ETV Bharat / sports

ಝಲನಾ ಚಿರತೆ ಸಫಾರಿಗೆ ಭೇಟಿ ನೀಡಿದ ರಾಹುಲ್ ದ್ರಾವಿಡ್ ದಂಪತಿ - RAHUL DRAVID In JHALANA

author img

By ETV Bharat Karnataka Team

Published : Apr 27, 2024, 1:52 PM IST

ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ತಮ್ಮ ಪತ್ನಿಯೊಂದಿಗೆ ಶನಿವಾರ ಝಲನಾ ಚಿರತೆ ಸಫಾರಿಗೆ ಭೇಟಿ ನೀಡಿದರು. ಈ ವೇಳೆ ದಂಪತಿ ಅರಣ್ಯದಲ್ಲಿ ಚಿರತೆಯನ್ನು ನೋಡಿ ಆನಂದಿಸಿದರು.

CRICKETER RAHUL IN JHALANA  JHALANA LEOPARD SAFARI  Indian cricket team coach
ರಾಹುಲ್ ದ್ರಾವಿಡ್ ದಂಪತಿಯನ್ನು ಸ್ವಾಗತಿಸಿದ ಅರಣ್ಯ ಇಲಾಖೆ

ಜೈಪುರ (ರಾಜಸ್ಥಾನ): ರಾಜಧಾನಿ ಜೈಪುರದ ಝಲನಾ ಚಿರತೆ ಸಫಾರಿಯ ಜನಪ್ರಿಯತೆ ಹೆಚ್ಚುತ್ತಿದೆ. ಝಲನಾ ಚಿರತೆ ಸಫಾರಿ ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಮತ್ತು ಕಾರ್ಪೊರೇಟ್ ವ್ಯಕ್ತಿಗಳ ಭೇಟಿ ನೀಡುವುದು ವಿಶೇಷವಾಗಿದೆ. ಶನಿವಾರ ಬೆಳಗ್ಗೆ ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ತಮ್ಮ ಪತ್ನಿಯೊಂದಿಗೆ ಝಲನಾ ಚಿರತೆ ಸಫಾರಿಗೆ ಭೇಟಿ ನೀಡಿದ್ದರು. ಡಿಎಫ್​ಒ ಜಗದೀಶ್ ಗುಪ್ತಾ ಅವರು ರಾಹುಲ್ ದ್ರಾವಿಡ್ ಅವರನ್ನು ಸ್ವಾಗತಿಸಿದರು. ಈ ವೇಳೆ ಅರಣ್ಯ ಇಲಾಖೆ ನೌಕರರು, ವನ್ಯಜೀವಿ ಪ್ರೇಮಿಗಳು ಉಪಸ್ಥಿತರಿದ್ದರು. ರಾಹುಲ್ ದ್ರಾವಿಡ್ ಆನ್‌ಲೈನ್‌ನಲ್ಲಿ ಬುಕ್ ಮಾಡಿ ಝಲನಾ ಚಿರತೆ ಸಫಾರಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಚಿರತೆ ನೋಡಿ ಆನಂದಿಸಿದರು.

ಅರಣ್ಯ ಇಲಾಖೆ ನೌಕರರು ಮತ್ತು ವನ್ಯಜೀವಿ ಪ್ರೇಮಿಗಳು ರಾಹುಲ್ ದ್ರಾವಿಡ್ ಅವರನ್ನು ಚಿರತೆ ಸಫಾರಿಗೆ ಕರೆದೊಯ್ದರು. ರಾಹುಲ್ ದ್ರಾವಿಡ್ ಚಿರತೆ ಮೀಸಲು ಪ್ರದೇಶದ ವನ್ಯಜೀವಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಝಲನಾದಲ್ಲಿ ಚಿರತೆಗಳ ಆಟಗಳನ್ನು ನೋಡಿ ದಂಪತಿ ರೋಮಾಂಚನಗೊಂಡರು. ರಾಹುಲ್ ದ್ರಾವಿಡ್​ ಅವರು ಝಲನಾ ಕಾಡಿನ ಹಲವು ಛಾಯಾಚಿತ್ರಗಳು ಮತ್ತು ಸೆಲ್ಫಿಗಳನ್ನು ತೆಗೆದುಕೊಂಡರು. ಚಿರತೆ ಸಫಾರಿ ವೇಳೆ ವಿವಿಧ ಮಾರ್ಗಗಳಲ್ಲಿ ಚಿರತೆಗಳ ದರ್ಶನವಾಯಿತು.

