ETV Bharat / sports

ಚೆನ್ನೈನಲ್ಲಿ ಆ.30 ರಿಂದ ಸೆ.1ರ ವರೆಗೆ ಕಾರ್​ ರೇಸಿಂಗ್ ಫೆಸ್ಟಿವಲ್: ಇಲ್ಲಿ ನಡೆಯಲಿದೆ ದೇಶದ ಮೊದಲ ನೈಟ್ ಸ್ಟ್ರೀಟ್ ರೇಸ್ - Car racing festival

author img

By ETV Bharat Karnataka Team

Published : Jul 29, 2024, 10:56 PM IST

ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF)ನಲ್ಲಿ ದೇಶದ ಮೊದಲ ನೈಟ್ ಸ್ಟ್ರೀಟ್ ರೇಸ್ ಆಗಸ್ಟ್ 30 ಮತ್ತು ಸೆಪ್ಟೆಂಬರ್ 1 ರಂದು ಚೆನ್ನೈನಲ್ಲಿ ಆಯೋಜಿಸಲಾಗಿದೆ.

ಚೆನ್ನೈನಲ್ಲಿ  ಆ.30 ರಿಂದ ಸೆ.1ರ ವರೆಗೆ ಕಾರ್​ ರೇಸಿಂಗ್ ಫೆಸ್ಟಿವಲ್
ಚೆನ್ನೈನಲ್ಲಿ ಆ.30 ರಿಂದ ಸೆ.1ರ ವರೆಗೆ ಕಾರ್​ ರೇಸಿಂಗ್ ಫೆಸ್ಟಿವಲ್ (ETV Bharat)

ಚೆನ್ನೈ(ತಮಿಳುನಾಡು): ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF)ನಲ್ಲಿ ದೇಶದ ಮೊದಲ ನೈಟ್ ಸ್ಟ್ರೀಟ್ ರೇಸ್ ಅನ್ನು ಆಗಸ್ಟ್ 30 ಮತ್ತು ಸೆಪ್ಟೆಂಬರ್ 1 ರಂದು ಚೆನ್ನೈನಲ್ಲಿ ಆಯೋಜಿಸಲಾಗಿದೆ. ಈ ಮೂಲಕ ಚೆನ್ನೈನ ಫಾರ್ಮುಲಾ ರೇಸಿಂಗ್ ಸರ್ಕ್ಯೂಟ್‌ನಲ್ಲಿ ನೈಟ್ ಸ್ಟ್ರೀಟ್ ರೇಸ್ ಉದ್ಘಾಟಿಸಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಮೂರು ದಿನಗಳಲ್ಲಿ ಕಾಲ ನಡೆಯುವ ರೋಮಾಂಚನಕಾರಿ ರೇಸ್​ ಸ್ಪರ್ಧೆಯಲ್ಲಿ, 8 ತಂಡಗಳು ತಮ್ಮ ಹೈ - ಸ್ಪೀಡ್ ಕಾರುಗಳೊಂದಿ ಟ್ರ್ಯಾಕ್​ಗೆ ಇಳಿಯಲಿವೆ. ಇದು ಅತ್ಯಂತ ಆಹ್ಲಾದಕರ ಮತ್ತು ಮಹತ್ವಾಕಾಂಕ್ಷೆಯ ಸೀಸನ್​ ಆಗಲಿದೆ.

ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ (ಆರ್ ಪಿಪಿಎಲ್) ಮತ್ತು ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ (ಎಸ್ ಡಿಎಟಿ) ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಲಿವೆ. ಈ ಹಿಂದೆ ಈ ಕಾರ್ಯಕ್ರಮವನ್ನು ಕಳೆದ ವರ್ಷಾಂತ್ಯದಲ್ಲಿ ಯೋಜಿಸಲಾಗಿತ್ತು. ಆದರೆ, ಮೈಚಾಂಗ್ ಚಂಡಮಾರುತದಿಂದಾಗಿ ಕಾರ್ ರೇಸಿಂಗ್ ಫೆಸ್ಟಿವಲ್ ಮುಂದೂಡಲಾಗಿತ್ತು. ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಐಆರ್​ಎಫ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೋಟಾರ್ ಸ್ಪೋರ್ಟ್ಸ್ ಅನ್ನು ಪ್ರೋತ್ಸಾಹಿಸಲು ಮತ್ತು ಅಭಿಮಾನಿ ಬಳಗವನ್ನು ತಮ್ಮತ್ತ ಸೆಳೆಯಲು ಶ್ರಮಿಸುತ್ತಿವೆ.

