ETV Bharat / sports

3ನೇ ಟೆಸ್ಟ್​: ಕೇವಲ 13.2ಓವರ್​ಗೆ ಮುಕ್ತಾಯಗೊಂಡ ಮೊದಲ ದಿನದಾಟ; ಭಾರತಕ್ಕೆ ಹೆಚ್ಚಿತು ಆತಂಕ! - BORDER GAVASKAR TROPHY

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 3ನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟಕ್ಕೆ ಮಳೆರಾಯ ಅಡ್ಡಿಪಡಿಸಿದ್ದು ಭಾರತಕ್ಕೆ ಆತಂಕ ಹೆಚ್ಚಿದೆ.

INDIA VS AUSTRALIA 3RD TEST  WTC POINT TABLE  INDIA WTC SCENARIO  IND VS AUS GABBA TEST
Team India (IANS)
author img

By ETV Bharat Sports Team

Published : 2 hours ago

Ind vs Aus 3rd Test: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪ್ರತಿಷ್ಠಿತ ಬಾರ್ಡರ್​ ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿ ನಡೆಯುತ್ತಿದೆ. ಈಗಾಗಲೇ ಎರಡು ಪಂದ್ಯಗಳು ಮುಕ್ತಾಯಗೊಂಡಿವೆ. ಪರ್ತ್​ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ 295 ರನ್​ಗಳಿಂದ ಗೆಲುವು ಸಾಧಿಸಿದ್ದ ಭಾರತ ಎರಡನೇ ಟೆಸ್ಟ್​ನಲ್ಲಿ ಮುಗ್ಗರಿಸಿತ್ತು.

ಅಡಿಲೇಡ್​ನ ಓವೇಲ್​ ಮೈದಾನದಲ್ಲಿ ನಡೆದಿದ್ದ ಪಿಂಕ್​ ಬಾಲ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಹೀನಾಯವಾಗಿ ಸೋಲನುಭವಿಸಿತು. ಎರಡನೇ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ್ಧ ಟೀಂ ಇಂಡಿಯಾ ಆಸೀಸ್​ಗೆ ಕೇವಲ 19 ರನ್​ಗಳ ಗುರಿಯನ್ನು ನೀಡಲು ಮಾತ್ರ ಸಾಧ್ಯವಾಯ್ತು. ಇದನ್ನು ಬೆನ್ನತ್ತಿದ್ದ ಕಾಂಗರೂ ಪಡೆ 10 ವಿಕೆಟ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದರೊಂದಿಗೆ WTC ಅಂಕಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿತ್ತು.

ಇದೀಗ ಭಾರತ ಮೂರನೇ ಟೆಸ್ಟ್​ ಗೆದ್ದು ಆಸ್ಟ್ರೇಲಿಯಾ ವಿರುದ್ಧ ​ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಉಭಯ ತಂಡಗಳ ನಡುವೆ 3ನೇ ಟೆಸ್ಟ್​ ಪಂದ್ಯ ಬ್ರಿಸ್ಬೇನ್​ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್​ ಗೆದ್ದು ಭಾರತ ಬ್ಯಾಟಿಂಗ್​ ಆಯ್ದುಕೊಂಡಿದೆ. ಆದರೇ ಮೊದಲ ದಿನವೇ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.

ಪಂದ್ಯ ಆರಂಭವಾಗಿ 13.2 ಓವರ್​ಗಳು ಮುಕ್ತಾಯಗೊಳ್ಳುತ್ತಿದ್ದಂತೆ ವರುಣನ ಪ್ರವೇಶ ವಾಗಿದ್ದು ಪಂದ್ಯ ಅರ್ಧಕ್ಕೆ ನಿಂತಿತು. 4 ಗಂಟೆ ಕಾಲ ಕಳೆದರು ಮಳೆ ನಿಲ್ಲದ ಸೂಚನೆ ಸಿಗದ ಕಾರಣ ಮೊದಲ ದಿನದಾಟವನ್ನು ಮುಕ್ತಾಯಗೊಳಿಸಲಾಯಿತು. ಏತನ್ಮಧ್ಯೆ 4 ದಿನಗಳ ಕಾಲ ಬ್ರಿಸ್ಬೆನ್​ನಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇದರಿಂದ ಭಾರತಕ್ಕೆ ಆತಂಕ ಹೆಚ್ಚಾಗಿದೆ. ಒಂದು ವೇಳೆ ಈ ಪಂದ್ಯ ಫಲಿತಾಂಶ ಕಾಣದೆ ಅಂತ್ಯಗೊಂಡರೇ WTC ಅಂಕಪಟ್ಟಿಯಲ್ಲಿ ಭಾರತಕ್ಕೆ ಭಾರೀ ಹೊಡೆತ ಬೀಳಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗಬ್ಬಾ ಟೆಸ್ಟ್ ಡ್ರಾಗೊಂಡರೆ, ಪಾಯಿಂಟ್ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ, ಆದರೆ ಭಾರತ WTC ಫೈನಲ್​ ಪ್ರವೇಶಕ್ಕೆ ಅಡ್ಡಿ ಪಡಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಂಡವು ಕಾಂಗರೂ ತಂಡದ ವಿರುದ್ಧ ಮುಂದಿನ ಎರಡು ಟೆಸ್ಟ್‌ಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಇದರ ಜೊತೆಗೆ ಇತರ ತಂಡಗಳ ಫಲಿತಾಂಶಗಳನ್ನು ಸಹ ಅವಲಂಬಿಸಬೇಕಾಗುತ್ತದೆ. ಒಂದು ವೇಳೆ ಮಳೆ ನಿಂತು ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೇ ಎರಡನೇ ಸ್ಥಾನಕ್ಕೆ ತಲುಪಲಿದೆ.

ಸಧ್ಯ ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಅಂಕಪಟ್ಟಿಯಲ್ಲಿ, ಮೊದಲ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡ ಇದೆ. ಹರಿಣ ಪಡೆ 63.33 ಶೇಕಡವಾರು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೇ, ಆಸ್ಟ್ರೇಲಿಯಾ 60.71 ಮತ್ತು ಭಾರತ 57.29 ಶೇಕಡವಾರು ಅಂಕದೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಇದನ್ನೂ ಓದಿ: 3ನೇ ಟೆಸ್ಟ್​: ಬ್ಯಾಟಿಂಗ್​, ಬೌಲಿಂಗ್​ ಮಾಡದೇ ಆಸ್ಟ್ರೇಲಿಯಾ ವಿರುದ್ಧ ವಿಶೇಷ ದಾಖಲೆ ಬರೆದ ಕೊಹ್ಲಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.