ಝಲಾನಾ ಚಿರತೆ ಸಫಾರಿಗೆ ಭೇಟಿ ನೀಡಿದ ರಾಹುಲ್ ದ್ರಾವಿಡ್ ದಂಪತಿ

ಚಿರತೆ ಮೀಸಲು ಪ್ರದೇಶದ ಅತಿ ಎತ್ತರದ ಪ್ರದೇಶವಾದ ಶಿಕಾರ್ ಹೊಡಿಗೂ ರಾಹುಲ್​ ದಂಪತಿ ಭೇಟಿ ನೀಡಿತ್ತು. ಝಲನಾ ಕಾಡಿನ ಭವ್ಯವಾದ ನೋಟವನ್ನು ಶ್ಲಾಘಿಸಿದರು. ಬೇಟೆಯಾಡುವ ಉಡುಪನ್ನು ಧರಿಸಿ ಅವರು ಅನೇಕ ಛಾಯಾಚಿತ್ರಗಳನ್ನು ಸಹ ತೆಗೆದುಕೊಂಡರು. ಕಾಡಿನ ಮಧ್ಯದ ಸುಂದರ ಕ್ಷಣಗಳನ್ನೂ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಝಲನಾ ಚಿರತೆ ಸಫಾರಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ರಾಹುಲ್ ದ್ರಾವಿಡ್ ಅವರಿಗೆ ಮಾಹಿತಿ ನೀಡಿದರು. ಝಲನಾ ಅರಣ್ಯದಲ್ಲಿ ಇರುವ ವಿವಿಧ ಜಾತಿಯ ವನ್ಯಜೀವಿಗಳು ಮತ್ತು ಸಸ್ಯಗಳ ಬಗ್ಗೆಯೂ ಹೇಳಿದರು. ಇದಾದ ನಂತರ ರಾಹುಲ್ ದ್ರಾವಿಡ್ ಚಿರತೆ ಗ್ಯಾಲರಿಯಲ್ಲಿ ಚಿರತೆಗಳ ಛಾಯಾಚಿತ್ರಗಳನ್ನು ನೋಡಿ ಸಂತಸ ವ್ಯಕ್ತಪಡಿಸಿದರು.

ಝಲನಾ ಚಿರತೆ ಸಫಾರಿಯಲ್ಲಿ ಎಷ್ಟು ಚಿರತೆಗಳಿವೆ ಎಂಬುದರ ಬಗ್ಗೆಯೂ ರಾಹುಲ್ ದ್ರಾವಿಡ್ ಮಾಹಿತಿ ಪಡೆದರು. ಝಲನಾ ಚಿರತೆ ಮೀಸಲು ಪ್ರದೇಶಕ್ಕೆ ಬರಲು ನನಗೆ ತುಂಬಾ ಸಂತೋಷವಾಗಿದೆ ಎಂದು ದ್ರಾವಿಡ್ ಹೇಳಿದರು. ಜೈಪುರ ನಗರದ ಮಧ್ಯದಲ್ಲಿರುವ ಝಲನಾ ಅರಣ್ಯವು ತುಂಬಾ ಸುಂದರವಾಗಿದೆ. ಪ್ರಕೃತಿಯ ಅದ್ಭುತ ನೋಟವನ್ನು ಇಲ್ಲಿ ಕಾಣಬಹುದು. ಅರಣ್ಯ ಇಲಾಖೆಯ ನಿರ್ವಹಣೆಯನ್ನು ರಾಹುಲ್​ ದ್ರಾವಿಡ್​ ಇದೇ ವೇಳೆ ಶ್ಲಾಘಿಸಿದರು.

ಓದಿ:ಆರ್ಚರಿ ವಿಶ್ವಕಪ್​: ಕಾಂಪೌಂಡ್​ ಮಿಶ್ರ ತಂಡದಲ್ಲಿ ಮಹಿಳೆಯರು ಶೈನಿಂಗ್​, ಭಾರತಕ್ಕೆ ಒಲಿದ ಮೂರು ಚಿನ್ನ - Archery World Cup

ETV Bharat Logo

Copyright © 2024 Ushodaya Enterprises Pvt. Ltd., All Rights Reserved.