ETV Bharat / sports

ಐಪಿಎಲ್​ 2024: ಆರಂಭಿಕ ಪಂದ್ಯದಲ್ಲೇ ಎಡವಿದ ಆರ್​ಸಿಬಿ; ಸಿಎಸ್​ಕೆಗೆ 6 ವಿಕೆಟ್​ಗಳ ಜಯ​ - CSK beat RCB

author img

By ETV Bharat Karnataka Team

Published : Mar 23, 2024, 6:27 AM IST

Updated : Mar 23, 2024, 7:24 AM IST

ಐಪಿಎಲ್​ ಆರಂಭಿಕ ಪಂದ್ಯದಲ್ಲಿ ಆರ್​ಸಿಬಿ ವಿರುದ್ದ ಸಿಎಸ್​ಕೆ 6 ವಿಕೆಟ್​ಗಳ ಗೆಲುವು ಸಾಧಿಸಿದೆ.

ಐಪಿಎಲ್​ 2024: ಆರಂಭಿಕ ಪಂದ್ಯದಲ್ಲೇ ಎಡವಿದ ಆರ್​ಸಿಬಿ; ಸಿಎಸ್​ಕೆಗೆ 6 ವಿಕೆಟ್​ಗಳ ಜಯ​

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ಶುಕ್ರವಾರ ಎಂಎ. ಚಿದಾಂಬರಂ (ಚೆಪಾಕ್​) ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಉತ್ತಮ ಆರಂಭ ಪಡೆದ ಆರ್‌ಸಿಬಿ ನಾಯಕ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್‌ಗೆ 41 ರನ್ ಪೇರಿಸಿತು. ಭರ್ಜರಿ ಬ್ಯಾಟಿಂಗ್​ ನಡೆಸಿದ್ದ ಡುಪ್ಲೆಸಿಸ್ ಮುಸ್ತಾಫಿಜುರ್ ರೆಹಮಾನ್ ಎಸೆತದಲ್ಲಿ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ರಜತ್ ಪಾಟಿದಾರ್, ಮ್ಯಾಕ್ಸ್​ವೆಲ್​ ಇಬ್ಬರೂ ಶೂನ್ಯಕ್ಕೆ ನಿರ್ಗಮಿಸಿದ್ದರಿಂದ ತಂಡಕ್ಕೆ ಒತ್ತಡ ಹೆಚ್ಚಿತು.

ನಂತರ ಮುಸ್ತಾಫಿಜುರ್ ಎಸೆತದಲ್ಲಿ ವಿರಾಟ್ ಕೊಹ್ಲಿ (21) ಮತ್ತು ಕ್ಯಾಮರೂನ್ ಗ್ರೀನ್ (18) ತಮ್ಮ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು. 78 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಅನೂಜ್​ ರಾವತ್​ (48) ಮತ್ತು ದಿನೇಶ್​ ಕಾರ್ತಿಕ್​ (ಅಜೇಯ 38) ನೆರವಾದರು. ಈ ಇಬ್ಬರು 95 ರನ್​ಗಳ ಜೊತಾಯಾಟವಾಡಿ ತಂಡದ ಸ್ಕೋರ್​ 173ಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಸಿಎಸ್​ಕೆ ಪರ ಮುಸ್ತಾಫಿಜುರ್ ರೆಹಮಾನ್ 4 ವಿಕೆಟ್​ ಪಡೆದರೆ, ದೀಪಕ್​ ಚಹಾರ್​ 1 ವಿಕೆಟ್​ ಪಡೆದರು.

174ರನ್​ಗಳ ಗುರಿ ಪಡೆದ ಸಿಎಸ್​ಕೆ ರಚಿನ್​ ರವೀಂದ್ರ (37), ರಹಾನೆ(27), ಮಿಚೆಲ್​(22), ಶಿವಮ್​ದುಭೆ(34), ಜಡೇಜಾ (25) ಅವರ ಬ್ಯಾಟಿಂಗ್​ ನೆರವಿನಿಂದ 18.4 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ತಲುಪಿತು. ಆರ್​ಸಿಬಿ ಪರ ಕೆಮರಾನ್​ ಗ್ರೀನ್​ 2, ಕರಣ್​ ಶರ್ಮಾ, ಯಶ್​​ ದಯಾಲ್​ ತಲಾ ಒಂದು ವಿಕೆಟ್​ ಪಡೆದರು. ನಾಲ್ಕು ವಿಕೆಟ್​ ಪಡೆದ ಮುಸ್ತಾಫಿಜುರ್ ರೆಹಮಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

2008ರಿಂದ ಅಂದರ ಐಪಿಎಲ್​ ಆರಂಭವಾದಾಗಿನಿಂದಲೂ ಚೆಪಾಕ್​ ಮೈದಾನದಲ್ಲಿ ಆರ್‌ಸಿಬಿ ತಂಡ ಒಮ್ಮೆಯೂ ಚೆನ್ನೈ ತಂಡವನ್ನು ಸೋಲಿಸಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಟಿ-20 ಕ್ರಿಕೆಟ್‌ನಲ್ಲಿ 12 ಸಾವಿರ ರನ್​ ಪೂರೈಸಿದ ವಿರಾಟ್​ ಕೊಹ್ಲಿ; ಭಾರತದ ಮೊದಲ ಆಟಗಾರನಾಗಿ ಮೈಲಿಗಲ್ಲು - Virat Kohli

Last Updated : Mar 23, 2024, 7:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.