ETV Bharat / sports

ಟಿ20 ವಿಶ್ವಕಪ್​ ಮಾದರಿ ಹೇಗಿರಲಿದೆ? ಟೀಂ ಇಂಡಿಯಾದ ಅಭಿಯಾನ ಯಾವಾಗ ಶುರು? - T20 World Cup - T20 WORLD CUP

ಜೂನ್​​ 2 ರಿಂದ ವೆಸ್ಟ್​ ಇಂಡೀಸ್​ ಮತ್ತು ಅಮೆರಿಕದಲ್ಲಿ ಟಿ20 ಕ್ರಿಕೆಟ್​ ವಿಶ್ವಕಪ್​ ಆರಂಭವಾಗಲಿದೆ. ಯಾವೆಲ್ಲಾ ತಂಡಗಳು ಭಾಗಿ, ಟೂರ್ನಿಯ ಮಾದರಿಯ ಸಂಪೂರ್ಣ ವಿವರ ಇಲ್ಲಿದೆ.

ಟಿ20 ವಿಶ್ವಕಪ್​
ಟಿ20 ವಿಶ್ವಕಪ್​
author img

By ETV Bharat Karnataka Team

Published : Apr 30, 2024, 6:15 PM IST

ಹೈದರಾಬಾದ್: ಐಪಿಎಲ್​ ಹವಾದ ಬೆನ್ನಲ್ಲೇ ಟಿ20 ವಿಶ್ವಕಪ್​ ಜ್ವರ ಏರಲಿದೆ. ಜೂನ್​ 2 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಆಡಿಸುವ ಟೂರ್ನಿ ಆರಂಭವಾಗಲಿದೆ. ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಟೂರ್ನಿಯ ಆತಿಥ್ಯ ವಹಿಸಿದ್ದು, ಒಂದು ತಿಂಗಳು ಕಾಲ ಕ್ರಿಕೆಟ್​ ಜಾತ್ರೆ ನಡೆಯಲಿದೆ. ಒಟ್ಟು 55 ಪಂದ್ಯಗಳು ನಡೆಯಲಿವೆ. ವಿಶೇಷವೆಂದರೆ ಈ ಬಾರಿ 20 ತಂಡಗಳು ಕಪ್​ಗಾಗಿ ಸೆಣಸಾಡಲಿವೆ.

ಮೊಟ್ಟ ಮೊದಲ ಬಾರಿಗೆ ಅಮೆರಿಕ ಟಿ20 ವಿಶ್ವಕಪ್​ ಟೂರ್ನಿಯ ಆತಿಥ್ಯ ವಹಿಸಿಕೊಂಡಿದೆ. ಐಸಿಸಿ ನಡೆಸುತ್ತಿರುವ 9ನೇ ಆವೃತ್ತಿಯ ಚುಟುಕು ಮಾದರಿಯ ವಿಶ್ವಕಪ್​ ಇದಾಗಿದೆ. ನಾಲ್ಕು ಹಂತಗಳಲ್ಲಿ ಟೂರ್ನಿಯನ್ನು ನಡೆಸಲಾಗುತ್ತಿದೆ. ಈಗಾಗಲೇ ಅರ್ಹತಾ ಪಂದ್ಯಗಳನ್ನು ನಡೆಸಲಾಗಿದ್ದು, 10 ತಂಡಗಳು ವಿಶ್ವಕಪ್​ ಅವಕಾಶ ಗಿಟ್ಟಿಸಿಕೊಂಡಿವೆ. ಕ್ರಿಕೆಟ್​ನ ಪವರ್​ಹೌಸ್​ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ, ನ್ಯೂಜಿಲ್ಯಾಂಡ್​, ವೆಸ್ಟ್​ ಇಂಡೀಸ್​, ಬಾಂಗ್ಲಾದೇಶ, ಆಫ್ಘಾನಿಸ್ತಾನ ಜೊತೆ ಹೊಸ ತಂಡಗಳು ಸೆಣಸಾಟ ನಡೆಸಲಿವೆ. ಟೂರ್ನಿಯ ನೇತೃತ್ವ ವಹಿಸುತ್ತಿರುವ ಅಮೆರಿಕ ನೇರ ಅರ್ಹತೆ ಪಡೆದುಕೊಂಡಿದೆ.

