ETV Bharat / sports

ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ ಆರಂಭ: ವಾಟರ್ ಸ್ಕೀಯಿಂಗ್‌ನಲ್ಲಿ ಮೊದಲ ಸ್ಥಾನ ಪಡೆದ ಕನ್ನಡತಿ - ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌

ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನ 4 ನೇ ಆವೃತ್ತಿ ಇಂದು ಪ್ರಾರಂಭವಾಗುತ್ತಿದ್ದಂತೆ ಸುಂದರವಾದ ಗುಲ್ಮಾರ್ಗ್ ಉತ್ಸಾಹದಿಂದ ಕಂಗೊಳಿಸುತ್ತಿತ್ತು.

Khelo India Winter Games  Gulmarg  water skiing  ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌  ವಾಟರ್ ಸ್ಕೀಯಿಂಗ್‌
ವಾಟರ್ ಸ್ಕೀಯಿಂಗ್‌ನಲ್ಲಿ ಮೊದಲ ಸ್ಥಾನ ಪಡೆದ ಕನ್ನಡತಿ
author img

By ETV Bharat Karnataka Team

Published : Feb 21, 2024, 6:12 PM IST

ಗುಲ್ಮಾರ್ಗ್(ಜಮ್ಮು ಮತ್ತು ಕಾಶ್ಮೀರ್)​: ವಿಶ್ವವಿಖ್ಯಾತ ಸ್ಕೀ ರೆಸಾರ್ಟ್ ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಇಂದಿನಿಂದ ಆರಂಭವಾಗಿವೆ. ವಿಂಟರ್ ಖೇಲೋ ಇಂಡಿಯಾದ ನಾಲ್ಕನೇ ಆವೃತ್ತಿಯಲ್ಲಿ ಭಾಗವಹಿಸಲು 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 800 ಕ್ರೀಡಾಪಟುಗಳು, ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಆಗಮಿಸಿದ್ದಾರೆ.

ಈ ಅವಧಿಯಲ್ಲಿ, ಆಟಗಾರರು ಸ್ನೋಬೋರ್ಡಿಂಗ್, ಆಲ್ಪೈನ್ ಸ್ಕೀ, ನಾರ್ಡಿಕ್ ಸ್ಕೀ ಮತ್ತು ಸ್ನೋ ಮೌಂಟೇನಿಯರಿಂಗ್‌ ಮುಂತಾದ ಕ್ರೀಡೆಗಳಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಲಿದ್ದಾರೆ. ಸ್ನೋ ಮೌಂಟೇನಿಯರಿಂಗ್‌ ಸ್ಪರ್ಧೆಗಳಲ್ಲಿ ಸುಮಾರು ಹತ್ತು ರಾಜ್ಯಗಳು ಭಾಗವಹಿಸಲಿವೆ. ಪ್ರವಾಸೋದ್ಯಮ ಇಲಾಖೆ, ಗುಲ್ಮಾರ್ಗ್ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಯುವಜನ ಸೇವೆಗಳು ಮತ್ತು ಕ್ರೀಡಾ ಇಲಾಖೆ ಮತ್ತು ಜಮ್ಮು ಮತ್ತು ಕಾಶ್ಮೀರ ಕ್ರೀಡಾ ಮಂಡಳಿಯು ಚಳಿಗಾಲದ ಕ್ರೀಡಾಕೂಟವನ್ನು ಆಯೋಜಿಸಿದೆ. ಇದು ಮ್ಯಾಸ್ಕಾಟ್ ಅನ್ನು ಪ್ರಾರಂಭಿಸುವುದರೊಂದಿಗೆ ಪ್ರಾರಂಭವಾಯಿತು.

ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನ ನಾಲ್ಕನೇ ಆವೃತ್ತಿಯನ್ನು ದೇಶದ ಇತರ ಭಾಗಗಳಲ್ಲಿ ನಡೆದ ಖೇಲೋ ಇಂಡಿಯಾ ಗೇಮ್ಸ್ ಮಾದರಿಯಲ್ಲಿ ನಡೆಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ಸ್ಪೋರ್ಟ್ಸ್ ಕೌನ್ಸಿಲ್ ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನ ಮ್ಯಾಸ್ಕಾಟ್ ಆಗಿ ಹಿಮ ಚಿರತೆಯನ್ನು ಆಯ್ಕೆ ಮಾಡಲಾಗಿದೆ. ಇದು ಸ್ಥಳೀಯ ಜನರ ಎತ್ತರದ ಪರ್ವತ ಅಭಿವೃದ್ಧಿಯ ಸಮಸ್ಯೆಗಳು, ಅದರ ದುರ್ಬಲ ಪರಿಸರ ಮತ್ತು ಸಂರಕ್ಷಣಾ ಪ್ರಯತ್ನಗಳ ಪ್ರಾಮುಖ್ಯತೆಯನ್ನು ಹೈಲೈಟ್ ಮಾಡುವ ಗುರಿಯನ್ನು ಹೊಂದಿದೆ.

ಕ್ರೀಡಾಪಟುಗಳು ಹಾಗೂ ಅಧಿಕಾರಿಗಳಿಗೆ ವಸತಿ, ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಸಂಘಟಕರು ಪೂರ್ಣಗೊಳಿಸಿದ್ದಾರೆ. ಇಲ್ಲಿಯವರೆಗೆ ಖೇಲೋ ಇಂಡಿಯಾದ ಎಲ್ಲಾ ಮೂರು ಆವೃತ್ತಿಗಳನ್ನು ಜಮ್ಮು ಮತ್ತು ಕಾಶ್ಮೀರವು ಆಯೋಜಿಸಿದೆ ಎಂಬುದು ಗಮನಾರ್ಹ. ಭಾಗವಹಿಸುವವರ ಸಂಖ್ಯೆ ಹೆಚ್ಚಾಗಿದೆ. ಏಕೆಂದರೆ ಕ್ರೀಡೋತ್ಸವದಲ್ಲಿ ಭಾಗವಹಿಸಲು ದೇಶದೆಲ್ಲೆಡೆಯಿಂದ ಕ್ರೀಡಾಪಟುಗಳು ಇದೀಗ ಗುಲ್ಮಾರ್ಗ್ ತಲುಪಿದ್ದಾರೆ. ವಾರ್ಷಿಕ ಕಾರ್ಯಕ್ರಮವು ಸ್ಥಳೀಯ ಸಂಸ್ಕೃತಿ ಪ್ರದರ್ಶಿಸುವುದರ ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲದ ಪ್ರವಾಸೋದ್ಯಮವನ್ನು ಉತ್ತೇಜಿಸಿದೆ.

ಕಾಶ್ಮೀರಕ್ಕೆ ಭೇಟಿ ನೀಡಿದ್ದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಕ್ರೀಡಾಕೂಟವನ್ನು ಆಯೋಜಿಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಸ್ಪೋರ್ಟ್ಸ್ ಕೌನ್ಸಿಲ್ ಅನ್ನು ಅಭಿನಂದಿಸಿದ್ದಾರೆ. ತಮ್ಮ ಸಂದೇಶದಲ್ಲಿ ಅವರು ಭಾಗವಹಿಸುವ ಕ್ರೀಡಾಪಟುಗಳಿಗೆ ಆಟಗಳನ್ನು ಆನಂದಿಸಲು ಮತ್ತು ಇಲ್ಲಿ ತಮ್ಮ ವಾಸ್ತವ್ಯವನ್ನು ಸ್ಮರಣೀಯವಾಗಿಸಲು ಸಲಹೆ ನೀಡಿದರು.

