ಹೈದರಾಬಾದ್: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್‌ನ ಡರ್ಹಾಮ್ ಮತ್ತು ಕೆಂಟ್ ನಡುವಿನ 3ನೇ ದಿನದಾಟದ ವೇಳೆ ಶ್ವಾನವೊಂದು ಏಕಾಏಕಿ ಮೈದಾನಕ್ಕೆ ನುಗ್ಗಿ ಆಟಗಾರರು ಮತ್ತು ನೆರೆದಿದ್ದ ಪ್ರೇಕ್ಷಕರರನ್ನು ನಗೆಗಡಲಲ್ಲಿ ತೇಲಿಸಿತು.
ಡರ್ಹಾಮ್ ನಾಯಕ ಮತ್ತು ಆರಂಭಿಕ ಬ್ಯಾಟರ್ ಅಲೆಕ್ಸ್ ಲೀಸ್ ಬ್ಯಾಟಿಂಗ್ ಮಾಡುತ್ತಿದ್ದಾಗ ಘಟನೆ ನಡೆದಿದೆ. ನಾಯಿ ಮೈದಾನಕ್ಕೆ ನುಗ್ಗಿ ಕೆಲಕಾಲ ಮೈದಾನದಲ್ಲಿ ನಿಂತ ನಂತರ, ಹಿಂತಿರುಗಿದೆ. ಈ ಘಟನೆಗೆ ಪ್ರೇಕ್ಷಕರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
⚠️ Dog stops play #ForTheNorth pic.twitter.com/xagDTnb9gu
— Durham Cricket (@DurhamCricket) September 28, 2024
ಇಂತಹ ಘಟನೆಗಳು ಇದೇ ಮೊದಲಲ್ಲ. ಒಮ್ಮೆ ಐಪಿಎಲ್ ಪಂದ್ಯದ ವೇಳೆ ಶ್ವಾನ ಮೈದಾನಕ್ಕೆ ನುಗ್ಗಿ ಕೆಲಕಾಲ ಪಂದ್ಯ ನಿಲ್ಲಿಸಲಾಗಿತ್ತು. ನಾಯಿಯನ್ನು ಮೈದಾನದಿಂದ ಹೊರಗೆ ಕಳುಹಿಲು ಸಿಬ್ಬಂದಿ ಹರಸಾಹಸಪಟ್ಟಿದ್ದರು. ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ ಇದೇ ವರ್ಷ ಘಟನೆ ನಡೆದಿದೆ.
ಶ್ವಾನ ಅಷ್ಟೇ ಅಲ್ಲ, ಹಲವು ಬಾರಿ ಕ್ರೀಡಾಭಿಮಾನಿಗಳೂ ಕೂಡಾ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಮತ್ತು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲೆಂದು ಮೈದಾನಕ್ಕೆ ನುಗ್ಗಿರುವ ಸಾಕಷ್ಟು ನಿದರ್ಶನಗಳಿವೆ. ಈ ವರ್ಷದ ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರ ಕಟ್ಟಾ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಅವರಿಗೆ ನಮಸ್ಕರಿಸಿದ್ದ.
ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಟಿ20: ಭಾರತ ತಂಡದಲ್ಲಿ ಸ್ಪೀಡ್‌ಸ್ಟಾರ್ ಮಯಾಂಕ್, ನಿತಿಶ್ ರೆಡ್ಡಿಗೆ ಅವಕಾಶ - India Bangladesh T20