. ಹರ್ಮನ್‌ಪ್ರೀತ್ ಹೊಡೆತ ಆಸ್ಟ್ರೇಲಿಯಾದ ಡಿಫೆಂಡರ್‌ನ ಕಾಲಿಗೆ ತಗುಲಿದ್ದು, ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್ ಸಿಕ್ಕಿತು. ಈ ಮೂಲಕ ಹರ್ಮನ್‌ಪ್ರೀತ್ ಗೋಲು ಬಾರಿಸಿ ಭಾರತವನ್ನು 3-1 ಅಂತರದಿಂದ ಮುನ್ನಡೆಸಿದರು. ಇದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಅವರ ಆರನೇ ಗೋಲು. ಮೂರನೇ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾ ಕಡೆಯ ಕ್ಷಣದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತು. ಇದರ ಮೇಲೆ ನೇರ ಗೋಲು ಗಳಿಸುವ ಪ್ರಯತ್ನ ಮಾಡಲಿಲ್ಲ. ಅವರು ಪರೋಕ್ಷ ಗುರಿಯತ್ತ ಹೋದರು. ಆದರೆ ಈ ಬಾರಿಯೂ ಯಶಸ್ಸು ಸಿಗಲಿಲ್ಲ.

ಎರಡನೇ ಗೋಲು ಬಾರಿಸಿದ ಆಸ್ಟ್ರೇಲಿಯಾ: ನಾಲ್ಕನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಪರಸ್ಪರ ತೀವ್ರ ದಾಳಿ ನಡೆಸಿದವು. ಈ ಕೊನೆಯ ಕ್ವಾರ್ಟರ್‌ನ 8ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕರೂ ಅದನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ನಾಲ್ಕನೇ ಕ್ವಾರ್ಟರ್‌ನಲ್ಲಿ ಪುನರಾಗಮನ ಮಾಡಲು ಆಸ್ಟ್ರೇಲಿಯಾದ ಪ್ರಯತ್ನಗಳು ಫಲ ನೀಡಿದವು. ಅವರು ಎರಡನೇ ಗೋಲು ಗಳಿಸಿದರು. ಪೆನಾಲ್ಟಿ ಸ್ಟ್ರೋಕ್ ಮೂಲಕ ಆಸ್ಟ್ರೇಲಿಯಾ ಈ ಗೋಲು ದಾಖಲಿಸಿತು. ಈ ಮೂಲಕ ಸ್ಕೋರ್ 3-2 ಆಯಿತು. ಇದಾದ ಬಳಿಕ ಆಸ್ಟ್ರೇಲಿಯಾ ತಂಡ ಸಮಬಲ ಸಾಧಿಸಲು ಸಾಕಷ್ಟು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಕೊನೆಯದಾಗಿ, ಸಮಯದ ಘಂಟೆ ಬಾರಿಸಿದಾಗ ಸ್ಕೋರ್ ಭಾರತದ ಪರವಾಗಿ 3-2 ಆಗಿತ್ತು.

ಇದನ್ನೂ ಓದಿ: ಒಲಿಂಪಿಕ್ಸ್‌ 25 ಮೀ ಪಿಸ್ತೂಲ್ ಸ್ಪರ್ಧೆ: ಫೈನಲ್‌ಗೇರಿದ ಮನು ಭಾಕರ್; ಹ್ಯಾಟ್ರಿಕ್‌ ಪದಕದತ್ತ ಚಿತ್ತ! - Manu Bhaker

ETV Bharat Logo

Copyright © 2024 Ushodaya Enterprises Pvt. Ltd., All Rights Reserved.