ಇನ್ನು, ಟಿ20 ವಿಶ್ವಕಪ್​ನ ಚೊಚ್ಚಲ ಆವೃತ್ತಿಯ ಚಾಂಪಿಯನ್​ ಭಾರತ ಜೂನ್​ 5 ರಂದು ಐರ್ಲೆಂಡ್​ ವಿರುದ್ಧ ನ್ಯೂಯಾರ್ಕ್​ನಲ್ಲಿ ಕಣಕ್ಕಿಳಿಯುವ ಮೂಲಕ ವಿಶ್ವಕಪ್​ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ವಿಶ್ವವೇ ಎದುರು ನೋಡುತ್ತಿರುವ ಭಾರತ v/s ಪಾಕಿಸ್ತಾನ ನಡುವಿನ ಪಂದ್ಯ ಜೂನ್​ 9 ರಂದು ನ್ಯೂಯಾರ್ಕ್​ನಲ್ಲಿ ನಡೆಯಲಿದೆ.

ಟೂರ್ನಿಯ ಮಾದರಿ ಹೀಗಿದೆ; 20 ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ತಲಾ 5 ತಂಡಗಳಿವೆ. ಭಾರತ ಮತ್ತು ಪಾಕಿಸ್ತಾನ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ಬಿ ಗುಂಪಿನಲ್ಲಿವೆ. ಲೀಗ್​ ಹಂತದಲ್ಲಿ ಪ್ರತಿ ತಂಡ ನಾಲ್ಕು ಪಂದ್ಯಗಳನ್ನು ಆಡಲಿವೆ. ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೂಪರ್​ 8 ಹಂತಕ್ಕೆ ತಲುಪಲಿವೆ. ಈ ಹಂತದಲ್ಲಿ ಟಾಪ್​ 2 ಸ್ಥಾನ ಗಳಿಸುವ ತಂಡಗಳು ಸೆಮಿಫೈನಲ್​ ತಲುಪಲಿವೆ. ಇಲ್ಲಿ ಗೆದ್ದವರು ಫೈನಲ್​ನಲ್ಲಿ ಟ್ರೋಫಿಗಾಗಿ ಹೋರಾಡಲಿದ್ದಾರೆ. ಜೂನ್​ 26, 27 ರಂದು ಸೆಮೀಸ್​ ನಡೆದರೆ, ಜೂನ್​ 29 ರಂದು ಫೈನಲ್​ ಪಂದ್ಯ ವೆಸ್ಟ್​ಇಂಡೀಸ್​ನ ಬಾರ್ಬೊಡೋಸ್​ನಲ್ಲಿ ನಡೆಯಲಿದೆ.

ಭಾರತ ತಂಡದ ಲೀಗ್​ ಪಂದ್ಯಗಳು:

ಜೂನ್ 5 ರಂದು, ಭಾರತ vs ಐರ್ಲೆಂಡ್ (ನ್ಯೂಯಾರ್ಕ್)

ಜೂನ್ 9 ರಂದು, ಭಾರತ vs ಪಾಕಿಸ್ತಾನ (ನ್ಯೂಯಾರ್ಕ್)

ಜೂನ್ 12 ರಂದು, ಭಾರತ vs ಅಮೆರಿಕ (ನ್ಯೂಯಾರ್ಕ್)

ಜೂನ್ 15 ರಂದು, ಭಾರತ vs ಕೆನಡಾ (ಫ್ಲೋರಿಡಾ)

ಗುಂಪುವಾರು ತಂಡಗಳ ವಿಂಗಡಣೆ ಹೀಗಿದೆ:

ಎ ಗುಂಪು: ಕೆನಡಾ, ಭಾರತ, ಐರ್ಲೆಂಡ್​, ಪಾಕಿಸ್ತಾನ, ಅಮೆರಿಕ

ಬಿ ಗುಂಪು; ಇಂಗ್ಲೆಂಡ್​, ಆಸ್ಟ್ರೇಲಿಯಾ, ನಮೀಬಿಯಾ, ಓಮನ್​, ಸ್ಕಾಟ್ಲೆಂಡ್​

ಸಿ ಗುಂಪು; ಆಫ್ಘಾನಿಸ್ತಾನ, ನ್ಯೂಜಿಲ್ಯಾಂಡ್​, ಪಪುವಾ ನ್ಯೂಗಿನಿಯಾ, ಉಗಾಂಡ, ವೆಸ್ಟ್​​ ಇಂಡೀಸ್​

ಡಿ ಗುಂಪು; ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನೇಪಾಳ, ನೆದರ್​ಲ್ಯಾಂಡ್​​

ಇದನ್ನೂ ಓದಿ: ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ರೆಡಿ: ಸ್ಯಾಮ್ಸನ್‌, ಚಹಲ್, ದುಬೆಗೆ ಛಾನ್ಸ್‌; ಕೆ.ಎಲ್‌.ರಾಹುಲ್ ಮಿಸ್‌ - T20 World Cup

ETV Bharat Logo

Copyright © 2024 Ushodaya Enterprises Pvt. Ltd., All Rights Reserved.