ಪ್ಯಾರಿಸ್: ಇಂದಿನಿಂದ ಪ್ಯಾರಿಸ್ ಒಲಿಂಪಿಕ್ಸ್ ಆರಂಭವಾಗಿದ್ದು, ಕ್ರೀಡಾಕೂಟದಲ್ಲಿ ಚೀನಾ ಮೊದಲ ಚಿನ್ನದ ಪದಕ ಗೆದ್ದುಕೊಂಡಿದೆ. 10 ಮೀಟರ್ ಏರ್ ರೈಫಲ್ ಮಿಶ್ರ ಫೈನಲ್‌ನಲ್ಲಿ ಚೀನಾ ಕೊರಿಯಾ ರಿಪಬ್ಲಿಕ್ ತಂಡವನ್ನು 16-12 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ.
🇮🇳 Update: 10M AIR RIFLE MIXED TEAM QUALIFICATION Results 👇🏼
— SAI Media (@Media_SAI) July 27, 2024
- Ramita Jindal and Arjun Babuta finished 6th with a score of 628.7
- Elavenil Valarivan and Sandeep Singh finished 12th with a score of 626.3
Tune into DD Sports and Jio Cinema to watch LIVE!
Let’s #Cheer4Bharat pic.twitter.com/CemQHJ93rK
ಬೆಳ್ಳಿಗೆ ಕೊರಲೊಡ್ಡಿದ ಕೊರಿಯಾ: 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಫೈನಲ್‌ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಕೊರಿಯಾ ತನ್ನ ಮೊದಲ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಇದು ಪ್ಯಾರಿಸ್ ಒಲಿಂಪಿಕ್ಸ್ 2024 ರ ಮೊದಲ ಬೆಳ್ಳಿ ಪದಕವಾಗಿದೆ.
ಇದೇ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಖಜಕಿಸ್ತಾನ ಜರ್ಮನಿ ವಿರುದ್ಧ 17-5 ಅಂಕಗಳ ಅಂತರದಿಂದ ಗೆಲುವು ಸಾಧಿಸಿ ಬೆಳ್ಳಿಗೆ ಕೊರಳೊಡ್ಡಿದೆ. ಖಜಕಿಸ್ತಾನದ ಮೊದಲ ಪದಕ ಇದಾಗಿದೆ..
The first #silver medal of #Paris2024 goes to Republic of Korea! 🥈🇰🇷
— The Olympic Games (@Olympics) July 27, 2024
They claim the second spot in shooting 10m air rifle mixed team.@issf_official | #ShootingSport#Paris2024 | #Samsung | #TogetherForTomorrow pic.twitter.com/PigTlhH7Fx
ಫೈನಲ್ನಿಂದ ಹೊರ ಬಿದ್ದ ಭಾರತ: ಒಲಿಂಪಿಕ್ಸ್ನ ಮೊದಲನೇ ದಿನ ಭಾರತ ಎರಡನೇ ಬಾರಿಗೆ ನಿರಾಶೆ ಅನುಭವಿಸಿದೆ. 10 ಮೀಟರ್ ರೈಫಲ್ ಮಿಶ್ರ ಪಂದ್ಯದಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆಯುವಲ್ಲಿ ಎಡವಿದೆ. ಭಾರತದ ಶೂಟರ್ಗಳಾದ ಸರಬ್ಜೋತ್ 577 ಅಂಕಗಳೊಂದಿಗೆ 9ನೇ ಸ್ಥಾನ ಪಡೆದರೇ, ಅರ್ಜುನ್ 574 ಅಂಕಗಳೊಂದಿಗೆ 18ನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಈ ಸ್ಪರ್ಧೆಯಲ್ಲಿ ಅಗ್ರ 8 ಆಟಗಾರರು ಮಾತ್ರ ಫೈನಲ್ಗೆ ಪ್ರವೇಶ ಪಡೆದಿದ್ದಾರೆ. ಈ ಪೈಕಿ ಇಟಾಲಿ ಮತ್ತು ಜರ್ಮನ್ ತಲಾ ಇಬ್ಬರು ಆಟಗಾರರು ಅರ್ಹತೆ ಪಡೆದಿದ್ದಾರೆ.
ಇದಕ್ಕೂ ಮೊದಲು ಇದೇ ಸ್ಪರ್ಧೆಯಲ್ಲಿ ಭಾರತದ ಮಿಶ್ರ ತಂಡ ಪದಕದ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಸ್ವಲ್ಪದರಲ್ಲೇ ಎಡವಿತು. ಭಾರತದ ಜೋಡಿ ರಮಿತಾ ಜಿಂದಾಲ್ ಮತ್ತು ಅರ್ಜುನ್ ಆರಂಭಿಕ ಹಂತದಲ್ಲಿ ಭರ್ಜರಿ ಪ್ರದರ್ಶನ ತೋರಿತ್ತಾದರೂ ಕೊನೆಯಲ್ಲಿಎಡವಿದ ಜೋಡಿ 628.7 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಉಳಿದಂತೆ ಎಲವೇನಿಲ್ ಮತ್ತು ಸಂದೀಪ್ ಸಿಂಗ್ 626.3 ಅಂಕಗಳೊಂದಿಗೆ 12ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್ 2024: ನಮ್ಮ ದೇಶದ 117 ಕ್ರೀಡಾಪಟುಗಳ ಪೈಕಿ ಶಾಸಕರೊಬ್ಬರು ಸ್ಪರ್ಧಿಯಾಗಿ ಭಾಗಿ - Shooting Athlete