ETV Bharat / sports

ವಿಶಾಖಪಟ್ಟಣ ಟೆಸ್ಟ್​: ಬುಮ್ರಾ ಮಾರಕ ದಾಳಿಗೆ ಇಂಗ್ಲೆಂಡ್ ತತ್ತರ​, ಭಾರತಕ್ಕೆ 171 ರನ್​ ಮುನ್ನಡೆ

author img

By ETV Bharat Karnataka Team

Published : Feb 3, 2024, 5:18 PM IST

Updated : Feb 3, 2024, 8:05 PM IST

ವಿಶಾಖಪಟ್ಟಣ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತ 171 ರನ್​ ಮುನ್ನಡೆಯೊಂದಿಗೆ ಸುಭದ್ರ ಸ್ಥಿತಿಯಲ್ಲಿದೆ.

India lead by 171 runs against England in Visakhapatnam test
ವಿಶಾಖಪಟ್ಟಣ ಟೆಸ್ಟ್​: ಬುಮ್ರಾ ಮಾರಕ ದಾಳಿಗೆ ಇಂಗ್ಲೆಂಡ್ ತತ್ತರ​, ಭಾರತಕ್ಕೆ 171 ರನ್​ ಮುನ್ನಡೆ

ವಿಶಾಖಪಟ್ಟಣ: ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್​ ದ್ವಿಶತಕ ಹಾಗೂ ವೇಗಿ ಜಸ್ಪ್ರೀತ್​ ಬುಮ್ರಾ ಮಾರಕ ದಾಳಿಯ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್​ ಪಂದ್ಯದಲ್ಲಿ ಭಾರತ ಭರ್ಜರಿ ಮುನ್ನಡೆ ಸಾಧಿಸಿದೆ. ಎರಡನೇ ದಿನದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್​​ನಲ್ಲಿ ವಿಕೆಟ್​ ನಷ್ಟವಿಲ್ಲದೆ 28 ರನ್​ ಗಳಿಸಿರುವ ರೋಹಿತ್​ ಪಡೆ 171 ರನ್​ಗಳ ಮುನ್ನಡೆಯಲ್ಲಿದೆ.

ಇದಕ್ಕೂ ಮುನ್ನ ಎರಡನೇ ದಿನದಾಟ ಆರಂಭಿಸಿದ ಭಾರತ 396 ರನ್​ಗಳಿಗೆ ಆಲೌಟ್​ ಆಯಿತು. ಭಾರತದ ಪರ ಅಮೋಘ ಬ್ಯಾಟಿಂಗ್​ ಪ್ರದರ್ಶಿಸಿದ ಯಶಸ್ವಿ ಜೈಸ್ವಾಲ್ ಚೊಚ್ಚಲ​ ದ್ವಿಶತಕ (209) ದಾಖಲಿಸಿದರು. 290 ಎಸೆತಗಳನ್ನು ಎದುರಿಸಿದ ಯುವ ಬ್ಯಾಟರ್​, 19 ಬೌಂಡರಿ ಹಾಗೂ 7 ಸಿಕ್ಸರ್​ ಸಿಡಿಸಿದರು. ಜೇಮ್ಸ್​ ಆ್ಯಂಡರ್ಸನ್​ ಬೌಲಿಂಗ್​ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್​ ಒಪ್ಪಿಸಿದರು.

ಇದಕ್ಕೂ ಮುನ್ನ ಅಶ್ವಿನ್​ 20 ರನ್​ಗೆ ಔಟಾಗಿದ್ದರು. ಉಳಿದಂತೆ ಬಾಲಂಗೋಚಿಗಳು ಹೆಚ್ಚಿನ ರನ್​ ಕೊಡುಗೆ ನೀಡಲಿಲ್ಲ. ಅಂತಿಮವಾಗಿ ಭಾರತ 396 ರನ್​ಗೆ ಸರ್ವಪತನ ಕಂಡಿತು. ಇಂಗ್ಲೆಂಡ್​ ಪರ ಆ್ಯಂಡರ್ಸನ್​, ಶೋಯಬ್​ ಬಶೀರ್​ ಹಾಗೂ ರೆಹನ್​ ಅಹ್ಮದ್​ ತಲಾ 3 ಹಾಗೂ ಟಾಮ್​ ಹಾರ್ಟ್ಲಿ 1 ವಿಕೆಟ್​ ಕಬಳಿಸಿದರು.

