ETV Bharat / sports

'ತಂಡವೊಂದು ಮೂರು ಬಾಗಿಲು': ಪಾಕಿಸ್ತಾನ ತಂಡದಲ್ಲಿ ಗುಂಪು ಗುದ್ದಾಟವೇ ವಿಶ್ವಕಪ್​ ಸೋಲಿಗೆ ಕಾರಣ? - Pakistan cricket team - PAKISTAN CRICKET TEAM

ಪಾಕಿಸ್ತಾನ ತಂಡದಲ್ಲಿ ಗುಂಪು ಘರ್ಷಣೆ ಜೋರಾಗಿದೆ. ಇದು ವಿಶ್ವಕಪ್​ನಲ್ಲಿ ಕೆಟ್ಟ ಪರಿಣಾಮ ತಂದಿದೆ. ಆಟಗಾರರ ನಡುವಿನ ಮುಸುಕಿನ ಗುದ್ದಾಟಕ್ಕೆ ದೊಡ್ಡ ಬೆಲೆ ತೆರುವಂತಾಗಿದೆ.

ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ (ETV Bharat)
author img

By PTI

Published : Jun 15, 2024, 5:59 PM IST

ಕರಾಚಿ (ಪಾಕಿಸ್ತಾನ): ದೈತ್ಯ ಬೌಲಿಂಗ್​ ಪಡೆಯನ್ನು ಹೊಂದಿದ್ದರೂ, ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಲೀಗ್​ ಹಂತದಲ್ಲಿ ಹೊರಬಿದ್ದಿರುವುದು ಭಾರೀ ಟೀಕೆಗೆ ಗುರಿಯಾಗಿದೆ. ಜೊತೆಗೆ ಹಿರಿಯ ಆಟಗಾರರ ಕಳಪೆ ಪ್ರದರ್ಶನ, ಮುಸುಕಿನ ಗುದ್ದಾಟ ಇಡೀ ತಂಡವನ್ನೇ ಬಲಿ ಪಡೆದಿದೆ. ಇದೆಲ್ಲ ಮನಗಂಡಿರುವ ಕ್ರಿಕೆಟ್ ಮಂಡಳಿ ತಂಡಕ್ಕೆ ಸರ್ಜರಿ ಮಾಡುವ ಬಗ್ಗೆ ಯೋಚಿಸಿದೆ.

ವಿಶ್ವಕಪ್​ ಆತಿಥ್ಯ ವಹಿಸಿರುವ ಕ್ರಿಕೆಟ್​ ಶಿಶು ಅಮೆರಿಕದ ಎದುರು ಸೂಪರ್​ ಓವರ್​ನಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿತು. ಬಲಿಷ್ಠ ಬೌಲಿಂಗ್​ ಪಡೆಯನ್ನು ಹೊಂದಿದಾಗ್ಯೂ ತಂಡ ಕಳಪೆ ಆಟವಾಡಿದ್ದು, ನಾಯಕ ಬಾಬರ್​ ಅಜಂ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಇತ್ತೀಚಿಗಷ್ಟೇ ಅವರು ತಂಡದ ನಾಯಕತ್ವ ವಹಿಸಿದ್ದರು.

ತಂಡದಲ್ಲಿ ಮೂರು ಗುಂಪುಗಳು: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮೂಲಗಳ ಪ್ರಕಾರ, ನಾಯಕನಾಗಿ ಪುನರಾಗಮನದ ನಂತರ ಬಾಬರ್ ಅಜಮ್ ಮುಂದೆ ತಂಡವನ್ನು ಒಗ್ಗೂಡಿಸುವುದೇ ದೊಡ್ಡ ಸವಾಲಾಗಿತ್ತು. ನಾಯಕ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ವೇಗಿಶಾಹೀನ್ ಶಾ ಆಫ್ರಿದಿ ತೀವ್ರ ಅಸಮಾಧಾನಗೊಂಡಿದ್ದಾರೆ. ತಮ್ಮನ್ನು ನಾಯಕತ್ವಕ್ಕೆ ಪರಿಗಣಿಸದಿರುವುದು ಮೊಹಮ್ಮದ್ ರಿಜ್ವಾನ್​ಗೆ ಬೇಸರ ತರಿಸಿದೆ. ಇದು ತಂಡದ ತಾಳಮೇಳ ತಪ್ಪಿಸಿದೆ.

