ETV Bharat / sports

T20 World Cup: ಇಂದು ಭಾರತ Vs ಅಮೆರಿಕ ಫೈಟ್: ಇಂಡಿಯಾ ಗೆಲುವಿಗೆ ಪಾಕ್​ ಜನರ ಪ್ರಾರ್ಥನೆ! - IND Vs US T20 Match

author img

By ETV Bharat Karnataka Team

Published : Jun 12, 2024, 12:47 PM IST

ಭಾರತ ಮತ್ತು ಅಮೆರಿಕ​ ತಂಡಗಳು ಇಂದಿನ ಟಿ20 ವಿಶ್ವಕಪ್​ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಭಾರತ Vs ಮಿನಿ ಭಾರತ ಫೈಟ್
ಭಾರತ Vs ಮಿನಿ ಭಾರತ ಫೈಟ್ (ETV Bharat)

ನ್ಯೂಯಾರ್ಕ್​: ಟಿ20 ವಿಶ್ವಕಪ್​ 25ನೇ ಪಂದ್ಯದಲ್ಲಿಂದು ಭಾರತ ಮತ್ತು ಅಮೆರಿಕ ತಂಡಗಳು ಮುಖಾಮುಖಿಯಾಗಲಿವೆ.

ಈ ಪಂದ್ಯವು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಎರಡು ತಂಡಗಳ ನಡುವೆ ಈವರೆಗೆ ಒಂದೇ ಒಂದು ಪಂದ್ಯ ನಡೆದಿಲ್ಲ. ಭಾರತ ಮತ್ತು ಅಮೆರಿಕ ತಂಡಗಳು ಮುಖಾಮುಖಿಯಾಗುತ್ತಿರುವುದು ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು.

ಈ ಪಂದ್ಯದಲ್ಲಿ ಯಾವುದೇ ತಂಡ ಗೆಲುವು ಸಾಧಿಸಿದರೂ ಸೂಪರ್-8ಗೆ ಅರ್ಹತೆ ಪಡೆಯಲಿದೆ. ಅಮೆರಿಕಾಗೆ ಟೀಮ್​ ಇಂಡಿಯಾ ಪ್ರಬಲ ಸ್ಪರ್ಧಿಯಾಗಿದೆ. ಮತ್ತೊಂದೆಡೆ ಪಾಕಿಸ್ತಾನದ ಅಭಿಮಾನಿಗಳು ಭಾರತದ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ವಾಸ್ತವವಾಗಿ ಪಾಕಿಸ್ತಾನ ಸೂಪರ್​ 8ಗೆ ಅರ್ಹತೆ ಪಡೆಯಲು ಅದು ತನ್ನ ಉಳಿದಿರುವ ಒಂದು ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಮತ್ತು ಅಮೆರಿಕವು ತನ್ನ ಉಳಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಬೇಕಿದೆ.

ಹಾಗಿದ್ದಲ್ಲಿ ಮಾತ್ರ ಪಾಕ್​ ಸೂಪರ್​ 8ಗೆ ಅರ್ಹತೆ ಪಡೆಯಲಿದೆ. ಸದ್ಯ ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಭಾರತ ಹಾಗೂ ಅಮೆರಿಕ ಎರಡೂ ತಂಡಗಳು ತಲಾ ಎರಡು ಪಂದ್ಯಗಳನ್ನು ಗೆದ್ದು 4 ಅಂಕಗಳನ್ನು ಪಡೆದಿವೆ. ಭಾರತ ಅಗ್ರಸ್ಥಾನದಲ್ಲಿದ್ದರೆ ಅಮೆರಿಕ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಪಾಕಿಸ್ತಾನ ಆಡಿದ 3 ಪಂದ್ಯಗಳ ಪೈಕಿ 2ರಲ್ಲಿ ಸೋಲನುಭವಿಸಿ 1ರಲ್ಲಿ ಗೆದ್ದು 3ನೇ ಸ್ಥಾನಕ್ಕೆ ತಲುಪಿದೆ.

ಪಿಚ್​ ವರದಿ​: ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಮೈದಾನದಲ್ಲಿ ಡ್ರಾಪ್ ಇನ್ ಪಿಚ್ ಅನ್ನು ಬಳಸಲಾಗುತ್ತಿದೆ. ಇದರಿಂದಾಗಿ ಬೌಲರ್​ಗಳು ಹೆಚ್ಚಿನ ನೆರವನ್ನು ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ ಈ ಮೈದಾನದಲ್ಲಿ 7 ಪಂದ್ಯಗಳು ನಡೆದಿದ್ದು, ಈ ಪೈಕಿ ಮೊದಲು ಬ್ಯಾಟ್​ ಮಾಡಿದ ತಂಡಗಳು 3 ಬಾರಿ ಗೆಲುವು ಸಾಧಿಸಿದ್ದರೆ, ಮೊದಲು ಬೌಲ್​ ಮಾಡಿದ ತಂಡಗಳು 4 ಬಾರಿ ಗೆಲುವು ಸಾಧಿಸಿವೆ. ಮೊದಲ ಇನ್ನಿಂಗ್ಸ್​ನ ಸರಾಸರಿ ಸ್ಕೋರ್​ 107 ಆಗಿದ್ದರೆ, ಎರಡನೇ ಇನ್ನಿಂಗ್ಸ್​ನ ಸರಾಸರಿ ಸ್ಕೋರ್​ 105 ಆಗಿದೆ. ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಸ್ಕೋರ್ 137 ಆಗಿದ್ದು, 77 ಕನಿಷ್ಠ ಸ್ಕೋರ್ ಆಗಿದೆ. ​​

ಸಂಭಾವ್ಯ ತಂಡಗಳು-ಭಾರತ: ರೋಹಿತ್ ಶರ್ಮಾ (ನಾ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್

ಅಮೆರಿಕ: ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾ & ವಿ.ಕೀ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್​, ಸೌರಭ್ ನೇತ್ರವಲ್ಕರ್, ಅಲಿ ಖಾನ್

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ

ನೇರ ಪ್ರಸಾರ: ಸ್ಟಾರ್ ​ಸ್ಪೋರ್ಟ್ಸ್​

ಇದನ್ನೂ ಓದಿ: ನಮೀಬಿಯಾ ಮಣಿಸಿದ ಆಸೀಸ್​​ ಸೂಪರ್​ -8ಕ್ಕೆ ಲಗ್ಗೆ: ಶ್ರೀಲಂಕಾ - ನೇಪಾಳ ಪಂದ್ಯ ಮಳೆಗಾಹುತಿ - Australia beats Namibia

ETV Bharat Logo

Copyright © 2024 Ushodaya Enterprises Pvt. Ltd., All Rights Reserved.