ಮೇಷ: ಮೇಷ ರಾಶಿಯ ಜನರ ಕುರಿತು ನಾವು ಮಾತನಾಡುವುದಾದರೆ, ಈ ವಾರವು ನಿಮ್ಮ ಪಾಲಿಗೆ ಉತ್ತಮ ಫಲವನ್ನು ನೀಡಲಿದೆ. ನಿಮ್ಮ ಜೀವನ ಸಂಗಾತಿಗೆ ಅವರ ಕೆಲಸದಲ್ಲಿ ಸಹಾಯ ಮಾಡಲಿದ್ದೀರಿ. ನಿಮ್ಮ ವ್ಯವಹಾರಕ್ಕೆ ಗಮನ ನೀಡಿ. ನಿಮ್ಮ ಸಂಬಂಧದಲ್ಲಿ ಪ್ರೇಮವನ್ನು ಕಾಣಬಹುದು. ಈ ವಾರದಲ್ಲಿ ಹಣಕಾಸಿನ ವಿಚಾರದ ಕುರಿತ ವಿಪರೀತ ಚಿಂತೆಯು ನಿಮಗೆ ತಲೆನೋವು ನೀಡಬಹುದು. ಅದೃಷ್ಟವು ನಿಮ್ಮ ಪರವಾಗಿದ್ದು, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ಪಾಲುಗಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಪಾಲುದಾರರಿಗೆ ಗಮನ ನೀಡಬೇಕು. ಉದ್ಯೋಗದಲ್ಲಿರುವ ಜನರು ಹೊಸ ಕೆಲಸದ ಕುರಿತು ಯೋಚಿಸಬಹುದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉನ್ನತ ಶಿಕ್ಷಣದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯಬಹುದು. ನಿಮ್ಮ ಅಚ್ಚುಮೆಚ್ಚಿನ ವಿಷಯಗಳನ್ನು ಓದಲು ನಿಮಗೆ ಅವಕಾಶ ಸಿಗಬಹುದು. ಆತ್ಮವಿಶ್ವಾಸವು ಉತ್ತುಂಗದಲ್ಲಿರಲಿದೆ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಉಂಟಾಗಬಹುದು. ನಿಮ್ಮ ದಿನಚರಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಿದ್ದೀರಿ.
ವೃಷಭ: ವೃಷಭ ರಾಶಿಯವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ಏನಾದರೂ ತಪ್ಪು ಗ್ರಹಿಕೆಯಿಂದಾಗಿ ಪ್ರೇಮ ಸಂಬಂಧದಲ್ಲಿ ಒಂದಷ್ಟು ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ವೈವಾಹಿಕ ಬದುಕಿನಲ್ಲಿ ಹೆಚ್ಚೇನೂ ವಿಶೇಷತೆ ಕಾಣಿಸಿಕೊಳ್ಳದು. ಕಾನೂನಿನ ಸಂಬಂಧಿಸಿದ ನಿಮ್ಮ ಯಾವುದೇ ಕೆಲಸವು ಬಾಕಿ ಉಳಿದಿದ್ದರೆ ಹಣವನ್ನು ಪಾವತಿಸುವ ಮೂಲಕ ನೀವು ಅದನ್ನು ಪೂರ್ಣಗೊಳಿಸಬಹುದು. ನೀವು ಹೊಸ ವಾಹನವನ್ನು ಖರೀದಿಸುವುದಾದರೆ ಇದು ನಿಮಗೆ ದುಬಾರಿ ಎನಿಸಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಕಾಲ ಕ್ರಮೇಣ ಯಶಸ್ಸನ್ನು ಗಳಿಸಲಿದ್ದೀರಿ. ಆದರೆ ನೀವು ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡದೆ ಇರಬಹುದು. ಹೀಗಾಗಿ ನಿಮಗೆ ಕಡಿಮೆ ಅಂಕಗಳು ಲಭಿಸಬಹುದು. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳುವ ಕಾರಣ ನೀವು ಒಳ್ಳೆಯ ವೈದ್ಯರನ್ನು ಸಮಾಲೋಚಿಸಿದರೆ ಒಳ್ಳೆಯದು. ಮನೆಯ ಅಲಂಕಾರ ಮತ್ತು ದುರಸ್ತಿಗಾಗಿ ಒಂದಷ್ಟು ಹಣವನ್ನು ನೀವು ಖರ್ಚು ಮಾಡಬಹುದು. ಉದ್ಯೋಗದಲ್ಲಿನ ಭಡ್ತಿಯ ವಿಚಾರಕ್ಕೆ ತಡೆಯುಂಟಾಗಬಹುದು. ವ್ಯವಹಾರವನ್ನು ವಿಸ್ತರಿಸುವ ಅವಕಾಶ ನಿಮಗೆ ದೊರೆಯಲಿದೆ.
