ETV Bharat / sports

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್​ ಮತ್ತು 64 ರನ್​ಗಳ ಜಯ, 4-1 ರಿಂದ ಸರಣಿ ಕೈವಶ, WTCಯಲ್ಲಿ ಅಗ್ರಸ್ಥಾನ - IND Vs ENG 5th Test Match

ಧರ್ಮಶಾಲಾ ಕ್ರಿಕೆಟ್​ ಮೈದಾನದಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ.

Etv Bharat
Etv Bharat
author img

By ETV Bharat Karnataka Team

Published : Mar 9, 2024, 3:12 PM IST

Updated : Mar 9, 2024, 4:13 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ): ಇಂಗ್ಲೆಂಡ್​ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್​ ಹಾಗೂ 64 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟೆಸ್ಟ್​ ಸರಣಿಯನ್ನು 4-1 ಅಂತರದಿಂದ ತನ್ನ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ಭಾರತವು 68.5 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಏರಿದೆ.

ಧರ್ಮಶಾಲಾ ಕ್ರಿಕೆಟ್​ ಮೈದಾನದಲ್ಲಿ ಮಾರ್ಚ್​ 7ರಂದು ಆರಂಭವಾಗಿದ್ದ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಐದನೇ ಪಂದ್ಯ ಕೇವಲ ಮೂರೇ ದಿನಗಳಲ್ಲಿ ಮುಕ್ತಾಯವಾಗಿದೆ. ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡಿದ್ದ ಆಂಗ್ಲರು ತಮ್ಮ ಮೊದಲ ಇನ್ನಿಂಗ್ಸ್​ ಅನ್ನು 218 ರನ್​ಗಳಿಗೆ ಮುಗಿಸಿದ್ದರು. ಬಳಿಕ ರೋಹಿತ್​ ಶರ್ಮಾ ಬಳಗ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ​ 477 ರನ್​ಗಳನ್ನು ಕಲೆ ಹಾಕಿ 259 ರನ್​ಗಳ ಮುನ್ನಡೆ ಸಾಧಿಸಿತ್ತು.

ಮತ್ತೊಂದೆಡೆ, ಇಂಗ್ಲೆಂಡ್​ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾದ ಸ್ಟಾರ್​ ಸ್ಪಿನರ್​ ಆರ್​.ಅಶ್ವಿನ್ ದಾಳಿಗೆ ಸಿಲುಕಿ ಬೇಗ ವಿಕೆಟ್​ ಕಳೆದುಕೊಂಡಿತು. ಇದರಿಂದಾಗಿ​ ಮೂರನೇ ದಿನದಾಟದಲ್ಲಿ ಕೇವಲ 195 ರನ್​ಗಳಿಗೆ ಆಂಗ್ಲರ ಪಡೆ ಸರ್ವಪತನ ಕಂಡು ಇನ್ನಿಂಗ್ಸ್​ ಮತ್ತು 64 ರನ್​ಗಳ ಅಂತರದಿಂದ ಸೋಲು ಅನುಭವಿಸಿತು.

ಅಶ್ವಿನ್, ಕುಲ್​ದೀಪ್​ ಮಿಂಚು: ಆಂಗ್ಲರ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಭಾರತದ ಸ್ಪಿನರ್ ರವಿಚಂದ್ರನ್​ ಅಶ್ವಿನ್ ಮತ್ತು ಕುಲ್​ದೀಪ್​ ಯಾದವ್​ ಮಿಂಚು ಹರಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ ಕುಲ್​ದೀಪ್ ಐದು ವಿಕೆಟ್​ಗಳು, ಅಶ್ವಿನ್​ ನಾಲ್ಕು ವಿಕೆಟ್​ಗಳನ್ನು ಕಿತ್ತು ಬ್ಯಾಟರ್​ಗಳನ್ನು ಕಾಡಿದ್ದರು. ಇದರಿಂದ ಇಂಗ್ಲೆಂಡ್​ ತಂಡವನ್ನು 218 ರನ್​ಗಳಿಗೆ ಕಟ್ಟಿ ಹಾಕಲು ಸಾಧ್ಯವಾಗಿತ್ತು.

