ETV Bharat / sports

ನಮೀಬಿಯಾ ಮಣಿಸಿದ ಆಸೀಸ್​​ ಸೂಪರ್​ -8ಕ್ಕೆ ಲಗ್ಗೆ: ಶ್ರೀಲಂಕಾ - ನೇಪಾಳ ಪಂದ್ಯ ಮಳೆಗಾಹುತಿ - Australia beats Namibia - AUSTRALIA BEATS NAMIBIA

ನಮೀಬಿಯಾವನ್ನು 9 ವಿಕೆಟ್​ಗಳಿಂದ ಮಣಿಸಿದ ಆಸ್ಟ್ರೇಲಿಯಾ ತಂಡವು ಟಿ-20 ವಿಶ್ವಕಪ್‌ ಟೂರ್ನಿಯ ಸೂಪರ್-8 ಹಂತ ತಲುಪಿದೆ.

Australia beats Namibia
ಆಸ್ಟ್ರೇಲಿಯಾ ತಂಡ (Photos: AP)
author img

By PTI

Published : Jun 12, 2024, 9:34 AM IST

ನಾರ್ತ್ ಸೌಂಡ್ (ಆಂಟಿಗುವಾ): ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ನಮೀಬಿಯಾವನ್ನು 9 ವಿಕೆಟ್​ಗಳಿಂದ ಮಣಿಸಿದ ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್‌ನ ಸೂಪರ್-8 ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ನಮೀಬಿಯಾ ನೀಡಿದ್ದ 73 ರನ್​​ಗಳ​ ಗುರಿಯನ್ನು 5.4 ಓವರ್​ಗಳಲ್ಲೇ ತಲುಪಿದ ಕಾಂಗರೂ ಪಡೆ ಗೆಲುವಿನ ಕೇಕೆ ಹಾಕಿತು.

ಟಾಸ್​ ಗೆದ್ದ ಆಸ್ಟ್ರೇಲಿಯಾ ನಾಯಕ ಮಿಚೆಲ್​ ಮಾರ್ಷ್​​ ನಮೀಬಿಯಾವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಆಸೀಸ್​ ಬೌಲಿಂಗ್​ ದಾಳಿಗೆ ತತ್ತರಿಸಿದ ನಮೀಬಿಯನ್ನರು 17 ಓವರ್​​ಗಳಲ್ಲಿ ಕೇವಲ 72 ರನ್​ಗೆ ಆಲೌಟ್​ ಆದರು. ತಂಡದ ಪರ ಆರಂಭಿಕ ಆಟಗಾರ ಮೈಕೆಲ್ ವ್ಯಾನ್ ಲಿಂಗನ್ (10) ಹಾಗೂ ನಾಯಕ ಗೆರ್ಹಾರ್ಡ್​ ಎರಾಸ್ಮಸ್ (36)​ ಮಾತ್ರ ಎರಡಂಕಿ ಮೊತ್ತ ತಲುಪುವಲ್ಲಿ ಯಶಸ್ವಿಯಾದರು.

ಇನ್ನುಳಿದಂತೆ, ನಿಕೋಲಸ್ ಡೇವಿನ್ 2 ರನ್​, ಜಾನ್ ಫ್ರೈಲಿಂಕ್ 1, ಜೆಜೆ ಸ್ಮಿತ್​ 3, ವಿಕೆಟ್​ ಕೀಪರ್​ ಜೇನ್ ಗ್ರೀನ್ 1, ಡೇವಿಡ್ ವೈಸ್ 1, ರೂಬೆನ್ ಟ್ರಂಪೆಲ್ಮನ್ 7 ರನ್​, ಬರ್ನಾರ್ಡ್ 0 ಸ್ಕೋಲ್ಟ್ಜ್ ಹಾಗೂ ಬೆನ್ ಶಿಕೊಂಗೊ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರೆ, ಜ್ಯಾಕ್ ಬ್ರಾಸ್ಸೆಲ್ ಅಜೇಯ 2 ರನ್​ ಗಳಿಸಿದರು. ಆಸೀಸ್​ ಪರ ಮಿಂಚಿನ ದಾಳಿ ನಡೆಸಿದ ಸ್ಪಿನ್ನರ್​ ಆ್ಯಡಂ ಜಂಪಾ 12 ರನ್​ಗೆ 4, ಜೋಶ್​ ಹೇಜಲ್ವುಡ್​ 18ಕ್ಕೆ 2 ಹಾಗೂ ಸ್ಟೋಯ್ನಿಸ್​ 9ಕ್ಕೆ 2 ವಿಕೆಟ್​ ಕಬಳಿಸಿದರು.