ಬಳಿಕ, ಪ್ರಥಮ ಇನ್ನಿಂಗ್ಸ್​​ ಆಡಿದ ಆಂಗ್ಲರಿಗೆ ಜಾಕ್​ ಕ್ರಾವ್ಲಿ (76) ಹಾಗೂ ಡಕೆಟ್​ (21) 59 ರನ್​ಗಳ ಉತ್ತಮ ಆರಂಭ ಒದಗಿಸಿದರು. ಈ ವೇಳೆ ಡಕೆಟ್​ ಕುಲ್ದೀಪ್​ ಬೌಲಿಂಗ್​ನಲ್ಲಿ ಪಟಿದಾರ್​ಗೆ ಕ್ಯಾಚ್​ ನೀಡಿ ಹೊರನಡೆದರು. ಬಳಿಕ ಉತ್ತಮವಾಗಿ ಆಡುತ್ತಿದ್ದ ಕ್ರಾವ್ಲಿ ಶ್ರೇಯಸ್​ ಅಯ್ಯರ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

ಬಳಿಕ ಆಂಗ್ಲ ಬ್ಯಾಟರ್​​ಗಳನ್ನು ಕಾಡಿದ ಬುಮ್ರಾ, ಅನುಭವಿ ಜೋ ರೂಟ್​ರನ್ನು ಪೆವಿಲಿಯನ್​​ಗೆ ಅಟ್ಟಿದರು. ಇದಾದ ಬಳಿಕ ಉತ್ತಮ ಲಯದಲ್ಲಿರುವ ಕಳೆದ ಪಂದ್ಯದ ಹೀರೋ ಓಲಿ ಪಾಪ್​ರನ್ನು ಯಾರ್ಕರ್​​ ಮೂಲಕ ಕಂಗೆಡಿಸಿದ ಬುಮ್ರಾ ಇಂಗ್ಲೆಂಡ್​ಗೆ ಡಬಲ್​ ಶಾಕ್​ ನೀಡಿದರು. ಇದಾದ ಕೆಲ ಹೊತ್ತಲ್ಲೇ ಜಾನಿ ಬೈರ್​​ಸ್ಟೋ ಕೂಡ ಜಸ್ಪ್ರೀತ್​ ಬೌಲಿಂಗ್​ನಲ್ಲಿ ಗಿಲ್​ಗೆ ಕ್ಯಾಚ್​ ನೀಡಿ ಹೊರನಡೆದರು. ಆಗ ಇಂಗ್ಲೆಂಡ್​ 159 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿತು.

ತದನಂತರ ಕೆಳಕ್ರಮಾಂಕದ ಬ್ಯಾಟರ್​​ಗಳೊಂದಿಗೆ ಹೋರಾಟ ನಡೆಸಿದ ನಾಯಕ ಬೆನ್​ ಸ್ಟೋಕ್ಸ್​​ 47 ರನ್​ ಬಾರಿಸಿ ಬುಮ್ರಾ ಬೌಲಿಂಗ್​​ನಲ್ಲಿ ಬೌಲ್ಡ್​​ ಆದರು. ಈ ನಡುವೆ, ವಿಕೆಟ್​ ಕೀಪಿಂಗ್​ ಬ್ಯಾಟರ್​​ ಫೋಕ್ಸ್​​ 6 ರನ್​ಗೆ ಕುಲ್ದೀಪ್​ ಎಸೆತದಲ್ಲಿ ವಿಕೆಟ್​ ಕಳೆದುಕೊಂಡರು. ಇನ್ನುಳಿದಂತೆ, ಅಹ್ಮದ್​ 6, ಹಾರ್ಟ್ಲಿ 21 ಹಾಗು ಅ್ಯಂಡರ್ಸನ್​ 6 ರನ್​ಗೆ ಔಟಾದರೆ, ಬಶೀರ್​ ಅಜೇಯ 8 ರನ್​ ಗಳಿಸಿದರು. 253 ರನ್​ಗಳಿಗೆ ಸಂಪೂರ್ಣ ಆಂಗ್ಲ ಪಡೆ ಪೆವಿಲಿಯನ್​ ಸೇರಿತು. ಭಾರತದ ಪರ ವೇಗಿ ಬುಮ್ರಾ 45ಕ್ಕೆ 6 ಹಾಗೂ ಕುಲ್ದೀಪ್ 71ಕ್ಕೆ​ 3 ವಿಕೆಟ್​​ ಕಬಳಿಸಿ ಮೇಲುಗೈಗೆ ಕಾರಣರಾದರು.

ದಿನದ ಕೊನೆಯಲ್ಲಿ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಭಾರತ ವಿಕೆಟ್​ ನಷ್ಟವಿಲ್ಲದೆ 28 ರನ್​ ಕಲೆ ಹಾಕಿದ್ದು, ಒಟ್ಟಾರೆ ಲೀಡ್​ 171 ರನ್​ ಆಗಿದೆ. ಜೈಸ್ವಾಲ್​ 15 ಹಾಗೂ ನಾಯಕ ರೋಹಿತ್​ 13 ರನ್​ಗಳೊಂದಿಗೆ ಮೂರನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: ಮತ್ತೆ ತಾಳ್ಮೆ ಕಳೆದುಕೊಂಡ ಡ್ಯಾಶಿಂಗ್ ಓಪನರ್ ಶುಭ್ಮನ್ ಗಿಲ್: ರವಿಶಾಸ್ತ್ರಿ ಅಸಮಾಧಾನ

Last Updated : Feb 3, 2024, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.