ಕಾರ್​ ರೇಸ್​ ಅಭಿಮಾನಿಗಳಿಗಾಗಿ ಐಆರ್​ಎಫ್​ ಎರಡು ಚಾಂಪಿಯನ್‌ಶಿಪ್‌ಗಳನ್ನು ಆಯೋಜಿಸುತ್ತಿದೆ. ಒಂದು ಇಂಡಿಯನ್ ರೇಸಿಂಗ್ ಲೀಗ್ (ಐಆರ್​ಎಲ್). ಮತ್ತೊಂದು ಎಫ್ಐಎ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್ (ಎಫ್ 4ಐಸಿ) ಆಗಿದೆ. ಆರ್‌ಪಿಪಿಎಲ್ ಮತ್ತು ತಮಿಳುನಾಡು ಸರ್ಕಾರ ಇಂದು ಚೆನ್ನೈನ ತಾಜ್ ಕೋರಮಂಡಲ್‌ನಲ್ಲಿ ಈ ರೇಸ್​ ಸ್ಪರ್ಧೆಗಳನ್ನು ಘೋಷಿಸಿತು. ಈ ಸಮಾರಂಭದಲ್ಲಿ ತಮಿಳುನಾಡಿನ ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೆ. ಮೇಘನಾಥ ರೆಡ್ಡಿ ಮತ್ತು ಆರ್‌ಪಿಪಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಖಿಲೇಶ್ ರೆಡ್ಡಿ. ಮಾಜಿ ಫಾರ್ಮುಲಾ 1 ಚಾಲಕ ನರೇನ್ ಕಾರ್ತಿಕೇಯನ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಅತುಲ್ಯ ಮಿಶ್ರಾ , ಎಸ್​ಡಿಎಟಿ ಮತ್ತು ಎಫ್​ಎಂಎಸ್​ಸಿಐ ಅಧ್ಯಕ್ಷ ಅಕ್ಬರ್ ಇಬ್ರಾಹಿಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ದಕ್ಷಿಣ ಏಷ್ಯಾದ ಡೆಟ್ರಾಯಿಟ್ ಎಂದು ಕರೆಯಲ್ಪಡುವ ಚೆನ್ನೈ, ದೇಶದ ಮೋಟಾರ್ ಸ್ಪೋರ್ಟ್ಸ್ ಕೇಂದ್ರವಾಗಿದೆ. ಈ ಮಹಾನಗರವು ಇತರ ರೇಸ್ ಟ್ರ್ಯಾಕ್‌ಗಳನ್ನು ಹೊಂದಿದೆ ಮತ್ತು ಈ ಹಿಂದೆ ಅನೇಕ ರೇಸ್ ಈವೆಂಟ್‌ಗಳನ್ನು ನಡೆಸಿದ್ದರೂ, ಮುಂಬರುವ ನೈಟ್ ಸ್ಟ್ರೀಟ್ ರೇಸ್ ಮೋಟಾರ್‌ಸ್ಪೋರ್ಟ್ಸ್ ಶ್ರೀಮಂತ ಪರಂಪರೆಗೆ ಹೆಚ್ಚುವರಿ ವೈಭವ ನೀಡುತ್ತದೆ. 3.5 ಕಿ.ಮೀ ಉದ್ದದ ಚೆನ್ನೈ ಫಾರ್ಮುಲಾ ರೇಸಿಂಗ್ ಸರ್ಕ್ಯೂಟ್ ಅನ್ನು ಆರ್​ಪಿಪಿಎಲ್​, ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ (DAT) ಸಹಯೋಗದೊಂದಿಗೆ ಸಿದ್ಧಪಡಿಸಿದೆ. ಟ್ರ್ಯಾಕ್ ಐಲ್ಯಾಂಡ್ ಮೈದಾನದಲ್ಲಿ ರೇಸಿಂಗ್ ಪ್ರಾರಂಭವಾಗುತ್ತದೆ.

