ನವದೆಹಲಿ: ಇಂಗ್ಲೆಂಡ್ ವಿರುದ್ಧ 68 ರನ್‌ಗಳ ಜಯ ಸಾಧಿಸಿರುವ ಟೀಂ ಇಂಡಿಯಾ ಅಜೆಯವಾಗಿಯೇ ಫೈನಲ್ ಪ್ರವೇಶ ಮಾಡಿದೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಅವರ ತಂತ್ರಗಾರಿಕೆಯನ್ನು ಶ್ಲಾಘಿಸಿದ್ದಾರೆ. ಮೈದಾನದ ಹೊರಗೆ ಸಾಕಷ್ಟು ಸಮಯ ಕಳೆಯಲು ಹಾಗೂ ತಂತ್ರಗಾರಿಕೆ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ರಾಹುಲ್ ಬಣ್ಣಿಸಿದ್ದಾರೆ.
🗣️🗣️“𝐅𝐨𝐧𝐝𝐞𝐬𝐭 𝐦𝐞𝐦𝐨𝐫𝐢𝐞𝐬 𝐰𝐢𝐥𝐥 𝐛𝐞 𝐭𝐡𝐞 𝐜𝐨𝐧𝐧𝐞𝐜𝐭𝐢𝐨𝐧𝐬 𝐈 𝐡𝐚𝐯𝐞 𝐛𝐮𝐢𝐥𝐭”
— BCCI (@BCCI) June 28, 2024
An eventful coaching journey in the words of #TeamIndia Head Coach Rahul Dravid, who highlights the moments created beyond the cricketing field ✨👏
𝘾𝙤𝙢𝙞𝙣𝙜 𝙎𝙤𝙤𝙣 on… pic.twitter.com/iiSb3LxgZ1
ಆಸ್ಟ್ರೇಲಿಯಾ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್‌ನ ಕಠಿಣ ಸವಾಲುಗಳ ಹೊರತಾಗಿಯೂ, ರೋಹಿತ್ ಅವರ ನಾಯಕತ್ವದ ಕೌಶಲ್ಯವು ಭಾರತವನ್ನು ಟೂರ್ನಿಯಲ್ಲಿ ಅಜೇಯರಾಗಿ ಉಳಿಯುವಂತೆ ಮಾಡಿದೆ ಎಂದು ರಾಹುಲ್ ದ್ರಾವಿಡ್ ಬಣ್ಣಿಸಿದ್ದಾರೆ. 2022ರಲ್ಲಿ ಗಯಾನಾದಲ್ಲಿ ಇಂಗ್ಲೆಂಡ್ ವಿರುದ್ಧದ 10 ವಿಕೆಟ್‌ಗಳ ಸೋಲುಂಡಿದ್ದ ಟೀ ಇಂಡಿಯಾ, ಆ ಸೇಡನ್ನು ತೀರಿಸಿಕೊಳ್ಳುವ ಮೂಲಕ 2014ರ ನಂತರ ಮೊದಲ ಬಾರಿಗೆ ಟೂರ್ನಿಯ ಫೈನಲ್ ಪ್ರವೇಶಿಸಿದೆ.
ರೋಹಿತ್ ನಾಯಕತ್ವದ ಬಗ್ಗೆ ಮಾತನಾಡಿದ ದ್ರಾವಿಡ್, 'ರೋಹಿತ್ ಬಗ್ಗೆ ನಾನು ಏನು ಹೇಳಿದರೂ ಕಡಿಮೆ. ಅವರು ತಂಡದೊಂದಿಗೆ ಕೆಲಸ ಮಾಡಿದ ರೀತಿ, ಅವರ ತಂತ್ರಗಳು, ಅವರ ಪ್ರಬುದ್ಧತೆ, ನಮ್ಮೆಲ್ಲರೊಂದಿಗೆ ತಂತ್ರ, ಯೋಜನೆ ಮತ್ತು ಚರ್ಚೆಯಲ್ಲಿ ಅವರು ಕಳೆದ ಸಮಯವನ್ನು. ಒಬ್ಬ ಕ್ರಿಕೆಟಿಗನಾಗಿ ಮತ್ತು ವ್ಯಕ್ತಿಯಾಗಿ ಅವರ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಲಾರೆ ಎಂದಿದ್ದಾರೆ.
ಪಂದ್ಯಾವಳಿಯಲ್ಲಿ ಕಳಪೆ ಫಾರ್ಮ್ ನಡುವೆಯೂ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ ದ್ರಾವಿಡ್, ಅವರು ಪೂರ್ಣ ಶಕ್ತಿಯೊಂದಿಗೆ ಫೈನಲ್‌ನಲ್ಲಿ ಆಡಲಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ರಿಸ್ಕ್ ಹಾಕಿ ಕ್ರಿಕೆಟ್ ಆಡಿದಾಗ ಕೆಲವೊಮ್ಮೆ ಅದು ಸಫಲವಾಗದೇ ಹೋಗಬಹುದು. ಇವತ್ತೂ ಕೂಡ ಹಾಗೇ ಆಯಿತು. ಅವರು ಉತ್ತಮ ಸಿಕ್ಸರ್ ಕೂಡಾ ಬಾರಿಸಿದರು, ಆದರೆ ಬಳಿಕ ಔಟಾದರು. ಆಟದಲ್ಲಿ ಇವೆಲ್ಲ ಕಾಮನ್. ನಾನು ಅವರ ಆಟವನ್ನು ಇಷ್ಟಪಡುತ್ತೇನೆ ಎಂದು ದ್ರಾವಿಡ್ ಹೇಳಿದ್ದಾರೆ.
ಟಿ20 ವಿಶ್ವಕಪ್ ಮುಕ್ತಾಯದ ನಂತರ ಟೀಂ ಇಂಡಿಯಾಗೆ ಹೊಸ ಕೋಚ್ ಬರಲಿದ್ದಾರೆ. ಕಾರಣ ಇದು ದ್ರಾವಿಡ್ಗೆ ಭಾರತ ತಂಡದೊಂದಿಗಿನ ಕೊನೆಯ ಪಂದ್ಯವೂ ಹೌದು. ಕಳೆದ ವರ್ಷ ನಡೆದ ಏಕದಿನ ಅಂತಾರಾಷ್ಟ್ರೀಯ ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಉತ್ತಮ ಹೋರಾಟದ ನಡುವೆಯೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಟೂರ್ನಿಯಲ್ಲಾದರೂ ಕಪ್ ಎತ್ತಿಹಿಡಿದು ತಮ್ಮ ಕೋಚ್ ಜರ್ನಿ ಮುಗಿಸುವ ಬಯಕ ದಿ ವಾಲ್ ಅವರದ್ದು. ಇಂದು ಬಾರ್ಬಡೋಸ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಇದನ್ನು ಓದಿ: ಟಿ-20 ವಿಶ್ವಕಪ್ ಫೈನಲ್: ಇಂದು ಪ್ರತಿಷ್ಟಿತ ಟ್ರೋಫಿಗಾಗಿ ಭಾರತ-ದಕ್ಷಿಣ ಆಫ್ರಿಕಾ ದಂಗಲ್ - T20 World Cup Final