ETV Bharat / sports

ಇಂದಿನ ಗೂಗಲ್ ಡೂಡಲ್ ನೋಡಿದ್ರಾ? ಜಸ್ಟ್ ಕ್ಲಿಕ್‌ ಮಾಡಿ, 20 ಕ್ರೀಡೆಗಳನ್ನು ಹುಡುಕಿ, ನೀವೂ ಒಲಿಂಪಿಕ್ಸ್​ ವಿಜೇತರಾಗಿ! - Playground Paris Google Doodle

ಪ್ಯಾರಿಸ್ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಗೂಗಲ್​ ಡೂಡಲ್ ಸ್ಪೆಷಲ್‌​ ಅನಿಮೇಟೆಡ್​ 'ಪ್ಲೇಗ್ರೌಂಡ್ ಪ್ಯಾರಿಸ್ 2024' ಅನ್ನು ತನ್ನ ಹೋಮ್​ಪೇಜ್​ನಲ್ಲಿ ಪ್ರಸ್ತುತಪಡಿಸಿದ್ದು, ಇದನ್ನು ಎಲ್ಲರೂ ಆಡಿ ಆನಂದಿಸಬಹುದು.

ಗೂಗಲ್ ಡೂಡಲ್ 'ಪ್ಲೇಗ್ರೌಂಡ್ ಪ್ಯಾರಿಸ್ 2024'
'ಪ್ಲೇಗ್ರೌಂಡ್ ಪ್ಯಾರಿಸ್ 2024' ಗೂಗಲ್ ಡೂಡಲ್ (Google)
author img

By ETV Bharat Karnataka Team

Published : Jul 31, 2024, 8:41 AM IST

ಪ್ರೇಮದ ನಗರಿ, ಬೆಳಕಿನ ನಗರಿ ಎಂಬ ಜನಪ್ರಿಯತೆಯ ಫ್ರಾನ್ಸ್ ರಾಜಧಾನಿ ಪ್ಯಾರಿಸ್​ನಲ್ಲಿ 2024ರ ಒಲಿಂಪಿಕ್ಸ್​ ಕ್ರೀಡಾಕೂಟ ನಡೆಯುತ್ತಿದೆ. 200ಕ್ಕೂ ವಿವಿಧ ದೇಶಗಳ ಸಾವಿರಾರು ಕ್ರೀಡಾಪಟುಗಳು ಚಿನ್ನ, ಬೆಳ್ಳಿ, ಕಂಚು ಪದಕಗಳಿಗಾಗಿ ಜಿದ್ದಾಜಿದ್ದಿನಿಂದ ಸ್ಪರ್ಧಿಸುತ್ತಿದ್ದಾರೆ. ಆಯಾಯ ದೇಶಗಳ ಕೋಟ್ಯಂತರ ಜನರು ಟಿವಿ, ಮೊಬೈಲ್​ನಲ್ಲಿ ಕ್ರೀಡಾಕೂಟ ವೀಕ್ಷಿಸಿ​ ಸ್ಪರ್ಧಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಆದರೆ ನಿಮಗಿದು ಗೊತ್ತಾ? ನಾವೂ ಕೂಡ ಒಲಿಂಪಿಕ್ಸ್​​ ಗೇಮ್ಸ್​ ಆಡಬಹುದು!. ಹೌದು. ಗೂಗಲ್​ ನಮಗಾಗಿ ಈ ಅವಕಾಶ ನೀಡಿದೆ. ಹಾಗಂತ ಪ್ಯಾರಿಸ್​ಗೆ ಹೋಗಬೇಕಿಲ್ಲ, ಮೊಬೈಲ್​, ಡೆಸ್ಕ್‌ಟಾಪ್‌ ಕಂಪ್ಯೂಟರ್‌ ಅಥವಾ ಲ್ಯಾಪ್​ಟಾಪ್​ ಇದ್ದರೆ ಸಾಕು.

ಗೂಗಲ್​ ಈ ಬಾರಿಯ ಒಲಿಂಪಿಕ್ಸ್​ ಆರಂಭವಾದಾಗಿನಿಂದ ಪ್ರತೀ ದಿನ ವಿಶೇಷ ಡೂಡಲ್ ಅ​ನ್ನು ತನ್ನ ಹೋಮ್​ಪೇಜ್​ನಲ್ಲಿ ಪ್ರಕಟಿಸುತ್ತಿದೆ. ಇಂದು ಅನಿಮೇಟೆಡ್ ಡೂಡಲ್ 'ಪ್ಲೇಗ್ರೌಂಡ್ ಪ್ಯಾರಿಸ್ 2024' ಎಂಬ ಪಿಕ್ಚರ್ ಪಝಲ್ ಗೇಮ್ ನೀಡಿದೆ. ಇದನ್ನು ಯಾರು ಬೇಕಾದರೂ ಆಡಬಹುದು.