ಈ ಕುರಿತು ಈಟಿವಿ ಭಾರತ್ ಜೊತೆಗೆ ಮಾತನಾಡಿದ ಆರ್‌ಪಿಪಿಎಲ್ ಅಧ್ಯಕ್ಷ ಅಖಿಲೇಶ್ ರೆಡ್ಡಿ, ನಾವು ಈ ಸ್ಪರ್ಧೆಯನ್ನು 2 ವಿಭಾಗಗಳಲ್ಲಿ ನಡೆಸಲಿದ್ದೇವೆ. ಒಂದು ಫಾರ್ಮುಲಾ 4 ರೇಸ್ ಮತ್ತು ಇನ್ನೊಂದು ಇಂಡಿಯನ್ ರೇಸಿಂಗ್ ಲೀಗ್. ಇದು ವಿಶ್ವದಲ್ಲೇ ಮೊದಲ ಬಾರಿಗೆ ಲಿಂಗಭೇದವಿಲ್ಲದೆ ರೇಸಿಂಗ್​ನಲ್ಲಿ ಮಹಿಳೆಯರು ಮತ್ತು ಪುರುಷರು ಇಬ್ಬರೂ ಸ್ಪರ್ಧಿಸುತ್ತಿದ್ದಾರೆ. ನಾವು ಈ ಸ್ಪರ್ಧೆಯನ್ನು ಆಗಸ್ಟ್ 30 ರಿಂದ ನಡೆಸಲಿದ್ದೇವೆ. ಈ ಸಂಬಂಧ ನಾವು ಆಗಸ್ಟ್ 24 ರಿಂದ ತಯಾರಿಯನ್ನು ಪ್ರಾರಂಭಿಸಲಿದ್ದೇವೆ" ಎಂದು ತಿಳಿಸಿದರು.

ಎಸ್‌ಡಿಎಟಿಯ ಅಧಿಕಾರಿ ಮೇಘನಾಥ ರೆಡ್ಡಿ ಮಾತನಾಡಿ,"ಕ್ರೀಡಾ ಸ್ಪರ್ಧೆಗಳು ಯಾವಾಗಲೂ ತಮಿಳುನಾಡಿನಲ್ಲಿ ಬಹಳ ಆಕರ್ಷಕವಾಗಿರುತ್ತವೆ. ವಿಶೇಷವಾಗಿ ನಾವು ಚೆಸ್ ಒಲಿಂಪಿಯಾಡ್, ಹಾಕಿ ಪಂದ್ಯಾವಳಿಗಳನ್ನು ಅದ್ಧೂರಿಯಾಗಿ ನಡೆಸಿಕೊಟ್ಟಿದ್ದೇವೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಸ್ಪರ್ಧೆಯನ್ನು ನಾವು ಅದೇ ರೀತಿಯಲ್ಲಿ ನಡೆಸಿಕೊಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ ರೇಸ್ ಅಭಿಮಾನಿಗಳಿಗೆ ರೋಮಾಂಚನಕಾರಿ ರೇಸಿಂಗ್​ ವೀಕ್ಷಿಸಲು ಅನುಮತಿಸಲಾಗುವುದು. ಅವರಿಗಾಗಿ ವಿಶೇಷ ಗ್ಯಾಲರಿ ವ್ಯವಸ್ಥೆ ಮಾಡಲಾಗುವುದು. ಟಿಕೆಟ್ ವಿವರಗಳನ್ನು ಆಗಸ್ಟ್ 24 ರ ನಂತರ ಪ್ರಕಟಿಸಲಾಗುವುದು ಎಂದು ಆರ್​ಪಿಪಿಎಲ್​ ಮಾಹಿತಿ ನೀಡಿದೆ.

ಇದನ್ನೂ ಓದಿ: ಬ್ಯಾಡ್ಮಿಂಟನ್: ಬೆಲ್ಜಿಯಂ ವಿರುದ್ಧ ಗೆಲುವು ಸಾಧಿಸಿದ ಲಕ್ಷ್ಯ ಸೇನ್ - Paris Olympics 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.