ನವದೆಹಲಿ: ಕ್ರಿಕೆಟ್ ಮೈದಾನದಲ್ಲಿ ಉತ್ತಮ ಸಿಕ್ಸರ್, ಬೌಂಡರಿ ಬಾರಿಸುತ್ತಿದ್ದ, ಮಾರಕ ಬೌಲಿಂಗ್ ಮಾಡುತ್ತಿದ್ದ ಆಟಗಾರರು ತಮ್ಮ ನಿವೃತ್ತಿಯ ಬಳಿಕ ಇನ್ಯಾವುದೋ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನ ಮುಂದುವರಿಸುತ್ತಾರೆ. ಅದೇ ರೀತಿ ತಮ್ಮ ದೇಶದ ಪ್ರಧಾನಿಯಾದ ಐದು ಕ್ರಿಕೆಟಿಗರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ಇಮ್ರಾನ್ ಖಾನ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಒಬ್ಬ ಅತ್ಯುತ್ತಮ ಕ್ರಿಕೆಟಿಗ. ಮೈದಾನದಲ್ಲಿ ಎದುರಾಳಿಗಳ ಬಾಲ್ಗೆ ಭರ್ಜರಿಯಾಗಿ ಸಿಕ್ಸರ್ ಬಾರಿಸುತ್ತಿದ್ದರು. ಇವರ ನಾಯಕತ್ವದಲ್ಲಿ 1992 ರ ODI ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿಜಯ ಸಾಧಿಸಿತ್ತು. ಇದರ ನಂತರ, ಇಮ್ರಾನ್ 2018 ರಲ್ಲಿ ಪಾಕಿಸ್ತಾನದ ಪ್ರಧಾನಿಯಾದರು. ಮತ್ತು 2022 ರಲ್ಲಿ ಅವರ ಸರ್ಕಾರ ಪತನವಾಯಿತು. ಇಮ್ರಾನ್ ಖಾನ್ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರು ಅನೇಕ ಆರೋಪಗಳ ಮೇಲೆ ಜೈಲಿನಲ್ಲಿದ್ದಾರೆ.
January 12, 1956 was one of the worst on-field days for West Indian cricket, at par with their 25 all out against Ireland.
— Abhishek Mukherjee (@ovshake42) January 12, 2021
A reasonably strong West Indian side lost to – Fiji.
The picture is of Ratu Kamisese Mara, who led Fiji on that day.
+ pic.twitter.com/K3Eg1rkNTA
ಕಾಮಿಸೆಸೆ ಮಾರಾ: ರತು ಸರ್ ಕಮಿಸೆಸೆ ಮಾರಾ ಕೂಡ ಈ ಪಟ್ಟಿಗೆ ಸೇರಿದ್ದು, ಪ್ರಧಾನಿಯಾಗುವ ಮುನ್ನ ಅವರು ಫಿಜಿ ದೇಶಕ್ಕಾಗಿ ಕ್ರಿಕೆಟ್ ಆಡಿದವರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಒಟಾಗೊ ಮತ್ತು ಕ್ಯಾಂಟರ್‌ಬರಿ ವಿರುದ್ಧ ಎರಡು ಪಂದ್ಯಗಳನ್ನು ಆಡಿದ್ದರು. ತಂಡದ ಉಪನಾಯಕನಾಗಿದ್ದ ಅವರು ಕ್ಯಾಂಟರ್ಬರಿ ವಿರುದ್ಧ 44 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಇದರೊಂದಿಗೆ ಮಧ್ಯಮ ವೇಗದ ಬೌಲರ್ ಆಗಿದ್ದ ಮಾರಾ 8 ವಿಕೆಟ್ಗಳನ್ನು ಪಡೆದಿದ್ದರು. ದುರದೃಷ್ಟವಶಾತ್ ಅವರ ಬಲಗೈಗೆ ಗಾಯವಾದ ಕಾರಣ ಕ್ರಿಕೆಟ್ ವೃತ್ತಿಜೀವನ ಹೆಚ್ಚು ಕಾಲ ಉಳಿಯಲಿಲ್ಲ. ಅವರು 1970 ರಿಂದ 1992 ರವರೆಗೆ ಫಿಜಿ ದೇಶದ ಪ್ರಧಾನಿಯಾಗಿದ್ದರು. ಜೊತೆಗೆ 1993 ರಿಂದ 2000 ರವರೆಗೆ ರಾಷ್ಟ್ರಪತಿ ಹುದ್ದೆಯಲ್ಲಿದ್ದರು.
