ETV Bharat / sports

ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ದಿನೇಶ್​ ಕಾರ್ತಿಕ್​ - Dinesh Karthik Retirement - DINESH KARTHIK RETIREMENT

ದಿನೇಶ್​ ಕಾರ್ತಿಕ್​ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ದಿನೇಶ್​ ಕಾರ್ತಿಕ್​
ದಿನೇಶ್​ ಕಾರ್ತಿಕ್​ (ETV Bharat)
author img

By ANI

Published : Jun 2, 2024, 10:54 AM IST

ನವದೆಹಲಿ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಫಿನಿಶರ್​ ಮತ್ತು ವಿಕೆಟ್​ ಕೀಪರ್​ ದಿನೇಶ್​ ಕಾರ್ತಿಕ್​ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಬಗ್ಗೆ ತಮ್ಮ ಹುಟ್ಟಿದ ದಿನವಾದ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಎರಡು ದಶಕದ ಕ್ರಿಕೆಟ್ ವೃತ್ತಿಜೀವನವನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ, 'ಕಳೆದ ಕೆಲವು ದಿನಗಳಲ್ಲಿ ನಾನು ಪಡೆದ ಪ್ರೀತಿ, ಬೆಂಬಲಕ್ಕೆ ಅಭಾರಿಯಾಗಿದ್ದೇನೆ. ಇದಕ್ಕೆ ಕಾರಣರಾದ ಎಲ್ಲಾ ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸುಧೀರ್ಘವಾಗಿ ಆಲೋಚಿಸಿದ ಬಳಿಕ ಕ್ರಿಕೆಟ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಇದೀಗ ನನ್ನ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸುತ್ತೇನೆ, ಮುಂಬರುವ ಹೊಸ ಸವಾಲುಗಳಿಗೆ ಸಿದ್ಧನಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ಸುದೀರ್ಘ ಕ್ರಿಕೆಟ್​ ಪ್ರಯಾಣವನ್ನು ಆನಂದದಾಯಕವಾಗಿಸಿದ ನನ್ನ ಕೋಚ್‌ಗಳು, ಆಯ್ಕೆಗಾರರು, ತಂಡದ ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದ ಕೆಲವೇ ಕೆಲವು ಅದೃಷ್ಟವಂತರಲ್ಲಿ ನಾನೂ ಒಬ್ಬ ಎಂದು ಪರಿಗಣಿಸುತ್ತೇನೆ. ಇಷ್ಟು ಅಭಿಮಾನಿಗಳು ಮತ್ತು ಸ್ನೇಹಿತರ ಅಭಿಮಾನವನ್ನು ಗಳಿಸಿರುವ ನಾನು ಇನ್ನೂ ಹೆಚ್ಚಿನ ಅದೃಷ್ಟಶಾಲಿಯಾಗಿದ್ದೇನೆ.

ನನ್ನ ಪೋಷಕರು ನನ್ನ ಶಕ್ತಿ ಮತ್ತು ಬೆಂಬಲದ ಆಧಾರ ಸ್ತಂಭವಾಗಿದ್ದಾರೆ. ಅವರ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ವೃತ್ತಿಪರ ಆಟಗಾರ್ತಿಯಾಗಿರುವ ನನ್ನ ಪತ್ನಿ ದೀಪಿಕಾಗೂ ನಾನು ಕೃತಜ್ಞನನಾಗಿದ್ದೇನೆ. ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮ ಬೆಂಬಲ ಮತ್ತು ಹಾರೈಕೆಗಳಿಲ್ಲದಿದ್ದರೆ ಇಂದು ಈ ಸ್ಥಾನದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಬರೆದುಕೊಂಡು ನಿವೃತ್ತಿ ಘೋಷಿಸಿದ್ದಾರೆ.

ಬಲಗೈ ಬ್ಯಾಟರ್​ ದಿನೇಶ್ ಕಾರ್ತಿಕ್, ಟೆಸ್ಟ್, ಏಕದಿನ ಮತ್ತು T20 ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಅವಧಿಯಲ್ಲಿ 26 ಟೆಸ್ಟ್ ಪಂದ್ಯಗಳಲ್ಲಿ 1025 ರನ್, 94 ಏಕದಿನ ಪಂದ್ಯಗಳಲ್ಲಿ 1752 ರನ್ ಮತ್ತು 60 ಟಿ20 ಪಂದ್ಯಗಳ 686 ರನ್ ಕಲೆಹಾಕಿದ್ದಾರೆ.

IPLನಲ್ಲಿ 6 ತಂಡ ಪ್ರತಿನಿಧಿಸಿದ ದಿನೇಶ್ ಕಾರ್ತಿಕ್​: ಡಿಕೆ ​ಐಪಿಎಲ್​ ಆರಂಭವಾದಗಿನಿಂದಲೂ, ಅಂದರೆ 2008ರಿಂದ 2024ರವರೆಗೆ ಎಲ್ಲಾ 17 ಸೀಸನ್​ಗಳಲ್ಲಿ ಆಡಿದ್ದು ಒಟ್ಟು 6 ತಂಡಗಳನ್ನು ಪ್ರತಿನಿಧಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ (2008, 2010, 2014)​, ಪಂಜಾಬ್​ ಕಿಂಗ್ಸ್ (2011), ಮುಂಬೈ ಇಂಡಿಯನ್ಸ್ (2012-13)​, ಗುಜರಾತ್​ ಲಯನ್ಸ್ (2016-17)​, ಕೋಲ್ಕತ್ತಾ ನೈಟ್​ ರೈಡರ್ಸ್ (2018-21)​, ಆರ್​ಸಿಬಿ (2015, 2022-24) ಪರ ಆಡಿದ್ದಾರೆ. ಈ ಅವಧಿಯಲ್ಲಿ ಒಂದು ಬಾರಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ನಾಯಕನಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು.

ತಮ್ಮ ಐಪಿಎಲ್​ ವೃತ್ತಿ ಜೀವನದಲ್ಲಿ ಇದುವರೆಗೂ 257 ಪಂದ್ಯಗಳನ್ನು ಆಡಿ ಒಟ್ಟು 4,842 ರನ್​ ಗಳಿಸಿದ್ದಾರೆ. ಇದರಲ್ಲಿ 22 ಅರ್ಧಶತಕಗಳು ಸೇರಿವೆ. ಐಪಿಎಲ್​ನಲ್ಲಿ ಹೆಚ್ಚು ರನ್​ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿಯೂ ಡಿಕೆ 10ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಐಸಿಸಿ ವರ್ಷದ ಏಕದಿನ ಆಟಗಾರ 2023 ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಕೊಹ್ಲಿ - Virat Kohli

ETV Bharat Logo

Copyright © 2024 Ushodaya Enterprises Pvt. Ltd., All Rights Reserved.