ETV Bharat / sports

ರೋಹಿತ್​ ಶರ್ಮಾ ನಂತರ ಟೀಂ ಇಂಡಿಯಾದ ಮುಂದಿನ ಕ್ಯಾಪ್ಟನ್​ ಇವರೇ: ಸಿಕ್ಕಿತು ದೊಡ್ಡ ಸುಳಿವು! - TEAM INDIA NEXT CAPTAIN

ರೋಹಿತ್​ ಶರ್ಮಾ ಬಳಿಕ ಟೀಂ ಇಂಡಿಯಾದ ಮುಂದಿನ ನಾಯಕ ಆಗುವ ಎಲ್ಲಾ ಲಕ್ಷಣ ಈ ಆಟಗಾರನಿಗಿದೆ ಎಂದು ಮಾಜಿ ಕ್ರಿಕೆಟರ್​ ಹೇಳಿದ್ದಾರೆ.

ಟೀಂ ಇಂಡಿಯಾ ಆಟಗಾರರು
ಟೀಂ ಇಂಡಿಯಾ ಆಟಗಾರರು (IANS)
author img

By ETV Bharat Sports Team

Published : Nov 5, 2024, 2:00 PM IST

Team India Next Captain​: ಇತ್ತೀಚೆಗೆ ತವರಿನಲ್ಲಿ ನಡೆದ ಟೆಸ್ಟ್​ನಲ್ಲಿ ಟೀಂ ಇಂಡಿಯಾ (Team India) ಹೀನಾಯ ಸೋಲನುಭಸಿದೆ. ನ್ಯೂಜಿಲೆಂಡ್​ ವಿರುದ್ಧದ 3 ಪಂದ್ಯಗಳನ್ನು ಸೋತು ಸರಣಿಯನ್ನು ಕೈಚೆಲ್ಲಿದೆ. ಇದರೊಂದಿಗೆ ತವರಿನಲ್ಲಿ ನಡೆದ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ವಿಫಲವಾಗಿದೆ.​ ರೋಹಿತ್​ ಶರ್ಮಾ (Rohit Sharma), ವಿರಾಟ್​ ಕೊಹ್ಲಿ (Virat Kohli)ಯಂತಹ ದಿಗ್ಗಜ ಆಟಗಾರರಿದ್ದರೂ ತಂಡ ಹೀನಾಯವಾಗಿ ಸೋಲನ್ನು ಕಂಡಿದ್ದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಜತೆಗೆ ರೋಹಿತ್​ ನಿವೃತ್ತಿ ಹೊಂದಿದ ಬಳಿಕ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗಳು ಜನರಿಂದ ಕೇಳಿ ಬರುತ್ತಿವೆ.

ಈ ಗೊಂದಲದ ನಡುವೆಯೇ ಟೀಂ ಇಂಡಿಯಾದ ಮಾಜಿ ಆಟಗಾರ ಮೊಹ್ಮದ್​ ಕೈಫ್ (Mohammad Kaif) ರೋಹಿತ್​ ಶರ್ಮಾ ಬಳಿಕ ನಾಯಕತ್ವಕ್ಕೆ ಸೂಕ್ತ ಆಟಗಾರ ಯಾರು ಎಂಬುದನ್ನು ತಿಳಿಸಿದ್ದಾರೆ. ಮಾಧ್ಯಮವೊಂದರಲ್ಲಿ ನಡೆದ ಸಂದರ್ಶನದ ವೇಳೆ ಕೈಫ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರಸ್ತುತ ಟೀಂ ಇಂಡಿಯಾದಲ್ಲಿರುವ ಆಟಗಾರರ ಪೈಕಿ ರಿಷಭ್​ ಪಂತ್ (Rishb Pant)​ ಒಬ್ಬರೇ ರೋಹಿತ್​ ಬಳಿಕ ತಂಡದ ನಾಯಕತ್ವಕ್ಕೆ ಸೂಕ್ತ ಆಗಿದ್ದಾರೆ. ಪಂತ್​ ಬಳಿ ನಾಯಕತ್ವದ ಎಲ್ಲಾ ಲಕ್ಷಣಗಳು ಇವೆ" ಎಂದು ಹೇಳಿದ್ದಾರೆ.

