ETV Bharat / sports

ಪ್ಯಾರಿಸ್​ ಒಲಿಂಪಿಕ್ಸ್: ಭಾರತೀಯ ಕ್ರೀಡಾಪಟುಗಳಿಗೆ ನಿರಾಸೆ ತಂದ 3 ಘಟನೆಗಳು! - Paris Olympics 2024

ಪ್ಯಾರಿಸ್​ ಒಲಿಂಪಿಕ್ಸ್‌ಗೆ ಅಧಿಕೃತ ತೆರೆ ಬಿದ್ದಿದೆ. ಈ ಜಾಗತಿಕ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳನ್ನು ನಿರಾಶೆಗೊಳಿಸಿದ ಕೆಲವು ಘಟನೆಗಳು ಇಲ್ಲಿವೆ.

ಭಾರತೀಯ ಕ್ರೀಡಾಪಟುಗಳೊಂದಿಗೆ ಸಂಭವಿಸಿದ ವಿವಾಧಗಳು
ಭಾರತೀಯ ಕ್ರೀಡಾಪಟುಗಳಿಗೆ ನಿರಾಸೆ ತಂದ 3 ಘಟನೆಗಳು (ANI, IANS)
author img

By ETV Bharat Sports Team

Published : Aug 12, 2024, 5:50 PM IST

ನವದೆಹಲಿ: ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರದರ್ಶನ ಹಿಂದಿನ ಒಲಿಂಪಿಕ್ಸ್‌ಗಿಂತಲೂ ಕಳಪೆಯಾಗಿತ್ತು. ತನ್ನ ಆಟಗಾರರಿಂದ ದೇಶ ಹೆಚ್ಚಿನ ಪದಕ ಸಾಧನೆಯ ನಿರೀಕ್ಷೆ ಹೊಂದಿತ್ತು. ಆದರೆ, ಕಳೆದ ಬಾರಿಯ ಟೋಕಿಯೊ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ. ಒಂದೇ ಒಂದು ಚಿನ್ನದ ಪದಕ ಬರಲಿಲ್ಲ. ಕೆಲವು ಕ್ರೀಡಾಪಟುಗಳು ಕೂದಲೆಲೆ ಅಂತರದಿಂದ ಪದಕ ತಪ್ಪಿಸಿಕೊಂಡರು. ಇದರೊಂದಿಗೆ ಕೆಲವು ವಿವಾದಗಳೂ ಸದ್ದು ಮಾಡಿದವು.

ಬಾಕ್ಸರ್ ನಿಶಾಂತ್ ದೇವ್ ಘಟನೆ: ಬಾಕ್ಸರ್ ನಿಶಾಂತ್ ದೇವ್ ಭರ್ಜರಿ ಪ್ರದರ್ಶನ ತೋರಿದರೂ ಫಲಿತಾಂಶ ಅಚ್ಚರಿ ಉಂಟುಮಾಡಿತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿಶಾಂತ್ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದರು. ಎರಡು ಮತ್ತು ಮೂರನೇ ಸುತ್ತಿನಲ್ಲೂ ಆಕ್ರಮಣಕಾರಿ ಆಟವಾಡಿ ಉತ್ತಮ ಪಂಚ್‌ಗಳನ್ನು ನೀಡಿದ್ದರು. ಈ ಪಂದ್ಯದಲ್ಲಿ ಅವರ ಪರವಾಗಿಯೇ ಫಲಿತಾಂಶ ಬರುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅಂತಿಮವಾಗಿ ನಿಶಾಂತ್ ವಿರುದ್ಧ ತೀರ್ಪು ಬಂತು.

ವಿನೇಶ್ ಫೋಗಟ್‌ಗೆ ಭಾರೀ ನಿರಾಶೆ: ವಿನೇಶ್ ಫೋಗಟ್‌ ಫೈನಲ್ ತಲುಪಿದ ನಂತರವೂ ಪದಕ ಪಡೆಯುವಲ್ಲಿ ವಿಫಲರಾದರು. ತಮ್ಮ ಅದ್ಭುತ ಪ್ರದರ್ಶನದಿಂದ ಫೈನಲ್‌ ಪ್ರವೇಶಿಸುವ ಮೂಲಕ ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದರು. ಅಲ್ಲದೇ ಬೆಳ್ಳಿ ಪದಕಕ್ಕೂ ಅರ್ಹತೆ ಪಡೆದಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ವಿನೇಶ್ ದೇಹತೂಕ 50 ಕೆಜಿಗಿಂತಲೂ 100 ಗ್ರಾಂ ಹೆಚ್ಚಾಗಿದೆ ಎಂದು ಪಂದ್ಯದಿಂದ ಅನರ್ಹಗೊಳಿಸಲಾಯಿತು. ಆದಾಗ್ಯೂ, ಫೈನಲ್​ ತಲುಪಿದ ಕಾರಣ ಬೆಳ್ಳಿ ಪದಕ ನೀಡಬೇಕು ಎಂದು ಸಿಎಎಸ್ ನ್ಯಾಯಾಲಯದ ಮೊರೆ ಹೋಗಿದ್ದು, ತೀರ್ಪು ಕಾಯ್ದಿರಿಸಲಾಗಿದೆ.

ನಿಯಮ ಉಲ್ಲಂಘಿಸಿದ ಅಂತಿಮ್​ ಪಂಗಲ್: 53 ಕೆಜಿ ಕುಸ್ತಿ ವಿಭಾಗದ ಪಂದ್ಯಕ್ಕೆ ಅರ್ಹತೆ ಪಡೆದಿದ್ದ ಅಂತಿಮ್​ ಪಂಗಲ್ ವಿವಾದದಲ್ಲಿ ಸಿಲುಕಿಕೊಂಡರು. ಪಂಗಲ್ ಒಲಿಂಪಿಕ್ ಗ್ರಾಮಕ್ಕೆ ಪ್ರವೇಶಿಸಲು ನೀಡಿದ್ದ ಕಾರ್ಡ್ ಅನ್ನು ಸಹೋದರಿಗೆ ನೀಡಿ ಒಲಿಂಪಿಕ್ಸ್​ ನಿಯಮಗಳ ಉಲ್ಲಂಘನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ನಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು. ಇದರಿಂದಾಗಿ ಅವರು ಒಲಿಂಪಿಕ್ಸ್​ ಅರ್ಧದಲ್ಲೇ ಸ್ವದೇಶಕ್ಕೆ ಮರಳಬೇಕಾಯಿತು. ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ​​ಅಂತಿಮ್​ ಪಂಗಲ್​ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.