ETV Bharat / sports

ಒಲಿಂಪಿಕ್ಸ್​ ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಹರ್ಮೀತ್ ದೇಸಾಯಿ: ಟೇಬಲ್​ ಟೆನಿಸ್​ನಲ್ಲಿ ಮೊದಲ ಗೆಲುವು - Harmeet Desai Beats Jordans Abo - HARMEET DESAI BEATS JORDANS ABO

ಇಂದು ನಡೆದ ಟೇಬಲ್​ ಟೆನಿಸ್​ನ ಸಿಂಗಲ್ಸ್​ ಪಂದ್ಯದಲ್ಲಿ ಭಾರತದ ಹರ್ಮೀತ್​ ದೇಸಾಯಿ ಜೋರ್ಡಾನ್‌ ಆಟಗಾರನ ವಿರುದ್ಧ ಆರಾಮದಾಯಕ ಗೆಲುವು ಸಾಧಿಸಿದ್ದಾರೆ.

ಹರ್ಮೀತ್ ದೇಸಾಯಿ
ಹರ್ಮೀತ್ ದೇಸಾಯಿ (ANI)
author img

By ETV Bharat Sports Team

Published : Jul 27, 2024, 8:46 PM IST

ಪ್ಯಾರಿಸ್ (ಫ್ರಾನ್ಸ್): ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿರುವ ಭಾರತದ ಪ್ಯಾಡ್ಲರ್ ಹರ್ಮೀತ್ ದೇಸಾಯಿ ಇಲ್ಲಿ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ 2024ರ ಟೇಬಲ್ ಟೆನಿಸ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಶನಿವಾರ ಮೊದಲ ಗೆಲುವು ಸಾಧಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಜೋರ್ಡಾನ್‌ನ ಅಬೋ ಯಮನ್ ಝೈದ್ ವಿರುದ್ಧ 4-0 ಅಂತರದಲ್ಲಿ ಆರಾಮದಾಯಕ ಜಯ ಸಾಧಿಸಿದರು. ಝೈದ್​ ವಿರುದ್ಧ 11-7, 11-9, 11-5, ಮತ್ತು 11-5 ಅಂಕಗಳನ್ನು ದಾಖಲಿಸುವ ಮೂಲಕ ತಮ್ಮ ಎದುರಾಳಿಯನ್ನು ಸೋಲಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. 30 ನಿಮಿಷಗಳ ಕಾಲ ನಡೆದ ಏಕಪಕ್ಷೀಯ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 538ನೇ ಶ್ರೇಯಾಂಕಿತ ಎದುರಾಳಿಯನ್ನು ದೇಸಾಯಿ ಯಾವುದೇ ಆಯಾಸವಿಲ್ಲದೇ ಸೋಲಿಸಿದರು.

ಮೊದಲ ಸುತ್ತಿನಲ್ಲಿ ಆರಾಮದಾಯಕವಾದ ಗೆಲುವು ಸಾಧಿಸಿದ ನಂತರ, ಹರ್ಮೀತ್ ಅವರು 2ನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದರು ಮತ್ತು ಸ್ಪರ್ಧೆಯ ಉಳಿದ ಸುತ್ತಿನಲ್ಲೂ ಅದೇ ರೀತಿಯ ಆಟ ಮುಂದವರೆಸಿ ಗೆಲುವು ಸಾಧಿಸಿದರು.

ಮುಂದಿನ ಪಂದ್ಯ: 31 ವರ್ಷದ ಆಟಗಾರ ದಕ್ಷಿಣ ಪ್ಯಾರಿಸ್ ಅರೆನಾ 4ರಲ್ಲಿ ಪುರುಷರ ಸಿಂಗಲ್ಸ್ ಟೇಬಲ್ ಟೆನಿಸ್ ಈವೆಂಟ್‌ನ 64ನೇ ಸುತ್ತಿನಲ್ಲಿ ಫ್ರಾನ್ಸ್‌ನ ಲೆಬ್ರಾನ್ ಫೆಲಿಕ್ಸ್ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಆಡಲಿದ್ದಾರೆ. ಈ ಪಂದ್ಯ ಜುಲೈ 28 ರಂದು ಭಾರತೀಯ ಕಾಲಮಾನ ರಾತ್ರಿ 11:30ಕ್ಕೆ ಆರಂಭವಾಗಲಿದೆ.

ವಿಶ್ವದ 71ನೇ ಶ್ರೇಯಾಂಕದ ಟೇಬಲ್ ಟೆನಿಸ್ ಆಟಗಾರ ಹರ್ಮೀತ್ ದೇಸಾಯಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆಯಲ್ಲಿದ್ದಾರೆ. ಟೇಬಲ್ ಟೆನಿಸ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾದ ಈ ಆಟಗಾರ, ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಜಾಗತಿಕ ಸ್ಪರ್ಧೆಗಳಲ್ಲಿ ಹರ್ಮೀತ್ ದೇಸಾಯಿ ಅವರ ಸಾಧನೆ ಅತ್ಯುತ್ತಮವಾಗಿದೆ. 2019ರಲ್ಲಿ, ಹರ್ಮೀತ್ ಇಂಡೋನೇಷ್ಯಾದಲ್ಲಿ ನಡೆದ ITTF ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದರು. ಮತ್ತು ಇದರಲ್ಲಿ ಗೆಲುವು ಸಾಧಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಹರ್ಮೀತ್ ದೇಸಾಯಿ ಅವರು 2018 ಮತ್ತು 2022ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಭಾಗವಹಿಸಿದ್ದರು ಮತ್ತು ಎರಡೂ ಆವೃತ್ತಿಗಳಲ್ಲಿ ಟೀಮ್ ಈವೆಂಟ್‌ಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ, ಹರ್ಮೀತ್​ ಅವರು 2021ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಜಯಿಸಿದ್ದರು. ಇದೀಗ ಈ ಬಾರಿಯ ಒಲಿಂಪಿಕ್ಸ್​ನಲ್ಲೂ ಪದಕ ಗೆಲ್ಲುವ ನಿರೀಕ್ಷೆ ಇದೆ.

ಇದನ್ನೂ ಓದಿ: ಪ್ಯಾರಿಸ್​ ಒಲಿಂಪಿಕ್ಸ್​ 2024: ಶೂಟಿಂಗ್​ನಲ್ಲಿ ಮೊದಲ ಚಿನ್ನ ಗೆದ್ದ ಚೀನಾ; ಭಾರತಕ್ಕೆ ನಿರಾಸೆ - Paris Olympics 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.