ರಿಷಭ್​ ಪಂತ್​ ಮತ್ತು ಮೊಹ್ಮದ್​ ಕೈಫ್​
ರಿಷಭ್​ ಪಂತ್​ ಮತ್ತು ಮೊಹ್ಮದ್​ ಕೈಫ್​ (IANS)

"ಯಾವುದೇ ಕ್ರಮಾಂಕದಲ್ಲಿ ಮತ್ತು ಎಂತಹ ಕಠಿಣ ಸಂದರ್ಭಗಳಿದ್ದರು ಪಂತ್​ ಉತ್ತಮ ಬ್ಯಾಟಿಂಗ್​ ಮಾಡಬಲ್ಲ ಸಾಮರ್ಥ್ಯಹೊಂದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ, ಪಂತ್​ ಕ್ರೀಸ್​ನಲ್ಲಿರುವವರೆಗೂ ಕಿವೀಸ್​ ಆಟಗಾರರಿಗೆ ಪಂದ್ಯ ಗೆಲ್ಲುವ ವಿಶ್ವಾಸ ಇರಲಿಲ್ಲ. ಪಂತ್​ ಇಂಗ್ಲೆಂಡ್​, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತಹ ಕಠಿಣ ಪಿಚ್​ಗಳಲ್ಲೂ ಅದ್ಭುತ ಪ್ರದರ್ಶನ ತೋರಿದ್ದಾರೆ. ಅವರ ಬಳಿ ಯಾವುದೇ ಪಿಚ್​ ಇರಲಿ, ಪೇಸ್​ ಅಥವಾ ಸ್ಪಿನ್ ಬೌಲರ್​ ಇರಲಿ ಬ್ಯಾಟಿಂಗ್​ ಮಾಡಬಲ್ಲರು" ಎಂದಿದ್ದಾರೆ.

ಇದನ್ನೂ ಓದಿ: ಟೆಸ್ಟ್​ ಸರಣಿಗೂ ಮುನ್ನ ದುಲೀಪ್​ ಟ್ರೋಫಿ ಆಡಲು ನಿರಾಕರಿಸಿದ್ರು ಕೊಹ್ಲಿ, ರೋಹಿತ್​, ಬುಮ್ರಾ: ಇದೇ ಸೋಲಿಗೆ ಕಾರಣವಾಯ್ತಾ?

ಕೈಫ್​ ಹೇಳಿದಂತೆ, ರಿಷಭ್​ ಪಂತ್​ ಕಿವೀಸ್​ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಕಿವೀಸ್​ ಸ್ಪಿನ್​ ದಾಳಿ ಎದುರಿಸಲು ಹಿರಿಯ ಆಟಗಾರರು ವಿಫಲವಾದರೂ ಪಂತ್​ ಮಾತ್ರ ಲೀಲಾಜಾಲವಾಗಿ ಬ್ಯಾಟ್​ ಬೀಸಿದ್ದಾರೆ. ಕಿವೀಸ್​ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 6 ಇನ್ನಿಂಗ್ಸ್​ಗಳನ್ನು ಆಡಿದ ಪಂತ್​ ಒಟ್ಟು 261 ರನ್​ ಕಲೆ ಹಾಕಿದ್ದಾರೆ. ಇದರಲ್ಲಿ 3 ಅರ್ಧಶತಕ ಸೇರಿವೆ. ಮೊದಲ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 1 ರನ್​ ಅಂತರದಿಂದ ಶತಕ ವಂಚಿತರಾಗಿದ್ದರು.

ಇದನ್ನೂ ಓದಿ: ನಿವೃತ್ತಿಗೆ ಮುಂದಾದ ಭಾರತದ ಕ್ರಿಕೆಟಿಗರು ಯಾರೆಲ್ಲಾ?: ವಿಶ್ವಕಪ್​ನಲ್ಲಿ ಹೆಚ್ಚು ವಿಕೆಟ್​ ಪಡೆದ ಸ್ಟಾರ್​ ಬೌಲರ್ ಈ ಪಟ್ಟಿಯಲ್ಲಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.