IND vs SA 1st T20: ಟಿ20 ಸರಣಿಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ ಇಂದು ಮೊದಲ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಉಭಯ ತಂಡಗಳ ನಡುವೆ ಒಟ್ಟು 4 ಪಂದ್ಯಗಳು ನಡೆಯಲಿವೆ.
ಈ ವರ್ಷ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿತ್ತು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.
ವಿ.ವಿ.ಎಸ್.ಲಕ್ಷ್ಮಣ್ ಕೋಚ್: ಈ ಸರಣಿಯನ್ನು ಹೊಸ ನಾಯಕ ಮತ್ತು ಕೋಚ್ನೊಂದಿಗೆ ಟೀಂ ಇಂಡಿಯಾ ಆಡಲಿದೆ. ರೋಹಿತ್ ಶರ್ಮಾ ಟಿ20ಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ, ಸೂರ್ಯಕುಮಾರ್ ಯಾದವ್ ಅವರನ್ನು ಟಿ20ಗೆ ಖಾಯಂ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಮತ್ತೊಂದೆಡೆ, ಗೌತಮ್ ಗಂಭೀರ್ ಬದಲಿಗೆ ವಿ.ವಿ.ಎಸ್.ಲಕ್ಷ್ಮಣ್ ಈ ಟಿ20 ಸರಣಿಗೆ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಗಂಭೀರ್ ಆಸ್ಟ್ರೇಲಿಯಾಗೆ ಪ್ರವಾಸ ಬೆಳೆಸಲಿದ್ದು, ಅಲ್ಲಿ ಭಾರತ ಒಟ್ಟು 5 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ.
ಭಾರತ-ದ.ಆಫ್ರಿಕಾ ಮುಖಾಮುಖಿ: ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿದೆ. ಉಭಯ ತಂಡಗಳು ಇದುವರೆಗೆ ಒಟ್ಟು 27 ಟಿ20 ಪಂದ್ಯಗಳನ್ನು ಆಡಿವೆ. ಇದರಲ್ಲಿ ಭಾರತ 15ರಲ್ಲಿ ಗೆದ್ದು 11ರಲ್ಲಿ ಸೋತಿದೆ. ಆದರೆ ಆಫ್ರಿಕನ್ ದೇಶದಲ್ಲಿ ಭಾರತ ಒಟ್ಟು 15 ಟಿ20 ಪಂದ್ಯಗಳನ್ನು ಆಡಿದ್ದು, 10ರಲ್ಲಿ ಗೆದ್ದು 4ರಲ್ಲಿ ಮಾತ್ರ ಸೋತಿದೆ. ಅಲ್ಲದೇ 2007ರಲ್ಲಿ ಈ ದೇಶದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಅನ್ನು ಭಾರತ ಗೆದ್ದಿತ್ತು.
Repeat or redemption? 🔄
— JioCinema (@JioCinema) November 4, 2024
Witness the World T20I Champions take on the Proteas in a thrilling T20I series 🔥 Catch all the action LIVE from November 8 on #JioCinema & #Sports18 👈#SAvIND #JioCinemaSports pic.twitter.com/5HduEPUaOJ
ಕಳೆದ 5 ಸರಣಿಯಲ್ಲಿ ಭಾರತದ ಮೇಲುಗೈ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿರುವ ಕಳೆದ 5 ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಭಾರತ ಒಮ್ಮೆಯೂ ಸೋತಿಲ್ಲ. ಇದರಲ್ಲಿ ಟೀಂ ಇಂಡಿಯಾ 2 ಸರಣಿಯನ್ನು ಗೆದ್ದುಕೊಂಡಿದ್ದು, 3 ಸರಣಿ ಡ್ರಾನಲ್ಲಿ ಅಂತ್ಯಗೊಂಡಿದೆ. ಉಭಯ ತಂಡಗಳ ನಡುವೆ ಇದುವರೆಗೆ 9 ದ್ವಿಪಕ್ಷೀಯ ಟಿ20 ಸರಣಿಗಳು ನಡೆದಿದ್ದು, ಭಾರತ 4 ಮತ್ತು ದಕ್ಷಿಣ ಆಫ್ರಿಕಾ 2ರಲ್ಲಿ ಗೆದ್ದಿದೆ. 3 ಸರಣಿ ಡ್ರಾ ಆಗಿದೆ.
ಪಂದ್ಯ ಆರಂಭ: ಸಂಜೆ 8.30ಕ್ಕೆ
ಮೈದಾನ: ಕಿಂಗ್ಸ್‌ಮೇಡ್ ಕ್ರೀಡಾಂಗಣ, ಡರ್ಬನ್
ನೇರಪ್ರಸಾರ: ಸ್ಪೋರ್ಟ್ಸ್ 18, ಕಲರ್ಸ್ ಸಿನಿ ಪ್ಲಸ್, ಜಿಯೋಸಿನಿಮಾ.
ತಂಡಗಳು-ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ರಿಂಕು ಸಿಂಗ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಮಣ್‌ದೀಪ್ ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ವಿಜಯಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್, ಅವೇಶ್ ಖಾನ್ ಮತ್ತು ಯಶ್ ದಯಾಳ್.
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್ (ನಾಯಕ), ಜೆರಾಲ್ಡ್ ಕೊಯೆಟ್ಜಿ, ಒಟ್ನೀಲ್ ಬಾರ್ಟ್‌ಮನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಡೊನೊವನ್ ಫೆರೆರಾ, ಪ್ಯಾಟ್ರಿಕ್ ಕ್ರುಗರ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಕೇಶವ್ ಮಹರಾಜ್, ರಿಯಾನ್ ಲ್ಯೂಲಾ ಸಿಮ್‌ಕೆಲ್, ಮಿಹಾಲಿ ಎಂಪೊಂಗ್ವಾನಾ, ರ್ಯಾನ್‌ಲೆ ರ್‌ಯಾಬಾ ಪೀಟರ್, ಸಿಪಾಮ್ಲಾ ಮತ್ತು ಟ್ರಿಸ್ಟಾನ್ ಸ್ಟಬ್ಸ್.
ಇದನ್ನೂ ಓದಿ: ಐಪಿಎಲ್ಗೆ ಎಂಟ್ರಿ ಕೊಡ್ತಿದ್ದಾರೆ ಇಂಗ್ಲೆಂಡ್‌ನ ಲೆಜೆಂಡರಿ ಬೌಲರ್: ಇವರ ಮೇಲೆ ಎಲ್ಲರ ಚಿತ್ತ!