ETV Bharat / sports

ಕೊಹ್ಲಿಯೇ ಬೆಸ್ಟ್​, ನನಗೆ ಉತ್ತಮ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ, ಈ ಸಲ ಕಪ್​ ನಮ್ದೆ: ಮಾಜಿ ಮಾಲೀಕ ಮಲ್ಯ - Mallya on Kohli - MALLYA ON KOHLI

IPL 2024: RCB ಮೊದಲ 8 ಪಂದ್ಯಗಳಲ್ಲಿ 7 ರಲ್ಲಿ ಸೋಲುವ ಮೂಲಕ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತ್ತು. ಆದರೆ, ನಂತರ 6 ಪಂದ್ಯಗಳನ್ನು ಸತತ ಗೆಲುವುಗಳನ್ನು ಸಾಧಿಸುವ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಆರ್‌ಸಿಬಿ ಉತ್ತಮ ಫಾರ್ಮ್‌ನಲ್ಲಿದೆ ಮತ್ತು ಈ ಬಾರಿ ಕಪ್​ ನಮ್ದೆ ಆಗಬಹುದು ಎಂದು ವಿಜಯ್ ಮಲ್ಯ ಅಭಿಪ್ರಾಯಪಟ್ಟಿದ್ದಾರೆ.

BETTER CHOICES  EX RCB OWNER MALLYA  ROYAL CHALLENGERS BENGALURU  IPL
ಮಾಜಿ ಮಾಲೀಕ ಮಲ್ಯ (ಕೃಪೆ: ETV Bharat (ಸಂಗ್ರಹ ಚಿತ್ರ))
author img

By PTI

Published : May 22, 2024, 3:01 PM IST

ನವದೆಹಲಿ: IPL 2024 ರ ಪ್ಲೇಆಫ್ ಪಂದ್ಯಗಳು ಪ್ರಾರಂಭವಾಗಿವೆ. ಎಲಿಮಿನೇಟರ್ ಪಂದ್ಯ ಇಂದು ಅಂದರೆ ಮೇ 22 ರಂದು ನಡೆಯಲಿದೆ. ಈ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು ಮೇ 24 ರಂದು ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕ್ವಾಲಿಫೈಯರ್ 2 ಪಂದ್ಯವನ್ನು ಆಡಲಿದೆ. ಆದರೆ ಎಲಿಮಿನೇಟರ್‌ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಅವರು ಬೆಂಗಳೂರು ತಂಡಕ್ಕೆ ಶುಭ ಹಾರೈಸಿದ್ದಾರೆ.

IPL 2024 Eliminator RR vs RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಸೀಸನ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ ಆಫ್ ತಲುಪಿದೆ. ಒಂದು ಸಮಯದಲ್ಲಿ ತಂಡವು ಮೊದಲ 8 ಪಂದ್ಯಗಳಲ್ಲಿ 7 ರಲ್ಲಿ ಸೋತಿತ್ತು. ಆದರೆ ನಂತರ ಅವರು ಉತ್ತಮ ಪುನರಾಗಮನ ಮಾಡಿದೆ.

ಆರ್​ಸಿಬಿ ಎಷ್ಟು ಬಾರಿ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ?: ಸತತ ಆರು ಗೆಲುವು ಸಾಧಿಸುವ ಮೂಲಕ ಈ ಬಾರಿ ಬೆಂಗಳೂರು ತಂಡ ಐಪಿಎಲ್ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಐಪಿಎಲ್ 2024 ರ ಮೊದಲು ಬೆಂಗಳೂರು 9 ಬಾರಿ ಪ್ಲೇ ಆಫ್‌ಗೆ ಅರ್ಹತೆ ಪಡೆದಿರುವುದು ಗಮನಾರ್ಹ. ಬೆಂಗಳೂರು ಕೂಡ ಮೂರು ಬಾರಿ ಫೈನಲ್ ಪಂದ್ಯ ಆಡಿದೆ. ಆದರೆ ಒಮ್ಮೆಯೂ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ.

ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅತೀ ಹೆಚ್ಚು ರನ್​ ಗಳಿಸಿದ ಸೀಸನ್​ ಯಾವುದು ಗೊತ್ತಾ?: ವಿರಾಟ್ ಕೊಹ್ಲಿ ಈ ಸೀಸನ್​ನಲ್ಲಿ ಇದುವರೆಗೆ 14 ಪಂದ್ಯಗಳನ್ನು ಆಡಿದ್ದಾರೆ. ಈ 14 ಪಂದ್ಯಗಳಲ್ಲಿ ಅವರು 155.60 ಸ್ಟ್ರೈಕ್ ರೇಟ್‌ನಲ್ಲಿ 708 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಅರ್ಧ ಶತಕ ಮತ್ತು ಒಂದು ಶತಕ ಸೇರಿದೆ. ವಿರಾಟ್ ಕೊಹ್ಲಿ ಈ ಸೀಸನ್​ನಲ್ಲಿ ಇದುವರೆಗೆ 59 ಬೌಂಡರಿ ಮತ್ತು 37 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಂದು ಸೀಸನ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೊಹ್ಲಿ. ಐಪಿಎಲ್ 2016ರಲ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು. ಇದರಲ್ಲಿ ಏಳು ಅರ್ಧ ಶತಕ ಹಾಗೂ ನಾಲ್ಕು ಶತಕಗಳು ಸೇರಿರುವುದು ಗಮನಾರ್ಹ.

ಓದಿ: ಇಂದು 'ರಾಯಲ್ಸ್'​ ಎಲಿಮಿನೇಟರ್​ ಫೈಟ್: ಆರ್​ಆರ್​ ವಿರುದ್ಧ ಆರ್​ಸಿಬಿ ದಾಖಲೆ ಹೇಗಿದೆ ಗೊತ್ತಾ? - RR vs RCB Eliminator

ETV Bharat Logo

Copyright © 2025 Ushodaya Enterprises Pvt. Ltd., All Rights Reserved.