ETV Bharat / sports

ವಿರಾಟ್​ ಕೊಹ್ಲಿ, ಧೋನಿ ಅಲ್ಲವೇ ಅಲ್ಲ: ಈ ಕ್ರಿಕೆಟರ್​ ಬಳಿ ಇದೆ ಅತ್ಯಂತ ದುಬಾರಿ ಕಾರು! - CRICKETERS WITH MOST EXPENSIVE CARS

ವಿರಾಟ್​ ಕೊಹ್ಲಿ, ಧೋನಿಗಿಂತಲೂ ಈ ಕ್ರಿಕೆಟರ್​ ಅತ್ಯಂತ ದುಬಾರಿ ಬೆಲೆಯ ಕಾರು ಹೊಂದಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಎಮ್​ಎಸ್​ಧೋನಿ
ವಿರಾಟ್​ ಕೊಹ್ಲಿ ಮತ್ತು ​ಧೋನಿ (IANS)
author img

By ETV Bharat Sports Team

Published : Oct 21, 2024, 8:02 PM IST

Updated : Oct 21, 2024, 10:18 PM IST

ಹೈದರಾಬಾದ್​: ಭಾರತೀಯ ಕ್ರಿಕೆಟಿಗರು​ ಮೈದಾದಲ್ಲಿನ ಆಟಕ್ಕೆ ಮಾತ್ರವಲ್ಲದೇ ಹೊರಗಿನ ಜೀವನ ಶೈಲಿಯಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇತರೆ ದೇಶದ ಆಟಗಾರರಿಗೆ ಹೋಲಿಸಿದರೆ ಭಾರತೀಯ ಕ್ರಿಕೆಟಿಗರು ಹೆಚ್ಚು ಐಷಾರಾಮಿ ಜೀವನ ನಡೆಸುತ್ತಾರೆ. ಅದರಲ್ಲೂ ಭಾರತೀಯ ಕೆಲ ಕ್ರಿಕೆಟಿಗರಿಗೆ ಕಾರುಗಳೆಂದರೆ ಎಲ್ಲಿಲ್ಲದ ಹುಚ್ಚು. ಇದಕ್ಕಾಗಿ ಕೋಟ್ಯಂತರ ಬೆಲೆ ವ್ಯಯಿಸಿ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿರುತ್ತಾರೆ.

ಆದರೆ ನಿಮಗೆ ಗೊತ್ತಾ? ಅತ್ಯಂತ ದುಬಾರಿ ಕಾರುಗಳಲ್ಲಿ ಓಡಾಡುವ ಟಾಪ್ 10 ಭಾರತೀಯ ಕ್ರಿಕೆಟಿಗರ ಯಾರು ಮತ್ತು ಅವುಗಳ ಬೆಲೆ ಎಷ್ಟು ಅಂತ?.

ಸಚಿನ್​ ತೆಂಡೂಲ್ಕರ್​
ಸಚಿನ್​ ತೆಂಡೂಲ್ಕರ್​ (AFP)

ಸಚಿನ್​ ತೆಂಡೂಲ್ಕರ್​: ವಿಶ್ವದ ಶ್ರೇಷ್ಠ ಕ್ರಿಕೆಟಿಗ ಮತ್ತು ಮಾಸ್ಟರ್ ಬ್ಲಾಸ್ಟರ್ ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅತ್ಯಂತ ದುಬಾರಿ ಕಾರು ಓಡಿಸುವ ಭಾರತೀಯ ಕ್ರಿಕೆಟಿಗರಾಗಿದ್ದಾರೆ. ಈ ಲಿಟ್ಲ್ ಮಾಸ್ಟರ್ಸ್ ಗ್ಯಾರೇಜ್‌ನಲ್ಲಿರುವ ಅತ್ಯಂತ ದುಬಾರಿ ಕಾರು ಲಂಬೋರ್ಗಿನಿ ಉರಸ್ ಎಸ್ ಆಗಿದೆ. ಇದರ ಬೆಲೆ 4.18 ಕೋಟಿ ರೂ ಆಗಿದೆ. ಅಲ್ಲದೆ, ಸಚಿನ್ BMW i8ನಂತಹ ಐಷಾರಾಮಿ ಕಾರು ಕೂಡ ಹೊಂದಿದ್ದಾರೆ. ಇದರ ಆರಂಭಿಕ ಬೆಲೆ 2.62 ಕೋಟಿ ರೂ ಆಗಿದೆ.