ತಂಡದಲ್ಲಿ ಬಾಬರ್ ಅಜಮ್, ಶಾಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್​ ನೇತೃತ್ವದಲ್ಲಿ ಮೂರು ಗುಂಪುಗಳಿವೆ. ಮಹಮದ್​ ಅಮೀರ್​, ಇಮಾದ್ ವಾಸಿಮ್ ಅವರಂತಹ ಹಿರಿಯರು ತಂಡದಲ್ಲಿ ಸ್ಥಾನ ಪಡೆದರೂ, ಚುಟುಕು ಮಾದರಿಗೆ ಅವರ ಒಗ್ಗಿಕೊಳ್ಳದೇ ಇರುವುದು ವಿಶ್ವಕಪ್​ ಲೀಗ್​ನಿಂದಲೇ ಹೊರಬೀಳಲು ಕಾರಣವಾಯಿತು ಎಂದು ತಂಡದ ಮೂಲವೊಂದು ತಿಳಿಸಿದೆ.

ಇಮಾದ್​ ಮತ್ತು ಅಮೀರ್​ ಫ್ರಾಂಚೈಸಿ ಲೀಗ್​ ಬಿಟ್ಟು, ದೇಶೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚಾಗಿ ಆಡಿಲ್ಲ. ಇಬ್ಬರಿಂದ ಹೆಚ್ಚಿನ ಪಾಲುದಾರಿಕೆ ಸಿಗಲಿಲ್ಲ. ಮಹತ್ವದ ಟೂರ್ನಿಯಲ್ಲಿ ಅವರನ್ನೇ ಏಕಾಏಕಿ ಪರಿಗಣಿಸಿದ್ದು ಕೂಡ ತಂಡದ ಹಿನ್ನಡೆಗೆ ಕಾರಣವಾಗಿದೆ.

ಡ್ರೆಸ್ಸಿಂಗ್​​ ರೂಮಲ್ಲಿ ಮಾತಿಲ್ಲ: ಇನ್ನೂ ಕೆಲ ಆಟಗಾರರು ಮುಖ ನೋಡಿ ಮಾತು ಕೂಡ ಆಡುವುದಿಲ್ಲ. ಒಂದೇ ಡ್ರೆಸ್ಸಿಂಗ್​ ರೂಮ್​ನಲ್ಲಿದ್ದರೂ ಅವರ ಮಧ್ಯೆ ಹೊಂದಾಣಿಕೆ ಇಲ್ಲ. ಇದನ್ನು ಸರಿಪಡಿಸಲು ನಾಯಕ ಬಾಬರ್​ ಒದ್ದಾಡಿದ್ದೇ ಬಂತು. ಯಾವುದೇ ಲಾಭ ಆಗಿಲ್ಲ. ಕ್ರಿಕೆಟ್​ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ರಾಷ್ಟ್ರೀಯ ಆಯ್ಕೆಗಾರ ವಹಾಬ್ ರಿಯಾಜ್ ಎಲ್ಲ ಆಟಗಾರರ ಜೊತೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ತಂಡದ ಯಶಸ್ಸಿಗಾಗಿ ಒಟ್ಟಾಗಿ ಶ್ರಮಿಸಿ ಎಂದು ಬುದ್ಧಿವಾದ ಹೇಳಿದರೂ, ವೈಯಕ್ತಿಕ ಪ್ರತಿಷ್ಠೆಯನ್ನು ಯಾರೂ ಬಿಡದೇ ಇರುವುದು ತಂಡಕ್ಕೆ ಮುಳುವಾಗಿದೆ.

ತಂಡದಲ್ಲಿ ಬದಲಾವಣೆ ಬಿರುಗಾಳಿ: ವಿಶ್ವಕಪ್​ನಲ್ಲಿ ಹೀನಾಯ ಸೋಲಿನ ಬಳಿಕ ಕ್ರಿಕೆಟ್​ ಮಂಡಳಿಯು ತಂಡದಲ್ಲಿ ಮಹತ್ತರ ಬದಲಾವಣೆ ಮಾಡಲು ಮುಂದಾಗಿದೆ. ಆಟಗಾರರ ಮೌಲ್ಯಮಾಪನ ಮಾಡಿ ಅವರನ್ನು ತಂಡದಲ್ಲಿ ಮುಂದುವರಿಸಬೇಕಾ ಬೇಡವಾ ಎಂಬ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಜೊತೆಗೆ ರಾಷ್ಟ್ರೀಯ ಗುತ್ತಿಗೆ ಪಟ್ಟಿಯಲ್ಲೂ ಬದಲಾವಣೆಯಾಗಲಿದೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: 'ಇದು ನನ್ನ ಕೊನೆಯ ಟಿ20 ವಿಶ್ವಕಪ್​': ಕಿವೀಸ್​ ಹಿರಿಯ ವೇಗಿ ಟ್ರೆಂಟ್​ ಬೌಲ್ಟ್​ ಘೋಷಣೆ - Trent Boult

ETV Bharat Logo

Copyright © 2025 Ushodaya Enterprises Pvt. Ltd., All Rights Reserved.