ETV Bharat / sports

ಸಾನಿಯಾ ಮಿರ್ಜಾ ಜೊತೆ ಮದುವೆ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹೇಳಿದ್ದೇನು? - Mohammed Shami - MOHAMMED SHAMI

ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಸಂಬಂಧದ ಬಗ್ಗೆ ಇತ್ತೀಚೆಗೆ ವದಂತಿಗಳು ಹರಿದಾಡುತ್ತಿವೆ. ಈ ಕುರಿತು ಶಮಿ ಪಾಡ್‌ಕ್ಯಾಸ್ಟ್‌ನಲ್ಲಿ ನಡೆಸಿದ ಸಂವಾದದಲ್ಲಿ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ನೀವೇ ನೋಡಿ..

ಸಾನಿಯಾ ಮಿರ್ಜಾ ಜೊತೆ ಮದುವೆ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹೇಳಿದ್ದೇನು?
ಸಾನಿಯಾ ಮಿರ್ಜಾ ಜೊತೆ ಮದುವೆ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹೇಳಿದ್ದೇನು? (ETV Bharat)
author img

By ETV Bharat Karnataka Team

Published : Jul 20, 2024, 10:50 PM IST

ಹೈದರಾಬಾದ್: ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಸಂಬಂಧದ ಬಗ್ಗೆ ಇತ್ತೀಚೆಗೆ ವದಂತಿಗಳು ಹರಿದಾಡುತ್ತಿವೆ.. ಈ ಕುರಿತು ಶಮಿ ಪಾಡ್‌ಕ್ಯಾಸ್ಟ್‌ನಲ್ಲಿ ನಡೆಸಿದ ಸಂವಾದದಲ್ಲಿ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ್ದಾರೆ.

ಶಮಿ ಮತ್ತು ಸಾನಿಯಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಹ್ಯಾಂಡಲ್​ಗಳು ಊಹೆ ಮಾಡುತ್ತಿವೆ. ಈ ವಿಷಯದ ಬಗ್ಗೆ ಕೇಳಿದಾಗ, ಶಮಿ ಸುಳ್ಳುಗಳನ್ನು ಹರಡುವ ಎಲ್ಲಾ ಬಳಕೆದಾರರನ್ನು ತರಾಟೆಗೆ ತೆಗೆದುಕೊಂಡರು. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿರಬೇಕು ಎಂದು ಅವರು ಹೇಳಿದರು.

ಪ್ರತಿಯೊಬ್ಬರೂ ಸಾಮಾಜಿಕ ಮಾಧ್ಯಮಗಳಲ್ಲಿ ಜವಾಬ್ದಾರಿಯುತವಾಗಿರಬೇಕು ಮತ್ತು ಆಧಾರರಹಿತ ಸುದ್ದಿಗಳನ್ನು ಹರಡಬಾರದು ಎಂದು ನಾನು ಒತ್ತಾಯಿಸುತ್ತೇನೆ. ಇದು ವಿಲಕ್ಷಣವಾಗಿದೆ ಮತ್ತು ಮೋಜಿಗೋಸ್ಕರ ಉದ್ದೇಶಪೂರ್ವಕವಾಗಿ ಮಾಡಲಾಗಿದೆ. ಆದರೆ ಏನು ಮಾಡಬಹುದು? ನಾನು ನನ್ನ ಫೋನ್ ತೆರೆದರೆ ನಾನು ಆ ಮೀಮ್​ಗಳನ್ನು ನೋಡಬಹುದು. ಆದರೆ ಮೀಮ್ ಗಳನ್ನು ಮೋಜಿಗಾಗಿ ತಯಾರಿಸಲಾಗಿದೆ ಎಂದು ನಾನು ಹೇಳಲು ಬಯಸುತ್ತೇನೆ. ಆದರೆ ಅವು ಯಾರೊಬ್ಬರ ಜೀವನಕ್ಕೆ ಸಂಬಂಧಿಸಿದ್ದಾಗಿದ್ದರೆ, ನೀವು ಅದರ ಬಗ್ಗೆ ಯೋಚಿಸಬೇಕು ಎಂದರು.

ಈ ಜನರು ಅನ್​ವೆರಿಫೈಡ್​ ಪುಟಗಳಿಂದ ಸುದ್ದಿ ಹಂಚಿಕೊಳ್ಳುತ್ತಾರೆ. ಆದರೆ ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ ಅನ್​ವೆರಿಫೈಡ್ ಪುಟದಿಂದ ಈ ಎಲ್ಲಾ ವಿಷಯಗಳನ್ನು ಹೇಳುವ ಧೈರ್ಯ ನಿಮಗೆ ಇದ್ದರೆ, ನಾನು ಉತ್ತರಿಸುತ್ತೇನೆ. ಯಶಸ್ಸನ್ನು ಸಾಧಿಸಲು ಪ್ರಯತ್ನಿಸಿ, ಜನರಿಗೆ ಸಹಾಯ ಮಾಡಿ ಮತ್ತು ನಿಮ್ಮನ್ನು ನವೀಕರಿಸಿಕೊಳ್ಳಿ ಆಗ ನೀವು ಉತ್ತಮ ವ್ಯಕ್ತಿ ಎಂದು ನಾನು ನಂಬುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಕಳೆದ ವರ್ಷ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಶಮಿ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಶಮಿ ಕೆಲ ದಿನಗಳ ಹಿಂದೆ ನೆಟ್​ನಲ್ಲಿ ಬೌಲಿಂಗ್​ ಅಭ್ಯಾಸ ಮಾಡುತ್ತಾ ಕಾಣಿಸಿಕೊಂಡಿದ್ದರು. ಭಾರತವು ಪ್ರಸ್ತುತ ಶ್ರೀಲಂಕಾ ವಿರುದ್ಧ ವೈಟ್-ಬಾಲ್ ಸರಣಿಯಲ್ಲಿ ಆಡುತ್ತಿದೆ, ನಂತರ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ.

ಇದನ್ನೂ ಓದಿ: "ಕಾರ್ಟೂನ್​ ಹೇಳಿಕೆಗಳನ್ನು ನಿಲ್ಲಿಸಿ": ಇಂಜಮಾಮ್​ ಉಲ್​ ಹಕ್​​ಗೆ ಗುಮ್ಮಿದ ಮೊಹಮದ್​ ಶಮಿ - Mohammed Shami

ETV Bharat Logo

Copyright © 2025 Ushodaya Enterprises Pvt. Ltd., All Rights Reserved.