ಕೆ.ಎಲ್.ರಾಹುಲ್: ಟೀಂ ಇಂಡಿಯಾದ ಸ್ಟಾರ್​ ಬ್ಯಾಟರ್ ಮತ್ತು ಕನ್ನಡಿಗ​ ಕೆ.ಎಲ್.ರಾಹುಲ್ ಕೂಡ ದುಬಾರಿ ಕಾರುಗಳನ್ನು ಇಷ್ಟಪಡುತ್ತಾರೆ. ರಾಹುಲ್ ಒಡೆತನದಲ್ಲಿರುವ ಅತ್ಯಂತ ದುಬಾರಿ ಕಾರು ಲಂಬೋರ್ಗಿನಿ ಹುರಾಕನ್ ಸ್ಪೈಡರ್ ಆಗಿದೆ. ಇದರ ಮೌಲ್ಯ ₹4.10 ಕೋಟಿ ಆಗಿದೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (IANS)

ವಿರಾಟ್ ಕೊಹ್ಲಿ: ಅತಿ ಹೆಚ್ಚು ನಿವ್ವಳ ಮೌಲ್ಯ ಹೊಂದಿರುವ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್​ ಕೊಹ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಹೊಂದಿರುವ ದುಬಾರಿ ಕಾರು ಬೆಂಟ್ಲಿ ಕಾಂಟಿನೆಂಟಲ್ ಜಿಟಿಯಾಗಿದ್ದು, ಇದು ₹4.04 ಕೋಟಿ ರೂ ಬೆಲೆಯದ್ದಾಗಿದೆ. 35 ವರ್ಷ ವಯಸ್ಸಿನ ಕೊಹ್ಲಿ ಗ್ಯಾರೇಜ್‌ನಲ್ಲಿ ಔಡಿ R8 V10 LMX ಅನ್ನು ಹೊಂದಿದ್ದು, ಇದರ ಬೆಲೆ ₹3 ಕೋಟಿ ರೂ. ಇದೆ. ಸಧ್ಯ ವಿರಾಟ್ ಆಡಿ ಇಂಡಿಯಾದ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

ಶಿಖರ್ ಧವನ್: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಕೂಡ ದುಬಾರಿ ಕಾರುಗಳಲ್ಲಿ ಓಡಾಡುತ್ತಾರೆ. ಗಬ್ಬರ್ ಎಂದೇ ಖ್ಯಾತಿ ಪಡೆದಿರುವ ಈ ಎಡಗೈ ಬ್ಯಾಟ್ಸ್‌ಮನ್, ರೇಂಜ್ ರೋವರ್ ಆಟೋಬಯೋಗ್ರಫಿ SUV ಕಾರನ್ನು ಹೊಂದಿದ್ದಾರೆ. ಇದು ₹4 ಕೋಟಿ ಮೌಲ್ಯದ್ದಾಗಿದೆ. ಧವನ್ ಅವರ ಬಳಿ ₹2 ಕೋಟಿ ಬೆಲೆಯ ಬಿಎಂಡಬ್ಲ್ಯು ಎಂ8 ಕಾರು ಕೂಡ ಇದೆ.

ವೀರೇಂದ್ರ ಸೆಹ್ವಾಗ್: ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಐಷಾರಾಮಿ ಜೀವನಶೈಲಿ ನಡೆಸುತ್ತಾರೆ. ಸೆಹ್ವಾಗ್ ಒಡೆತನದ ಅತ್ಯಂತ ದುಬಾರಿ ಕಾರು ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಆಗಿದ್ದು, ₹3.74 ಕೋಟಿ ರೂ ಬೆಲೆಯದಾಗಿದೆ.

ಹಾರ್ದಿಕ್​ ಪಾಂಡ್ಯ
ಹಾರ್ದಿಕ್​ ಪಾಂಡ್ಯ (IANS)

ಹಾರ್ದಿಕ್ ಪಾಂಡ್ಯ: ಭಾರತದ ಸ್ಟೈಲಿಶ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ದುಬಾರಿ ವಾಚ್‌ಗಳ ಜೊತೆಗೆ ದುಬಾರಿ ಕಾರುಗಳನ್ನು ತುಂಬಾ ಇಷ್ಟಪಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಪಾಂಡ್ಯ ಒಡೆತನದಲ್ಲಿರುವ ಅತ್ಯಂತ ದುಬಾರಿ ಕಾರು ಲಂಬೋರ್ಗಿನಿ ಹ್ಯುರಾಕನ್ ಇವೊ ಆಗಿದ್ದು, ಇದರ ಬೆಲೆ ₹3.73 ಕೋಟಿ ರೂ ಆಗಿದೆ.

