ICC Chairman Jay Saha Salaray: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿಯಾಗಿದ್ದ ಜಯ್ ಶಾ ಇದೀಗ ICC ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿಕೊಂಡಿದ್ದಾರೆ. ಅವರು ಭಾನುವಾರ (ಇಂದು) ಐಸಿಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು 2 ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
35 ವರ್ಷದ ಜಯ್ ಶಾ ಐಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇದಷ್ಟೇ ಅಲ್ಲದೇ ಐಸಿಸಿ ಅಧ್ಯಕ್ಷಗಿರಿ ವಹಿಸಿಕೊಂಡ ಐದನೇ ಭಾರತೀಯರಾಗಿದ್ದಾರೆ. ಈ ಹಿಂದೆ ಜಗಮೋಹನ್ ದಾಲ್ಮಿಯಾ (1997-2000), ಶರದ್ ಪವಾರ್ (2010-12), ಎನ್ ಶ್ರೀನಿವಾಸನ್ (2014-15) ಮತ್ತು ಶಶಾಂಕ್ ಮನೋಹರ್ (2015-2020) ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
A new chapter of global cricket begins today with Jay Shah starting his tenure as ICC Chair.
— ICC (@ICC) December 1, 2024
Details: https://t.co/y8RKJEvXvl pic.twitter.com/Fse4qrRS7a
ಜಯ್ ಶಾ ಜರ್ನಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರರಾಗಿರುವ ಜಯ್ ಶಾ 2009ರಲ್ಲಿ ಕ್ರಿಕೆಟ್ ಆಡಳಿತ ವ್ಯವಹಾರಗಳ ಮೂಲಕ ತಮ್ಮ ಆಳ್ವಿಕೆಯನ್ನು ಪ್ರಾರಂಭಿಸಿದರು. ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶಾ, ಅಹಮದಾಬಾದ್‌ನಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
I thank all Member Boards for their trust and support. Together, we will strive to take cricket to unprecedented heights, inspiring the next generation and uniting communities through our great game of cricket.
— Jay Shah (@JayShah) December 1, 2024
ಬಳಿಕ 2019ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಏಷ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಮತ್ತು ಐಸಿಸಿ ಆರ್ಥಿಕ ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಏತನ್ಮಧ್ಯೆ, ಗ್ರೆಗ್ ಬಾರ್ ಕ್ಲೇ ಅವರು ನವೆಂಬರ್ 2020 ರಿಂದ ICC ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಇದೀಗ ಬಾರ್ ಕ್ಲೇ ಸ್ಥಾನಕ್ಕೆ ಜಯ್ ಶಾ ನೇಮಕ ಆಗಿದ್ದಾರೆ.
ಜಯ್ ಶಾ ಅವರ ಸಂಬಳ ಎಷ್ಟು?
ಐಸಿಸಿಯಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ವಿಶೇಷ ವೇತನವೇನೂ ಇರುವುದಿಲ್ಲ. ಆದರೆ, ಮಂಡಳಿಯು ಅವರ ಕರ್ತವ್ಯಗಳಿಗೆ ಅನುಗುಣವಾಗಿ ವಿಶೇಷ ಭತ್ಯೆ ಮತ್ತು ಸೌಲಭ್ಯಗಳನ್ನು ಒದಗಿಸುತ್ತದೆ. ICCಗೆ ಸಂಬಂಧಿಸಿದ ಸಭೆಗಳು ಮತ್ತು ಪ್ರವಾಸಗಳಿಗೆ ಹಾಜರಾಗುವಾಗ ದೈನಂದಿನ ಭತ್ಯೆ, ಪ್ರಯಾಣ ಮತ್ತು ಹೋಟೆಲ್ ವಸತಿಗಳನ್ನು ಒದಗಿಸಲಾಗುತ್ತದೆ. ಆದರೆ, ಐಸಿಸಿ ಇದುವರೆಗೆ ಈ ಮೊತ್ತದ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ. ಆದರೆ, ಐಸಿಸಿ ಭತ್ಯೆಗಳು ಬಹುತೇಕ ಬಿಸಿಸಿಐನಂತೆಯೇ ಇರುತ್ತವೆ ಎಂಬ ಸುದ್ದಿ ಹೊರಬಿದ್ದಿದೆ.
ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷ ಮತ್ತು ಖಜಾಂಚಿ ಹುದ್ದೆಗಳನ್ನು ಹೊಂದಿರುವ ಅಧಿಕಾರಿಗಳಿಗೆ ಎಲ್ಲಾ ಖರ್ಚು ವೆಚ್ಚ ಸೇರಿಸಿ 1000 ಡಾಲರ್ ಅಂದರೆ ಸುಮಾರು 82 ಸಾವಿರ ರೂಪಾಯಿ ಭತ್ಯೆ ಸಿಗುತ್ತದೆ. ಪ್ರತಿದಿನ ಐಸಿಸಿ ಸಭೆಗಳಿಗೆ ಅಥವಾ ಟೀಮ್ ಇಂಡಿಯಾಗೆ ಸಂಬಂಧಿಸಿದ ವಿದೇಶಿ ಪ್ರವಾಸಗಳಿಗೆ ಹೋದರೆ ವಿಮಾನಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುವ ಸೌಲಭ್ಯವನ್ನು ಪಡೆಯುತ್ತಾರೆ.
ಇದನ್ನೂ ಓದಿ: Champions Trophy 2025: ಕೊನೆಗೂ ಹೈಬ್ರಿಡ್ ಮಾದರಿಗೆ ಒಪ್ಪಿದ ಪಾಕ್: ಆದರೆ 3 ಷರತ್ತು ವಿಧಿಸಿದ PCB!