ಕರ್ನಾಟಕದ ಆಟಗಾರ್ತಿ ಫಸ್ಟ್​: ನಾಲ್ಕನೇ ಆವೃತ್ತಿಯ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಗುಲ್ಮಾರ್ಗ್ ಇಂದು ನಾರ್ಡಿಕ್ ಸ್ಕೀಯಿಂಗ್‌ನೊಂದಿಗೆ ಪ್ರಾರಂಭವಾಯಿತು. ಈ ಆಟದಲ್ಲಿ ದೇಶಾದ್ಯಂತ ಆಟಗಾರರು ಭಾಗವಹಿಸಿದ್ದರು. 1.5 ಕಿ.ಮೀ ದೂರದ ಓಟದಲ್ಲಿ ಮಹಿಳೆಯರು ಭಾಗವಹಿಸಿದರೆ, ಪುರುಷರು 10 ಕಿ.ಮೀ. ಓಟದಲ್ಲಿ ಭಾಗವಹಿಸಿದರು. ಮಹಿಳೆಯರ ವಾಟರ್ ಸ್ಕೀಯಿಂಗ್​ನಲ್ಲಿ ಕರ್ನಾಟಕದ ಭವಾನಿ ಮತ್ತೊಮ್ಮೆ ಜಯಗಳಿಸಿದರೆ, ಉತ್ತರಾಖಂಡದ ಸೀಮಾ ಸೊರಂಗ್ ಮತ್ತು ಐಟಿಬಿಯ ಸಪ್ನಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.

ಭವಾನಿ 5.23 ನಿಮಿಷಗಳಲ್ಲಿ, ಸೀಮಾ 5.35 ನಿಮಿಷಗಳಲ್ಲಿ ಮತ್ತು ಸಪ್ನಾ 5.48 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿದರು. ಈಟಿವಿ ಭಾರತದ ಜೊತೆಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿದ ಭವಾನಿ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ವ್ಯವಸ್ಥೆಗಳು ಸಾಕಷ್ಟು ಉತ್ತಮವಾಗಿವೆ. ಸೌಲಭ್ಯಗಳು ಸಹ ಉತ್ತಮವಾಗಿವೆ. ಈ ಬಾರಿ ಸಾಕಷ್ಟು ಆಧುನಿಕತೆಯನ್ನು ಬಳಸಲಾಗುತ್ತಿದೆ. ನಾನು ಎಲ್ಲಾ ವ್ಯವಸ್ಥೆಗಳಿಂದ ತೃಪ್ತಿ ಹೊಂದಿದ್ದೇನೆ. ನಾನು ಚಳಿಗಾಲದ ಅಥ್ಲೀಟ್ ಮತ್ತು ಕೆಟ್ಟ ಹವಾಮಾನದ ಕಾರಣ ಈ ಬಾರಿ ಖೇಲೋ ಇಂಡಿಯಾವನ್ನು ಆಯೋಜನೆ ಮಾಡಲಾಗದು ಎಂದು ನಾನು ಕೇಳಿದಾಗ ತುಂಬಾ ನಿರಾಶೆಗೊಂಡಿದ್ದೆ. ಕಳೆದ ವರ್ಷವೂ ಚಿನ್ನದ ಪದಕ ಜಯಿಸಿದ್ದು, ಈ ಬಾರಿಯೂ ನನ್ನ ಸಂಪೂರ್ಣ ಶ್ರಮವನ್ನು ಹಾಕಿದ್ದೇನೆ. ಈ ಬಾರಿಯೂ ಪದಕ ಗೆಲ್ಲುವ ವಿಶ್ವಾಸವಿದೆ ಎಂದರು.

ಉತ್ತರಾಖಂಡದ ಮತ್ತೊಬ್ಬ ಆಟಗಾರ್ತಿ ಪೂಜಾ ಮಾತನಾಡಿ, ಅಗ್ರ ಐದರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ ನನ್ನ ಪ್ರದರ್ಶನದಿಂದ ಸಾಕಷ್ಟು ತೃಪ್ತರಾಗಿದ್ದೇನೆ. ನಾನು ಪ್ರಥಮ ಬಾರಿಗೆ ಭಾಗವಹಿಸುತ್ತಿದ್ದು, ಸ್ಪರ್ಧೆಯು ಸಾಕಷ್ಟು ಚೆನ್ನಾಗಿದೆ ಎಂದರು.

ಓದಿ: 'ದೇಶೀಯ ಕ್ರಿಕೆಟ್​ ಆಡಿ': ಬಿಸಿಸಿಐ ನಿರ್ಧಾರ ಸ್ವಾಗತಿಸಿದ ಕ್ರಿಕೆಟಿಗ ಮನೋಜ್​ ತಿವಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.