ETV Bharat / sports

ಡೆಲ್ಲಿಯ ಫ್ರೇಸರ್​, ಪೊರೆಲ್​, ಸ್ಟಬ್ಸ್​ ಅಬ್ಬರ: ರಾಜಸ್ಥಾನ ರಾಯಲ್ಸ್​ಗೆ 222 ರನ್​ಗಳ ಬೃಹತ್​ ಗುರಿ - DC vs RR match - DC VS RR MATCH

ದಿಲ್ಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ರಾಜಸ್ಥಾನ ರಾಯಲ್​​ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ.

Sanju Samson
Sanju Samson (File Photo: Sanju Samson (Source: AP))
author img

By ETV Bharat Karnataka Team

Published : May 7, 2024, 10:13 PM IST

ನವದೆಹಲಿ: ಪ್ಲೇ ಆಫ್​ಗೇರುವ ಗುರಿ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್​, ಅರುಣ್​ ಜೇಟ್ಲಿ ಮೈದಾನದಲ್ಲಿ ಅಬ್ಬರಿಸಿದೆ. ಈ ಐಪಿಎಲ್​ನ ಅತಿ ಕಠಿಣ ತಂಡವಾದ ರಾಜಸ್ಥಾನ ರಾಯಲ್ಸ್​ ವಿರುದ್ಧ ನಿಗದಿತ ಓವರ್​ಗಳಲ್ಲಿ 8 ವಿಕೆಟ್ 221 ರನ್​ಗಳ ಬೃಹತ್​ ಮೊತ್ತ ದಾಖಲಿಸಿದೆ.

ಹಿರಿಯ ಬ್ಯಾಟರ್​ ಡೇವಡಿಡ್​ ವಾರ್ನರ್​ ಅವರನ್ನು ಕೈಬಿಟ್ಟು ಶಾಯ್​ ಹೋಪ್​ಗೆ ಅವಕಾಶ ನೀಡಲಾಗಿತ್ತು. ಇದರಿಂದ ಆರಂಭಿಕರಾಗಿ ಬಂದ ಯುವ ಸೆನ್ಸೇಷನ್​ ಜೇಸ್​ ಫ್ರೇಸರ್​ ಮೆಕ್​ಗರ್ಕ್​ ಐಪಿಎಲ್​​ನಲ್ಲಿ ಅತಿವೇಗದ ಅರ್ಧಶತಕ ಬಾರಿಸಿದರು. ಕೇವಲ 19 ಎಸೆತಗಳಲ್ಲಿ 50 ರನ್​ ಗಳಿಸಿದ ಆಟಗಾರ ಮರು ಎಸೆತದಲ್ಲೇ ಅಶ್ವಿನ್​ಗ ವಿಕೆಟ್​ ನೀಡಿದರು.

ಇನ್ನೊಂದು ತುದಿಯಲ್ಲಿ ಅಭಿಷೇಕ್​ ಪೊರೆಲ್​ ಉತ್ತಮವಾಗಿ ಬ್ಯಾಟ್​ ಮಾಡಿ 36 ಎಸೆತಗಳಲ್ಲಿ 65 ರನ್​ ಗಳಿಸಿದರು. ಶಾಯ್​ ಹೋಪ್​ (1) ಕೈಕೊಟ್ಟರೆ, ಬಡ್ತಿ ಪಡೆದ ಅಕ್ಷರ್​ ಪಟೇಲ್​ 15, ನಾಯಕ ರಿಷಭ್​​ ಪಂತ್​ 15 ರನ್​ ಮಾತ್ರ ಗಳಿಸಿದರು.

ರನ್​ ಹರಿವು ಕಡಿಮೆಯಾದಾಗ ಬ್ಯಾಟ್​ಗೆ ಬುದ್ಧಿ ಹೇಳಿದ ಟ್ರಸ್ಟನ್​ ಸ್ಟಬ್ಸ್​ 20 ಎಸೆತಗಳಲ್ಲಿ 41 ರನ್​ ಚಚ್ಚಿದರು. ಗುಲ್ಬದಿನ್ 19 ರನ್​ ಗಳಿಸಿ ನೆರವಾದರು. ಇದರಿಂದ ತಂಡ 20 ಓವರ್​ಗಳಲ್ಲಿ 8 ವಿಕೆಟ್​ಗೆ 221 ರನ್​ ಗಳಿಸಿತು. ಡೆಲ್ಲಿ ಪರವಾಗಿ ರವಿಚಂದ್ರನ್​ ಅಶ್ವಿನ್ 3 ವಿಕೆಟ್​ ಪಡೆದು ಮಿಂಚಿದರು. ಚಹರ್​, ಸಂದೀಪ್​ ಶರ್ಮಾ, ಟ್ರೆಂಟ್​ ಬೌಲ್ಟ್​ ತಲಾ 1 ವಿಕೆಟ್​ ಕಿತ್ತಿದರು.

ಬಿರುಸಿನ ಆರಂಭ: ಇತ್ತ ಬೃಹತ್​ ಮೊತ್ತದ ಗುರಿ ಬೆನ್ನತ್ತಿರುವ ರಾಜಸ್ಥಾನ ರಾಯಲ್ಸ್​ ಆರಂಭದಲ್ಲೇ 2 ವಿಕೆಟ್​ ಕಳೆದುಕೊಂಡಿದೆ. ಯಶಸ್ವಿ ಜೈಸ್ವಾಲ್​ 4, ಜಾಸ್​ ಬಟ್ಲರ್​ 19 ರನ್​ಗೆ ವಿಕೆಟ್​ ನೀಡಿದ್ದಾರೆ. ನಾಯಕ ಸಂಜು ಸ್ಯಾಮ್ಸನ್​ ಅರ್ಧಶತಕದ ಗಡಿಯಲ್ಲಿದ್ದಾರೆ.

ಇದನ್ನೂ ಓದಿ: ವಾಂಖೆಡೆಯಲ್ಲಿ ಬೆಳಗಿದ 'ಸೂರ್ಯ'; ಮುಂಬೈಗೆ 7 ವಿಕೆಟ್‌ಗಳ ವಿಜಯ - MI Vs SRH

ETV Bharat Logo

Copyright © 2024 Ushodaya Enterprises Pvt. Ltd., All Rights Reserved.