ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯಾ ಎ ಹಾಗೂ ಇಂಡಿಯಾ ಬಿ ನಡುವಿನ ದುಲೀಪ್ ಟ್ರೋಫಿ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದೆ. ಇಂಡಿಯಾ ಬಿ ತಂಡ 6 ವಿಕೆಟ್ ನಷ್ಟಕ್ಕೆ 150 ರನ್ ಕಲೆ ಹಾಕಿದೆ. ಆ ಮೂಲಕ ಇಂಡಿಯಾ ಎ ವಿರುದ್ಧ ಈಗಾಗಲೇ 240 ರನ್‌ಗಳ ಮುನ್ನಡೆ ಸಾಧಿಸಿದೆ.
50 for Rishabh Pant! 👌
— BCCI Domestic (@BCCIdomestic) September 7, 2024
He brings it up off just 34 balls 🔥#DuleepTrophy | @IDFCFIRSTBank
Follow the match ▶️ https://t.co/eQyu38DTlt pic.twitter.com/OPSfsvFhqI
3ನೇ ದಿನದಾಟ ಆರಂಭಿಸಿದ ಇಂಡಿಯಾ ಎ ತಂಡ, 72.4 ಓವರ್‌ಗಳ ಅಂತ್ಯಕ್ಕೆ 231 ರನ್‌ಗಳಿಗೆ ಸರ್ವಪತನ ಕಂಡಿತು. ಕೆ.ಎಲ್. ರಾಹುಲ್ 37 ಹಾಗೂ ತನುಷ್ ಕೋಟ್ಯಾನ್ 32 ರನ್ ಗಳಿಸುವ ಮೂಲಕ ತಂಡದ ಮೊತ್ತಕ್ಕೆ ಕೊಡುಗೆ ನೀಡಿದರು. ವೇಗಿಗಳಾದ ನವದೀಪ್ ಸೈನಿ ಹಾಗೂ ಮುಕೇಶ್ ಕುಮಾರ್ ತಲಾ 3 ವಿಕೆಟ್ಗಳನ್ನು ಪಡೆದರು.
ಇಂಡಿಯಾ ಬಿ ಇನ್ನಿಂಗ್ಸ್: ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಡಿಯಾ ಬಿ ಕೂಡ 22 ರನ್ ಗಳಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ (9) ಹಾಗೂ ಅಭಿಮನ್ಯು ಈಶ್ವರನ್ (4) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಬಳಿಕ, ಮೊದಲ ಇನ್ನಿಂಗ್ಸ್ ಹೀರೋ ಮುಶೀರ್ ಖಾನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.
ಸರ್ಫರಾಜ್ - ಪಂತ್ ಆಸರೆ: ಆದರೆ, 4ನೇ ವಿಕೆಟ್‌ಗೆ ಸರ್ಫರಾಜ್ ಖಾನ್‌ಗೆ ಜೊತೆಯಾದ ರಿಷಭ್ ಪಂತ್ ಚುರುಕಿನ ಅರ್ಧಶತಕ ದಾಖಲಿಸಿದರು. ಪಂತ್ 61 ರನ್ಗೆ ವಿಕೆಟ್ ಒಪ್ಪಿಸಿದರೆ, ಸರ್ಫರಾಜ್ ಖಾನ್ 46 ರನ್ ಗಳಿಸಿ ಔಟಾದರು. ಬಳಿಕ ಬಂದ ನಿತೀಶ್ ರೆಡ್ಡಿ 19 ರನ್ಗೆ ಕೊನೆಯವರಾಗಿ ಔಟಾದರು. ದಿನದಾಟದ ಅಂತ್ಯಕ್ಕೆ ಇಂಡಿಯಾ ಬಿ 6 ವಿಕೆಟ್‌ಗಳನ್ನ ಕಳೆದುಕೊಂಡು 150 ರನ್ ಗಳಿಸಿದೆ. 6 ರನ್ ಗಳಿಸಿರುವ ವಾಷಿಂಗ್ಟನ್ ಸುಂದರ್ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಡಿಯಾ ಎ ತಂಡದ ಪರ ಆಕಾಶ್ ದೀಪ್ 36 ರನ್ಗೆ 2 ಹಾಗೂ ಖಲೀಲ್ ಅಹಮದ್ 56ಕ್ಕೆ 2 ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ: ಇಂಡಿಯಾ ಎ ಮೊದಲ ಇನ್ನಿಂಗ್ಸ್ - 231/10 (72.4 ಓವರ್)
ಕೆ.ಎಲ್. ರಾಹುಲ್ 37, ತನುಷ್ ಕೋಟ್ಯಾನ್ 32 ರನ್
ಮುಕೇಶ್ ಕುಮಾರ್ 62/3, ನವದೀಪ್ ಸೈನಿ 60/3 ವಿಕೆಟ್
ಇಂಡಿಯಾ ಬಿ ದ್ವಿತೀಯ ಇನ್ನಿಂಗ್ಸ್ - 150/6 (31.3 ಓವರ್)
ರಿಷಭ್ ಪಂತ್ 61, ಸರ್ಫರಾಜ್ ಖಾನ್ 46 ರನ್
ಆಕಾಶ್ ದೀಪ್ 36/2, ಖಲೀಲ್ ಅಹಮದ್ 56/2 ವಿಕೆಟ್
ಇದನ್ನೂ ಓದಿ: ನ್ಯೂಜಿಲೆಂಡ್ ತಂಡ ಸೇರಿದ ಭಾರತದ ಬ್ಯಾಟಿಂಗ್ ಕೋಚ್: ಯಾರವರು? - Former India Coach Joins KIWIS