ನವದೆಹಲಿ: ಮೂರು ಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ಪುಟ್ಟ ದೇಶ ಸಮೋವಾ. ಇಲ್ಲಿನ 28 ವರ್ಷದ ಬ್ಯಾಟರ್ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. ಈ ಯುವ ಕ್ರಿಕೆಟಿಗ ಭಾರತದ ಮಾಜಿ ಸ್ಫೋಟಕ ಬ್ಯಾಟರ್ ಯುವರಾಜ್ ಸಿಂಗ್ ಅವರ 17 ವರ್ಷದ ವಿಶ್ವದಾಖಲೆಯನ್ನು ಅಳಿಸಿ ಹಾಕಿದ್ದಾರೆ.
🚨WORLD RECORD CREATED IN MEN’S T20 LEVEL 1 OVER 39 RUNS
— SportsOnX (@SportzOnX) August 20, 2024
Darius Visser scored 39 runs in match between Samoa Vs Vanuatu
(🎥 - ICC)#T20 #T20WorldCup #records #ICC #CricketUpdate #cricketnews pic.twitter.com/sXiyrlxjtE
ಮಂಗಳವಾರ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್‌ಪೂರ್ವ ಏಷ್ಯಾ-ಪೆಸಿಫಿಕ್ ಕ್ವಾಲಿಫೈಯರ್-ಎ ಪಂದ್ಯದ ವೇಳೆ ಸಮೋವಾ ತಂಡದ ಬ್ಯಾಟ್ಸ್‌ಮನ್ ಡೇರಿಯಸ್ ವಿಸ್ಸರ್ ವನವಾಟು ತಂಡದ ವಿರುದ್ದ ಒಂದೇ ಓವರನಲ್ಲಿ ಮೂರು ನೋಬಾಲ್ ಒಳಗೊಂಡಂತೆ ಆರು ಸಿಕ್ಸರ್‌ನೊಂದಿಗೆ 39ರನ್ ಚಚ್ಚಿದರು.
ಬಲಗೈ ಬ್ಯಾಟ್ಸ್‌ಮನ್ ಆಗಿರುವ ಇವರು ಈ ಪಂದ್ಯದಲ್ಲಿ ಒಟ್ಟು 62 ಎಸೆತಗಳನ್ನು ಎದುರಿಸಿ 132 ರನ್ ಸಿಡಿಸಿದ್ದಾರೆ. ರೋಚಕ ಇನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 14 ಸಿಕ್ಸರ್‌ಗಳು ಸೇರಿದ್ದು ಪಂದ್ಯವನ್ನು ಸಮೋವಾ 10 ರನ್ಗಳಿಂದ ಗೆದ್ದುಕೊಂಡಿತು.
Darius Visser creates history after smashing most runs in an over in Men’s T20Is 💥
— ICC (@ICC) August 20, 2024
Read on ➡️ https://t.co/19hSJuDml5 pic.twitter.com/7ptxoDRxfU
ಹೀಗಿತ್ತು ಪಂದ್ಯ: ಪಂದ್ಯದ 15ನೇ ಓವರ್‌ನಲ್ಲಿ ವನವಾಟುವಿನ ನಲಿನ್ ನಿಪಿಕೊ ಅವರು ಬೌಲಿಂಗ್ ಮಾಡಿದ್ದರು. ಈ ವೇಳೆ ಸ್ಟ್ರೈಕ್ನಲ್ಲಿದ್ದ ವಿಸ್ಸರ್, ಮೊದಲ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್ ಬಾರಿಸಿ 18 ರನ್ ಕಲೆ ಹಾಕಿದರು. ನಂತರ ನಾಲ್ಕನೇ ಎಸೆತ ನೋ ಬಾಲ್ ಆಗಿತ್ತು. ಫ್ರೀ ಹಿಟ್ನಲ್ಲಿ ಡೇರಿಯಸ್ ವಿಸ್ಸರ್ 4ನೇ ಸಿಕ್ಸರ್ ಹೊಡೆದರು. ಐದನೇ ಎಸೆತ ಡಾಟ್ ಆಯ್ತು. ಇದರ ನಂತರ ನಿಪಿಕೋ ಮತ್ತೆ ನೋ ಬಾಲ್ ಎಸೆದರು. ಇದರ ಮುಂದಿನ ಎಸೆತದಲ್ಲಿ ವಿಸ್ಸರ್ ಮತ್ತೊಮ್ಮೆ ಸಿಕ್ಸರ್ ಸಿಡಿಸಿದರು. ಆದರೆ, ಈ ಬಾಲ್ ಕೂಡ ನೋ ಬಾಲ್ ಆಗಿದ್ದು 7 ರನ್‌ಗಳು ಬಂದವು. ಅಂತಿಮ ಎಸೆತದಲ್ಲಿ ವಿಸ್ಸರ್ ಮತ್ತೊಂದು ಸಿಕ್ಸರ್ ಬಾರಿಸಿದರು. ಇದರೊಂದಿಗೆ ಓವರ್ ಒಂದರಲ್ಲಿ 6 ಸಿಕ್ಸರ್‌ಗಳು ಚಚ್ಚಿದರು. ನೋಬಾಲ್‌ನಿಂದಾಗಿ ಹೆಚ್ಚುವರಿ ಮೂರು ರನ್‌ಗಳು ಬಂದು ಒಟ್ಟು 39 ರನ್‌ಗಳು ಹರಿದುಬಂದವು.
Samoa's Darius Visser breaks Yuvraj Singh's record
— SportsTiger (@The_SportsTiger) August 20, 2024
📷: BCCI / ICC#dariusvisser #yuvrajsingh pic.twitter.com/fU5YzimQ2j
2007ರಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ವಿರುದ್ಧ ಯುವರಾಜ್ ಸಿಂಗ್ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ಒಟ್ಟು 36 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು.
ಉಳಿದಂತೆ, ಸಮೋವಾದ ಸ್ಟಾರ್ ಬ್ಯಾಟ್ಸ್‌ಮನ್ ವಿಸ್ಸರ್ 1 ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ. ಇವರಿಗಿಂತ ಮೊದಲು ಯುವರಾಜ್ ಸಿಂಗ್, ಕೀರಾನ್ ಪೊಲಾರ್ಡ್ ಮತ್ತು ನೇಪಾಳದ ದೀಪೇಂದ್ರ ಸಿಂಗ್ ಐರಿ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ: ಅತಿ ಹೆಚ್ಚು ರನ್ಗಳಿಸಿದ ಏಷ್ಯಾದ ಟಾಪ್ 5 ಬ್ಯಾಟರ್ಸ್ ಯಾರು ಗೊತ್ತಾ? - Top 5 Five Asian Batters