ಸರ್ ಫ್ರಾನ್ಸಿಸ್ ಬೆಲ್: ನ್ಯೂಜಿಲೆಂಡ್ನ ಪ್ರಧಾನಿಯಾಗಿದ್ದ ಸರ್ ಫ್ರಾನ್ಸಿಸ್ ಬೆಲ್ ಕೂಡ ಕ್ರಿಕೆಟ್ ಪಿಚ್ನಲ್ಲಿ ಬ್ಯಾಟ್ ಬೀಸಿದವರೇ. ತಮ್ಮ ಯೌವನ ಕಾಲದಲ್ಲಿ ಪ್ರಮುಖ ಆಟಗಾರರಾಗಿದ್ದರು. ವೆಲ್ಲಿಂಗ್ಟನ್ ಪರ 2 ಪ್ರಥಮ ದರ್ಜೆ ಪಂದ್ಯಗಳನ್ನೂ ಆಡಿದವರು. ಇದಾದ ನಂತರ ಕ್ರಿಕೆಟ್ ಕ್ಷೇತ್ರದಲ್ಲಿ ಯಶಸ್ಸು ಸಿಗದ ಕಾರಣ ಕ್ರಿಕೆಟ್ ತೊರೆದು ರಾಜಕೀಯದಲ್ಲಿ ತನ್ನ ವೃತ್ತಿಜೀವನಕ್ಕೆ ಯತ್ನಿಸಿದರು. ಅವರು 1925 ರ ಮೇ 10 ರಿಂದ ಮೇ 30 ರವರೆಗೆ ಕೇವಲ 16 ದಿನಗಳ ಕಾಲ ಅಲ್ಪಾವಧಿಗೆ ಪ್ರಧಾನಿಯಾಗಿದ್ದರು.
" oh god, if there be cricket in heaven, let there also be rain."
— Mark W. (@DurhamWASP) October 9, 2021
sir alec douglas-home [2nd july 1903 – 9th october 1995] british prime minister for 363 days pic.twitter.com/N1sXknGv65
ಸರ್ ಅಲೆಕ್ ಡಗ್ಲಾಸ್-ಹೋಮ್: ಸರ್ ಅಲೆಕ್ ಡೌಗ್ಲಾಸ್ ಹೋಮ್ ಕೂಡ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡವರು. ಕ್ರಿಕೆಟಿಗರಾಗಿದ್ದ ಅವರು ಅದ್ಭುತ ಪ್ರದರ್ಶನ ನೀಡಿ ಬ್ರಿಟನ್ ಪ್ರಧಾನಿಯಾಗಿದ್ದರು. 1963 ರಿಂದ 1964 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಯೌವನದ ಕಾಲದಲ್ಲಿ ಇವರು ಮಿಡ್ಲ್‌ಸೆಕ್ಸ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳಿಗಾಗಿ ಕ್ರಿಕೆಟ್ ಆಡಿದ್ದರು. 1924 ಮತ್ತು 1927 ರ ನಡುವೆ 10 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಮಿಡ್ಲ್‌ಸೆಕ್ಸ್ ಪರ ಆಡುವಾಗ ಅವರು 147 ರನ್ ಗಳಿಸಿದ್ದರು. 12 ವಿಕೆಟ್ಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಅರ್ಜೆಂಟೀನಾ ವಿರುದ್ಧದ ಮೂರು ಪ್ರಥಮ ದರ್ಜೆ ಪಂದ್ಯಗಳ ಭಾಗವಾಗಿದ್ದರು.
ನವಾಜ್ ಷರೀಫ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಕೂಡ ಈ ಪಟ್ಟಿಯಲ್ಲಿದ್ದಾರೆ. ನವಾಜ್ ತಮ್ಮ ಯೌವನದಿಂದಲೇ ಕ್ರಿಕೆಟಿಗರಾಗಿದ್ದರು. ಅತ್ಯುತ್ತಮ ಕ್ಲಬ್ ಕ್ರಿಕೆಟರ್ ಕೂಡ ಆಗಿದ್ದರು. ಅವರು ಪಾಕಿಸ್ತಾನಕ್ಕಾಗಿ ಒಂದು ಪ್ರಥಮ ದರ್ಜೆ ಪಂದ್ಯವನ್ನೂ ಆಡಿದ್ದಾರೆ. ಈ ಪಂದ್ಯದಲ್ಲಿ ಅವರು ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರು. ನವಾಜ್ ಅವರು ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷದಿಂದ ಮೂರು ಬಾರಿ ದೇಶದ ಪ್ರಧಾನಿಯಾದ ಹೆಗ್ಗಳಿಕೆ ಹೊಂದಿದ್ದಾರೆ.