ಹೀಗೆ ಆಡಿ: ಮೊದಲು ಗೂಗಲ್​ ಪುಟ ತೆರೆಯಿರಿ. ಅಲ್ಲಿ ಮೂರು ಅನಿಮೇಟೆಡ್​ ಚಿತ್ರಗಳೊಂದಿಗೆ ಗೂಗಲ್ ಎಂದು ಬರೆದಿದೆ. ಅದನ್ನು ಕ್ಲಿಕ್​ ಮಾಡಿ. ನಿಮಗೆ ಇಂದಿನ 'ಪ್ಲೇಗ್ರೌಂಡ್ ಪ್ಯಾರಿಸ್ 2024' ಪೇಜ್​ ತೆರೆದುಕೊಳ್ಳುತ್ತದೆ. ಅಲ್ಲಿ How to Play ಮತ್ತು Let's Play ಎಂಬ ಆಯ್ಕೆಗಳಿವೆ. ಗೇಮ್​ ಬಗ್ಗೆ ಮಾಹಿತಿ ಬೇಕಾದಲ್ಲಿ ಸಹಾಯ ತೆಗೆದುಕೊಂಡು ಆಡಬಹುದು. ಇಡೀ ಪೇಜ್​ನಲ್ಲಿ ನಿಮಗೆ ಅನಿಮೇಟೆಡ್​ ಪ್ಯಾರಿಸ್ ನಗರದ ಚಿತ್ರದೊಂದಿಗೆ ನೂರಾರು ಜನರು, ಒಲಿಂಪಿಕ್ಸ್​ ಕ್ರೀಡಾಪಟುಗಳು ಕಾಣಿಸುತ್ತವೆ. ಇಲ್ಲಿ ನಿಮಗೆ ಜೂಮ್​ ಇನ್​, ಜೂಮ್​ ಔಟ್​ ಅವಕಾಶವೂ ಇದೆ.

ಒಲಿಂಪಿಕ್ಸ್ ಕ್ರೀಡೆಗೆ ಸಂಬಂಧಿಸಿದ 20 ಕ್ರೀಡೆಗಳ ಸ್ಫರ್ಧಿಗಳನ್ನು ನೀವು ಇಲ್ಲಿ ಹುಡುಕಬೇಕು. ಪರದೆಯ ಬಲಭಾಗದಲ್ಲಿ ವಿವಿಧ ಚಿತ್ರಗಳಿವೆ. ಅದರಲ್ಲಿ ಒಂದನ್ನು ಟ್ಯಾಪ್​ ಮಾಡಿ. ಬಳಿಕ ಆ ಚಿತ್ರ​ ​ಪ್ಯಾರಿಸ್​ನ ಪ್ಲೇಗ್ರೌಂಡ್​ನಲ್ಲಿ ಎಲ್ಲಿದೆ ಎಂಬುದನ್ನು ಹುಡುಕಿ ಕ್ಲಿಕ್ಕಿಸಿ. ಹೀಗೆ ಒಂದೊಂದನ್ನೇ ಹುಡುಕುತ್ತಾ 20 ಚಿತ್ರವನ್ನು ಕಂಡುಹಿಡಿದರೆ 'ಪ್ಲೇಗ್ರೌಂಡ್ ಪ್ಯಾರಿಸ್ 2024'ನಲ್ಲಿ ನೀವು ಚಿನ್ನದ ಪದಕ ಗೆದ್ದಂತೆ!.

ಈ 'ಪ್ಲೇಗ್ರೌಂಡ್ ಪ್ಯಾರಿಸ್​ನ ಅನಿಮೇಟೆಡ್​ ಚಿತ್ರದಲ್ಲಿ 20 ಕ್ರೀಡೆಗಳಲ್ಲದೇ, ಫ್ರೆಂಚ್ ಐಕಾನ್‌ಗಳು, ಪ್ರವಾಸಿ ತಾಣಗಳು, ಪ್ರಸಿದ್ಧ ಕಟ್ಟಡಗಳನ್ನೂ ನೀವು ನೋಡಬಹುದು.

ಇದನ್ನೂ ಓದಿ: ಒಂದೇ ಒಲಿಂಪಿಕ್​ನಲ್ಲಿ ಎರಡು ಪದಕ ಪಡೆದ ಏಕೈಕ ಕ್ರೀಡಾಪಟು​; ಶೂಟಿಂಗ್​ನಲ್ಲಿ ಇತಿಹಾಸ ಬರೆದ ಮನು ಭಾಕರ್ - Paris Olympics 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.