ETV Bharat / sports

ಟಿ20 ವಿಶ್ವಕಪ್​ ಮುಗಿದ ಬೆನ್ನಲ್ಲೇ ಜಿಂಬಾಬ್ವೆ ವಿರುದ್ಧ ಭಾರತ 5 ಪಂದ್ಯಗಳ ಟಿ20 ಸರಣಿ

ಕ್ರಿಕೆಟ್​ ಶಿಶು ಜಿಂಬಾಬ್ವೆ ಜೊತೆಗೆ ಭಾರತ ತಂಡ ಐದು ಪಂದ್ಯಗಳ ಟಿ20 ಸರಣಿಗಾಗಿ ಪ್ರವಾಸ ಕೈಗೊಳ್ಳಲಿದೆ. ಮಂಗಳವಾರ ಸರಣಿಯ ದಿನಾಂಕವನ್ನು ಬಿಸಿಸಿಐ ಘೋಷಿಸಿದೆ.

ಜಿಂಬಾಬ್ವೆ ಜೊತೆ ಟಿ20 ಸರಣಿ
ಜಿಂಬಾಬ್ವೆ ಜೊತೆ ಟಿ20 ಸರಣಿ
author img

By ETV Bharat Karnataka Team

Published : Feb 6, 2024, 10:58 PM IST

ಹೈದರಾಬಾದ್/ಹರಾರೆ(ಜಿಂಬಾಬ್ವೆ): ಟಿ20 ವಿಶ್ವಕಪ್ ಮುಗಿದ ಬಳಿಕ ಜುಲೈನಲ್ಲಿ 5 ಪಂದ್ಯಗಳ ಟಿ20 ಸರಣಿ ಆಡಲು ಭಾರತ ತಂಡ ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳಲಿದೆ. ಜಿಂಬಾಬ್ವೆ ಕ್ರಿಕೆಟ್​ ಮಂಡಳಿಯ ಕೋರಿಕೆ ಮೇರೆಗೆ ಭಾರತ ತಂಡವನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಜುಲೈ 6ರಿಂದ 14ರವರೆಗೆ ಹರಾರೆಯಲ್ಲಿ ಸರಣಿ ನಡೆಯಲಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪ್ರವಾಸ ಪಟ್ಟಿಯನ್ನು ಘೋಷಿಸಿದ್ದು, ಜೂನ್ 1ರಿಂದ 29ರವರೆಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯ ವಹಿಸುವ ಟಿ20 ವಿಶ್ವಕಪ್ ಮುಗಿದ ಒಂದು ವಾರದ ಅಂತರದಲ್ಲೇ ಈ ಸರಣಿ ನಡೆಯಲಿದೆ.

ಜಿಂಬಾಬ್ವೆ ಕೋರಿಕೆ ಮೇರೆಗೆ ಸರಣಿ: ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಜಿಂಬಾಬ್ವೆ ಕ್ರಿಕೆಟ್‌ಗೆ ಬೆಂಬಲ ನೀಡುವ ಗುರಿಯನ್ನು ಬಿಸಿಸಿಐ ಹೊಂದಿದೆ. ಇದು ಜಿಂಬಾಬ್ವೆ ಕ್ರಿಕೆಟ್​ನ ಪುನರ್ನಿರ್ಮಾಣದ ಅವಧಿಯಾಗಿದೆ. ಈ ಸಮಯದಲ್ಲಿ ಜಿಂಬಾಬ್ವೆ ಕ್ರಿಕೆಟ್‌ಗೆ ನಮ್ಮ ಬೆಂಬಲದ ಅಗತ್ಯವಿದೆ. ಬಿಸಿಸಿಐ ಜಾಗತಿಕ ಕ್ರಿಕೆಟ್ ಸಮುದಾಯಕ್ಕೆ ಹೆಚ್ಚಿನ ಕೊಡುಗೆ ನೀಡಲು ಬಯಸುತ್ತದೆ ಎಂದು ಬಿಸಿಸಿಐ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

ಇತರ ಕ್ರಿಕೆಟ್​ ಮಂಡಳಿಗಳ ಜೊತೆಗೆ ದ್ವಿಪಕ್ಷೀಯ ಸರಣಿ ಆಯೋಜಿಸುವುದು ಕ್ರಿಕೆಟ್​ನ ಬದ್ಧತೆಯನ್ನು ತೋರಿಸುತ್ತದೆ. ಇದು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಮತ್ತು ಆರ್ಥಿಕತೆಗೂ ನೆರವಾಗುತ್ತದೆ. ಇದನ್ನು ಕಾರ್ಯಸಾಧ್ಯವಾಗುವಂತೆ ಮಾಡಲು ಬಿಸಿಸಿಐ ತನ್ನ ಕೈಲಾದಷ್ಟು ಪ್ರಯತ್ನಿಸುತ್ತದೆ. ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ತವೆಂಗ್ವಾ ಮುಕುಹ್ಲಾನಿ ಭಾರತ ಪ್ರವಾಸದ ಆತಿಥ್ಯ ವಹಿಸಲು ಉತ್ಸುಕತೆ ವ್ಯಕ್ತಪಡಿಸಿದ್ದಾರೆ ಎಂದು ಜಯ್ ಶಾ ಹೇಳಿದ್ದಾರೆ.

ಭಾರತ ತಂಡ ಕಳೆದ ವರ್ಷ ನವೆಂಬರ್-ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 3 ಟಿ20 ಸರಣಿಗಳನ್ನು ಆಡಿತ್ತು. ನಂತರ 2024ರ ಜನವರಿಯಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನು ಅಫ್ಘಾನಿಸ್ತಾನ ವಿರುದ್ಧ ಆಡಿತ್ತು. ಇದಾದ ಬಳಿಕ ಜೂನ್ 1ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್​ಗೆ ಮುನ್ನ ಯಾವುದೇ ಚುಟುಕು ಮಾದರಿಯ ಕ್ರಿಕೆಟ್​ ಸರಣಿಗಳನ್ನು ನಿಗದಿಪಡಿಸಲಾಗಿಲ್ಲ. ಸದ್ಯ ಭಾರತ ತಂಡ ಇಂಗ್ಲೆಂಡ್ ಜೊತೆ ಐದು ಪಂದ್ಯಗಳ ಟೆಸ್ಟ್​ ಸರಣಿ ಆಡುತ್ತಿದೆ. ಸರಣಿಯಲ್ಲಿ ಎರಡು ಪಂದ್ಯಗಳು ಮುಗಿದಿದ್ದು, 1-1ರಲ್ಲಿ ಸಮಬಲವಾಗಿದೆ.

ಇದನ್ನೂ ಓದಿ: ಅಂಡರ್​-19 ವಿಶ್ವಕಪ್​: ದಕ್ಷಿಣ ಆಫ್ರಿಕಾ ಮಣಿಸಿ 9ನೇ ಸಲ ಫೈನಲ್​ಗೇರಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.