ಪಲ್ಲೆಕೆಲೆ(ಶ್ರೀಲಂಕಾ): ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯ ಭಾನುವಾರ ರಾತ್ರಿ ನಡೆಯಿತು. ಲಂಕಾ ನೀಡಿದ 162 ರನ್ ಗುರಿಯೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ ಇನಿಂಗ್ಸ್‌ಗೆ ಆರಂಭದಲ್ಲೇ ಮಳೆ ಅಡ್ಡಿಪಡಿಸಿತು. ಇದರಿಂದ ಪಂದ್ಯವನ್ನು 8 ಓವರ್‌ಗೆ ಇಳಿಸಲಾಯಿತು. ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ, ಟೀಂ ಇಂಡಿಯಾ ಗೆಲ್ಲಲು 8 ಓವರ್‌ಗಳಲ್ಲಿ 78 ರನ್ ಕಲೆ ಹಾಕಬೇಕಿತ್ತು.
ಯಶಸ್ವಿ ಜೈಶ್ವಾಲ್ (15 ಎಸೆತಗಳಲ್ಲಿ 30 ರನ್), ಸೂರ್ಯಕುಮಾರ್ ಯಾದವ್ (12 ಎಸೆತಗಳಲ್ಲಿ 26 ರನ್), ಹಾರ್ದಿಕ್ ಪಾಂಡ್ಯ (ಔಟಾಗದೆ 22 ರನ್) ಮೂಲಕ 6.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರತ ಈ ಗುರಿ ತಲುಪಿತು. ಗಿಲ್ ಬದಲು ಸಂಜು (0) ಈ ಪಂದ್ಯದಲ್ಲಿ ಅವಕಾಶ ಪಡೆದರು. ಆದರೆ ಅವರು ಯಶಸ್ವಿಯಾಗಲಿಲ್ಲ.
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಕುಶಾಲ್ ಮೆಂಡಿಸ್ (10 ರನ್) ವಿಫಲರಾದರೆ, ಪಾತುಮ್ ನಿಸ್ಸಾಂಕ (32 ರನ್) ಸಾಧಾರಣ ಪ್ರದರ್ಶನ ನೀಡಿದರು. ಆದರೆ, ಕುಶಾಲ್ ಪೆರೇರಾ (53 ರನ್) ಅರ್ಧಶತಕ ಗಳಿಸಿದರು. ಇನ್ನುಳಿದಂತೆ, ಕಮಿಂದು ಮೆಂಡಿಸ್ (26 ರನ್), ಚರಿತ್ ಅಸಲಂಕ (14 ರನ್), ದಸುನ್ ಶನಕ (0), ವನಿದು ಹಸರಂಗ (0), ರಮೇಶ್ ಮೆಂಡಿಸ್ (12 ರನ್), ಮಹಿಷ್ ತೀಕ್ಷಣ (2) ಹೆಚ್ಚು ರನ್ ಗಳಿಸದೆ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಹಾದಿ ಹಿಡಿದರು.
India ensure series victory with second win in a row 👊#SLvIND: https://t.co/ruw5VGncoa pic.twitter.com/YNmzxFIhI8
— ICC (@ICC) July 28, 2024
ಟೀಂ ಇಂಡಿಯಾದ ಬೌಲರ್‌ಗಳಾದ ರವಿ ಬಿಷ್ಣೋಯ್, ಅರ್ಷ್‌ದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದು ಮಿಂಚಿದರು.
ಪಂದ್ಯದ 15 ಓವರ್‌ಗಳ ನಂತರ ಶ್ರೀಲಂಕಾ 130-2ರೊಂದಿಗೆ ಉತ್ತಮ ಸ್ಥಿತಿಯಲ್ಲಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ 15.1 ಓವರ್ನಲ್ಲಿ ಭಾರತಕ್ಕೆ ಬ್ರೇಕ್ ನೀಡಿದರು. ಕಮಿಂದು ಮೆಂಡೀಸ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಲಂಕಾ ಬ್ಯಾಟಿಂಗ್ ಕ್ರಮಾಂಕದಲ್ಲಿ 30 ರನ್‌ಗಳ ಅಂತರದಲ್ಲಿ 6 ವಿಕೆಟ್‌ಗಳು ಉರುಳಿದವು.
ಸರಣಿಯ ಕೊನೆಯ ಮತ್ತು 3ನೇ ಟಿ20 ಪಂದ್ಯ ನಾಳೆ (ಮಂಗಳವಾರ) ನಡೆಯಲಿದೆ.
ಇದನ್ನೂ ಓದಿ: ಮಹಿಳಾ ಏಷ್ಯಾಕಪ್ ಫೈನಲ್: ಶ್ರೀಲಂಕಾ ವನಿತೆಯರು ಚಾಂಪಿಯನ್ - SLW Beat INDW