73 ರನ್​ಗಳ ಅಲ್ಪ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ, ಕೇವಲ 5.4 ಓವರ್​ಗಳಲ್ಲೇ 1 ವಿಕೆಟ್​ ನಷ್ಟಕ್ಕೆ ಗುರಿ ತಲುಪಿತು. ಡೆವಿಡ್​ ವಾರ್ನರ್​​ 8 ಎಸೆತಗಳಲ್ಲಿ 20 ರನ್​ ಗಳಿಸಿ ವೈಸ್​ ಬೌಲಿಂಗ್​ನಲ್ಲಿ ಔಟಾದರು. ಬಳಿಕ ಟ್ರಾವಿಸ್​ ಹೆಡ್ 17 ಬಾಲ್​ಗೆ 34 ಹಾಗೂ ಮಿಚೆಲ್​ ಮಾರ್ಷ್​ ಅಜೇಯ 18 ರನ್​ ಬಾರಿಸಿ ತಂಡಕ್ಕೆ ಜಯ ತಂದಿತ್ತರು. ಗ್ರೂಪ್​ ಬಿ ಅಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ತಂಡ ಸೂಪರ್​-8 ಹಂತಕ್ಕೆ ಮೊದಲ ತಂಡವಾಗಿ ಲಗ್ಗೆ ಇಟ್ಟಿದೆ.

ಶ್ರೀಲಂಕಾ - ನೇಪಾಳ ಪಂದ್ಯ ಮಳೆಗಾಹುತಿ: ಮಂಗಳವಾರ ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಶ್ರೀಲಂಕಾ ಹಾಗೂ ನೇಪಾಳ ನಡುವಿನ ಇನ್ನೊಂದು ಪಂದ್ಯವು ಮಳೆಯಿಂದ ರದ್ದಾಯಿತು. ಈ ಪಂದ್ಯಕ್ಕೆ ಟಾಸ್​ ಕೂಡ ನಡೆಯಲಿಲ್ಲ. ಇದರಿಂದಾಗಿ ಡಿ ಗ್ರೂಪ್​ನಲ್ಲಿ ದಕ್ಷಿಣ ಆಫ್ರಿಕಾ ತಂಡ ಸೂಪರ್​ - 8 ಹಂತ ತಲುಪಿದೆ. ಮತ್ತೊಂದು ಸ್ಥಾನಕ್ಕಾಗಿ ಬಾಂಗ್ಲಾದೇಶ, ನೆದರ್ಲಾಂಡ್ಸ್​ ಹಾಗೂ ಶ್ರೀಲಂಕಾ ನಡುವೆ ಪೈಪೋಟಿ ಇದೆ.

ಆದರೆ, ಈಗಾಗಲೇ ಮೂರು ಪಂದ್ಯಗಳನ್ನು ಆಡಿರುವ ಲಂಕನ್ನರು ಎರಡರಲ್ಲಿ ಸೋತಿದ್ದು, ಈ ಪಂದ್ಯ ರದ್ದಾಗಿದ್ದರಿಂದ ಕೇವಲ 1 ಅಂಕ ಹೊಂದಿದ್ದಾರೆ. ಇನ್ನೊಂದೆಡೆ, ನೆದರ್ಲಾಂಡ್ಸ್​ ಹಾಗೂ ಬಾಂಗ್ಲಾ ತಂಡಗಳು ತಲಾ ಎರಡು ಪಂದ್ಯಗಳಲ್ಲಿ 1 ಗೆಲುವಿನೊಂದಿಗೆ 2 ಅಂಕ ಹೊಂದಿವೆ. ಹೀಗಾಗಿ, ಇವೆರಡೂ ತಂಡಗಳಿಗೆ ಮುಂದಿನ ಹಂತಕ್ಕೇರಲು ಹೆಚ್ಚಿನ ಅವಕಾಶವಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್‌: ಕೆನಡಾ ವಿರುದ್ಧ ಪಾಕಿಸ್ತಾನಕ್ಕೆ 7 ವಿಕೆಟ್​ಗಳ ಭರ್ಜರಿ ಜಯ; ಸೂಪರ್​-8 ಹಂತಕ್ಕೆ ಬರುತ್ತಾ? - Pakistan Defeats Canada

ETV Bharat Logo

Copyright © 2025 Ushodaya Enterprises Pvt. Ltd., All Rights Reserved.