ಹೈದರಾಬಾದ್: ಐಪಿಎಲ್ನ ಪ್ಲೇಆಫ್ನಲ್ಲಿ ಸೋಲು ಕಾಣುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಟ್ರೋಫಿ ಎತ್ತುವ ಕನಸು ಕೈಬಿಟ್ಟಿತು. ಲೀಗ್‌ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ಗೆಲುವ ಸಾಧಿಸಿದ್ದಾಗ ಭಾರೀ ಆಘಾತಕ್ಕೆ ಒಳಗಾಗಿದ್ದ ಮಾಜಿ ಕ್ರಿಕೆಟರ್ ಅಂಬಟಿ ರಾಯುಡು ಆರ್ಸಿಬಿ ಸೋಲಿಗೆ ಪರೋಕ್ಷವಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಆರ್ಸಿಬಿ ತಂಡ ಪ್ಲೇಆಫ್ಗೆ ತಲುಪಿದಾಗಲೂ ಟ್ರೋಫಿ ಗೆಲ್ಲುವುದಿಲ್ಲ ಎಂದು ವ್ಯಂಗ್ಯವಾಡಿದ್ದರು. ಇದೀಗ ಮತ್ತೆ ತಂಡದ ವಿರುದ್ಧ ಹೇಳಿಕೆ ನೀಡಿದ್ದು, ಆಕ್ರಮಣಕಾರಿ ಸ್ವಭಾವ ಹೊಂದಿದ್ದರೆ ಮಾತ್ರ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ ಎಂದು ಛೇಡಿಸಿದ್ದಾರೆ.
ಮಾಧ್ಯಮವೊಂದರಲ್ಲಿ ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಬ್ಯಾಟರ್ ಅಂಬಟಿ ರಾಯುಡು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಅತಿಯಾದ ಉತ್ಸಾಹ ಮತ್ತು ಆಕ್ರಮಣಕಾರಿ ಮನೋಭಾವ ಹೊಂದಿದ್ದಾರೆ. ಇದು ಗೆಲುವಿಗೆ ನೆರವು ನೀಡುವುದಿಲ್ಲ. ಸಿಎಸ್ಕೆಯನ್ನು ಸೋಲಿಸಿದ ಮಾತ್ರಕ್ಕೆ ಐಪಿಎಲ್ ಟ್ರೋಫಿ ಗೆಲ್ಲುತ್ತೇವೆ ಎಂದು ಭಾವಿಸಬೇಡಿ. ಮುಂದಿನ ವರ್ಷ ಮತ್ತೆ ಬನ್ನಿ ಎಂದು ಹೇಳಿದ್ದಾರೆ.
ಸಿಎಸ್ಕೆ ಸೋಲು ಅರಗಿಸಿಕೊಳ್ಳದ ಅಂಬಟಿ: ಲೀಗ್‌ನ ಕೊನೆಯ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು ಆರ್ಸಿಬಿ ಸೋಲಿಸಿದಾಗ ಅಂಬಟಿ ರಾಯುಡು ಶಾಕ್ಗೆ ಒಳಗಾಗಿದ್ದರು. ಕ್ರಿಕೆಟ್ ಮಾಧ್ಯಮವೊಂದರ ಕಾಮೆಂಟೇಟರ್ ಆಗಿದ್ದ ಅವರು ಸಿಎಸ್ಕೆ ಸೋತಾಗ ಬಾಯಿ ಮುಚ್ಚಿಕೊಂಡು ಆಶ್ಚರ್ಯಚಕಿತರಾಗಿದ್ದರು. ಇದರ ಬಳಿಕವೂ ಅವರು ಆರ್ಸಿಬಿ ವಿರುದ್ಧ ವಾಗ್ದಾಳಿ ಮುಂದುವರಿಸಿ, ಈ ಬಾರಿ ದಕ್ಷಿಣ ಭಾರತದ ತಂಡಕ್ಕೆ ಟ್ರೋಫಿ ಸಿಗಲಿದೆ. ಆದರೆ, ಆರ್ಸಿಬಿ ತಂಡ ಯಾವುದೇ ಕಾರಣಕ್ಕೂ ಐಪಿಎಲ್ ಗೆಲ್ಲುವುದಿಲ್ಲ ಎಂದಿದ್ದರು.
ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 61.75 ಸರಾಸರಿಯೊಂದಿಗೆ 741 ರನ್ ಗಳಿಸುವ ಮೂಲಕ ತಂಡದ ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರರಾಗಿದ್ದಾರೆ. ಭಾರತೀಯ ಆಟಗಾರರಿಗೆ ತಂಡ ಹೆಚ್ಚಿನ ಮನ್ನಣೆ ನೀಡಬೇಕು. ವಿರಾಟ್ ಅವರನ್ನು ಹೊರತುಪಡಿಸಿ ಆ ತಂಡದ ಯಾವೊಬ್ಬ ಭಾರತೀಯ ಬ್ಯಾಟರ್ ಕೂಡ 1 ಸಾವಿರ ರನ್ ಪೂರೈಸಿಲ್ಲ. ಇದು ಭಾರತೀಯ ಆಟಗಾರರ ಮೇಲೆ ತಂಡ ವಿಶ್ವಾಸ ಹೊಂದಿಲ್ಲ ಎಂದು ತೋರಿಸುತ್ತದೆ ಎಂದರು.
ಪ್ಲೇಆಫ್ನಲ್ಲಿ ಸೋತ ಆರ್ಸಿಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತು. ಲೀಗ್ನಲ್ಲಿ ಆಡಿದ 14 ಪಂದ್ಯಗಳಲ್ಲಿ ತಲಾ 7 ಗೆಲುವು, ಸೋಲು ಕಂಡು ಪ್ಲೇಆಫ್ಗೆ ಬಂದಿತ್ತು. ಮೊದಲಾರ್ಧದ ಲೀಗ್ನಲ್ಲಿ ಆಡಿದ 8 ರ ಪೈಕಿ 7 ರಲ್ಲಿ ಸೋತು 1 ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದು ಉಳಿದ 6 ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿ ಎಲ್ಲ ತಂಡಗಳನ್ನು ಹಿಮ್ಮೆಟ್ಟಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಪ್ಲೇಆಫ್ಗೆ ತಲುಪಿತ್ತು.
ಇದನ್ನೂ ಓದಿ; ಐಪಿಎಲ್ಗೆ ದಿನೇಶ್ ಕಾರ್ತಿಕ್ ಕಣ್ಣೀರ ವಿದಾಯ: ತಬ್ಬಿ ಸಂತೈಸಿದ ಕೊಹ್ಲಿ, ಆಟಗಾರರಿಂದ ವಿಶೇಷ ಗೌರವ - Dinesh Karthik