ಬ್ಯಾಟಿಂಗ್ ವಿಭಾಗದಲ್ಲೂ ಟೀಂ ಇಂಡಿಯಾ ಆಟಗಾರರು ಭರ್ಜರಿ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್​ನಲ್ಲಿ ಅಗ್ರ ಕ್ರಮಾಂಕದ ಐವರು ಬ್ಯಾಟರ್​ಗಳಲ್ಲಿ ಇಬ್ಬರು ಶತಕ ಹಾಗೂ ಮೂವರು ಅರ್ಧಶತಕ ಸಿಡಿಸಿದ್ದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್​ (57), ನಾಯಕ ರೋಹಿತ್​ ಶರ್ಮಾ (103), ಶುಭ್​ಮನ್​ ಗಿಲ್​ (110), ಟೆಸ್ಟ್​ಗೆ​ ಪಾದಾರ್ಪಣೆ ಮಾಡಿದ್ದ ಕನ್ನಡಿಗ ದೇವದತ್​ ಪಡಿಕ್ಕಲ್ (65), ಸರ್ಫರಾಜ್ ಖಾನ್ (56) ಅಮೋಘ ಬ್ಯಾಟಿಂಗ್​ ಪ್ರದರ್ಶಿಸಿದ್ದರು. ಕೊನೆಯಲ್ಲಿ ಕುಲ್​ದೀಪ್ (30), ಜಸ್ಪ್ರೀತ್ ಬುಮ್ರಾ (20) ಅವರ ಕೊಡುಗೆಯಿಂದ ಭಾರತ 477 ರನ್​ಗಳ ಬೃಹತ್​ ಮೊತ್ತ ಕಲೆ ಹಾಕಿತ್ತು.

ಎರಡನೇ ಇನ್ನಿಂಗ್​ನಲ್ಲೂ ಕಾಡಿದ ಅಶ್ವಿನ್: ಇಂಗ್ಲೆಂಡ್​ ಬ್ಯಾಟರ್​ಗಳನ್ನು ಎರಡನೇ ಇನ್ನಿಂಗ್ಸ್​ನಲ್ಲೂ ಆರ್​.ಅಶ್ವಿನ್​ ಕಾಡಿದರು. ಪ್ರಮುಖ ಐದು ವಿಕೆಟ್​ಗಳನ್ನು ಉರುಳಿಸಿದ ಅವರು ಈ ಪಂದ್ಯದಲ್ಲಿ ಒಟ್ಟು 9 ವಿಕೆಟ್​ಗಳ ಸಾಧನೆ ಮಾಡಿದರು. ಇದರೊಂದಿಗೆ ತಮ್ಮ ನೂರನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.

ಮತ್ತೊಂದೆಡೆ, ಕುಲ್​ದೀಪ್​, ಬುಮ್ರಾ ತಲಾ ಎರಡು ವಿಕೆಟ್​, ರವೀಂದ್ರ ಜಡೇಜಾ ಒಂದು ವಿಕೆಟ್​ ಪಡೆದು ತಂಡದ ಇನ್ನಿಂಗ್ಸ್​ ಗೆಲುವಿಗೆ ಕಾರಣವಾದರು. ಇಂಗ್ಲೆಂಡ್ ಪರ ಐವರಿಗೆ ಮಾತ್ರ ಒಂದಂಕಿ ರನ್​ ಗಡಿದಾಟಲು ಸಾಧ್ಯವಾಯಿತು. ಇದರಲ್ಲೂ ಜೋ ರೂಟ್ ಗರಿಷ್ಠ 84 ರನ್ ಗಳಿಸಿದರು. ಉಳಿದಂತೆ ಓಲಿ ಪೋಪ್ (19), ಜಾನಿ ಬೆಸ್ಟೊ (39), ಟಾಮ್ ಹಾರ್ಟ್ಲಿ (20), ಶೋಯಬ್ ಬಷೀರ್ 13 ರನ್​ ಕಲೆ ಹಾಕಲು ಮಾತ್ರ ಶಕ್ತರಾದರು.

ಇದನ್ನೂ ಓದಿ: 147 ವರ್ಷಗಳ ಟೆಸ್ಟ್​ ಇತಿಹಾಸದಲ್ಲಿ 700 ವಿಕೆಟ್​ ಪಡೆದ ಮೊದಲ ವೇಗಿ ಜೇಮ್ಸ್ ಆ್ಯಂಡರ್​ಸನ್​

Last Updated : Mar 9, 2024, 4:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.