ಯುವರಾಜ್​ ಸಿಂಗ್​
ಯುವರಾಜ್​ ಸಿಂಗ್​ (IANS)

ಯುವರಾಜ್ ಸಿಂಗ್: ಭಾರತ ಟಿ20 ಮತ್ತು ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ಗ್ಯಾರೇಜ್‌ನಲ್ಲಿ ಹಲವು ದುಬಾರಿ ಕಾರುಗಳಿವೆ. ಅದರಲ್ಲಿ ಅತ್ಯಂತ ದುಬಾರಿ ಕಾರು ಲಂಬೋರ್ಗಿನಿ ಮುರ್ಸಿಲಾಗೊ ಆಗಿದ್ದು ಇದರ ಬೆಲೆ ₹3.6 ಕೋಟಿ ರೂ.

ಇದನ್ನೂ ಓದಿ: ಶೂನ್ಯ ಎಸೆತಕ್ಕೆ ವಿಕೆಟ್​ ಪಡೆದ ವಿಶ್ವದ ಏಕೈಕ ಕ್ರಿಕೆಟಿಗ ಯಾರು? ಇವರೀಗ ಟೀಂ ಇಂಡಿಯಾದ ಸ್ಟಾರ್​ ಬ್ಯಾಟರ್​!

ರೋಹಿತ್ ಶರ್ಮಾ: ಭಾರತದ ಪ್ರಸ್ತುತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಕೂಡ ದುಬಾರಿ ಕಾರನ್ನು ಹೊಂದಿದ್ದಾರೆ. ಹಿಟ್‌ಮ್ಯಾನ್ ಬಳಿ ಇರುವ ಅತ್ಯಂತ ದುಬಾರಿ ಕಾರು ಲಂಬೋರ್ಗಿನಿ ಉರಸ್ ಆಗಿದ್ದು, ಇದರ ಬೆಲೆ ಸುಮಾರು ₹3.5 ಕೋಟಿ ರೂ.

ಎಮ್​ ಎಸ್​ ಧೋನಿ
ಧೋನಿ (IANS)

ಎಂ.ಎಸ್.ಧೋನಿ: ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ ಅವರಿಗೆ ಕಾರು ಮತ್ತು ಬೈಕ್ ಎರಡರಲ್ಲೂ ಒಲವು ಇರುವುದು ಎಲ್ಲರಿಗೂ ತಿಳಿದಿದೆ. ರಾಂಚಿಯಲ್ಲಿರುವ ಅವರ ಮನೆಯಲ್ಲಿ ದುಬಾರಿ ಕಾರುಗಳು ಮತ್ತು ಬೈಕ್‌ಗಳಿಂದ ತುಂಬಿರುವ ದೊಡ್ಡ ಗ್ಯಾರೇಜ್​ ಕೂಡ ಇದೆ. ಆದ್ರೆ ಧೋನಿ ಒಡೆತನದಲ್ಲಿರುವ ಅತ್ಯಂತ ದುಬಾರಿ ಕಾರು ಫೆರಾರಿ 699 ಜಿಟಿಒ, ಇದರ ಮೌಲ್ಯ ₹3.5 ಕೋಟಿ ರೂ.

ಸುರೇಶ್ ರೈನಾ: ಭಾರತದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಐಪಿಎಲ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸುರೇಶ್ ರೈನಾ ಕೂಡ ದುಬಾರಿ ಕಾರು ಹೊಂದಿದ್ದಾರೆ. 37ರ ಹರೆಯದ ಕ್ರಿಕೆಟಿಗನ ಬಳಿಯಿರುವ ಅತ್ಯಂತ ದುಬಾರಿ ಕಾರು ಬೆಂಟ್ಲಿ ಕಾಂಟಿನೆಂಟಲ್ ಜಿಟಿಯಾಗಿದ್ದು, ಇದರ ಬೆಲೆ 2.65 ಕೋಟಿ ರೂ.ಆಗಿದೆ

ಇದನ್ನೂ ಓದಿ: ಟೆಸ್ಟ್​ನಲ್ಲಿ ಅಪರೂಪದ ದಾಖಲೆ ಬರೆದ ರಬಾಡ: ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್​!

Last Updated : Oct 21, 2024, 10:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.