ಮಿಥುನ ಮಿಥುನ ರಾಶಿಯವರ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಜೀವನ ಸಂಗಾತಿಯ ಜೊತೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ಪ್ರೇಮ ಸಂಬಂಧದಲ್ಲಿ ಒಂದಷ್ಟು ಗೊಂದಲ ಉಂಟಾಗಬಹುದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಲಿದ್ದಾರೆ. ವಿಪರೀತ ಹಣ ವೆಚ್ಚ ಉಂಟಾಗಲಿದೆ. ಆರೋಗ್ಯದಲ್ಲಿ ಉಂಟಾಗುವ ಏರುಪೇರು ನಿಮ್ಮನ್ನು ಬಾಧಿಸಬಹುದು. ನೀವು ಹೊಸ ಮನೆಯನ್ನು ಖರೀದಿಸಲಿದ್ದೀರಿ. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಹೊಸ ತಂತ್ರಜ್ಞಾನವನ್ನು ಬಳಸಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಹಳೆಯ ಕೆಲಸಕ್ಕೆ ಅಂಟಿಕೊಂಡರೆ ಒಳ್ಳೆಯದು. ಯಾವುದೇ ವಾಗ್ವಾದದಲ್ಲಿ ಪಾಲ್ಗೊಳ್ಳಬೇಡಿ. ಸಹೋದರನ ಮದುವೆಯಲ್ಲಿ ಎದುರಾಗಿರುವ ಅಡಚಣೆಗಳು ದೂರಗೊಳ್ಳಲಿವೆ. ಮಂಗಳದಾಯಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಶಿಕ್ಷಕರಿಂದ ನೆರವನ್ನು ಪಡೆಯಲಿದ್ದೀರಿ.
ಕರ್ಕಾಟಕ: ಕರ್ಕಾಟಕ ರಾಶಿಯ ಜನರ ಕುರಿತು ನಾವು ಮಾತನಾಡುವುದಾದರೆ, ಈ ವಾರವು ನಿಮ್ಮ ಪಾಲಿಗೆ ಉತ್ತಮ ಫಲವನ್ನು ನೀಡಲಿದೆ. ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿಯ ವಾತಾವರಣ ಇರಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಒಂದಷ್ಟು ಸಮಯ ಕಳೆಯಲಿದ್ದೀರಿ. ನೀವು ನಿಮ್ಮ ಕುಟುಂಬದ ಸದಸ್ಯರ ಅಗತ್ಯತೆಗಳನ್ನು ಈಡೇರಿಸಲು ಕಠಿಣ ಶ್ರಮ ಪಡಲಿದ್ದೀರಿ. ಕೌಟುಂಬಿಕ ಬದುಕಿನಲ್ಲಿ ಪ್ರೀತಿ ನೆಲೆಸಲಿದೆ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ನೀವು ಆಸ್ತಿಯಲ್ಲಿ ಹೂಡಿಕೆ ಮಾಡಲು ಬಯಸುವುದಾದರೆ ಇದು ಸಕಾಲ. ನೀವು ಈಗಾಗಲೇ ಯಾವುದೇ ಹೂಡಿಕೆಯನ್ನು ಮಾಡಿದ್ದರೆ ಅದರಿಂದಲೂ ಸಂಪೂರ್ಣ ಲಾಭವನ್ನು ಗಳಿಸಲಿದ್ದೀರಿ. ಉದ್ಯೋಗದಲ್ಲಿರುವವರು ಭಡ್ತಿ ಪಡೆಯಲು ಅವಕಾಶ ಪಡೆಯಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ವಿದೇಶದಿಂದ ಹೊಸ ಸಂಪರ್ಕವನ್ನು ಮಾಡಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಆದರೆ ನಿಮ್ಮ ಒಂದಷ್ಟು ಸಮಯವನ್ನು ನೀವು ಗೆಳೆಯರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕಳೆಯಲಿದ್ದು ಇದರಿಂದ ನಿಮ್ಮ ಅಧ್ಯಯನಕ್ಕೆ ಹಿನ್ನಡೆ ಉಂಟಾಗಲಿದೆ.
ಸಿಂಹ: ಸಿಂಹ ರಾಶಿಯವರ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಈ ವಾರದಲ್ಲಿ ನಿಮ್ಮ ಜೀವನ ಸಂಗಾತಿಯ ಜೊತೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ನಿಮ್ಮ ಜೀವನ ಸಂಗಾತಿಯು ಹೊಸ ಸಾಧನೆಯನ್ನು ಮಾಡಲಿದ್ದು, ಇದರಿಂದಾಗಿ ಸಂತಸದ ವಾತಾವರಣ ನೆಲೆಸಲಿದೆ. ಪ್ರೇಮ ಜೀವನವು ಎಂದಿನಂತೆ ಮುಂದುವರಿಯಲಿದೆ. ನೀವು ಈಗಾಗಲೇ ಯಾವುದೇ ಹೂಡಿಕೆಯನ್ನು ಮಾಡಿದ್ದರೆ ಅದರಿಂದಲೂ ಸಂಪೂರ್ಣ ಲಾಭವನ್ನು ಗಳಿಸಲಿದ್ದೀರಿ. ನೀವು ಯಾರಿಗಾದರೂ ಹಣವನ್ನು ಸಾಲ ನೀಡಿದ್ದರೆ ಅವರು ನಿಮಗೆ ಸಕಾಲದಲ್ಲಿ ಅದನ್ನು ಮರಳಿಸಲಿದ್ದಾರೆ. ನೀವು ಭೂಮಿ ಅಥವಾ ಮನೆಯನ್ನು ಖರೀದಿಸಲು ಯೋಚಿಸುವುದಾದರೆ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಸ್ಪರ್ಧೆಗಳಿಗಾಗಿ ಸಿದ್ಧತೆ ನಡೆಸುತ್ತಿರುವ ಯುವಕರು ಕಠಿಣ ಶ್ರಮ ಪಡಬೇಕು. ಉದ್ಯೋಗದಲ್ಲಿರುವ ಜನರು ತಮ್ಮ ಬಾಸ್ ನಿಂದ ಪ್ರಶಂಸೆ ಗಳಿಸಲಿದ್ದಾರೆ. ವ್ಯವಹಾರದಲ್ಲಿರುವ ಜನರು ಹೊಸ ಸಂಪರ್ಕಗಳನ್ನು ಸಾಧಿಸಲಿದ್ದಾರೆ. ಇದರಿಂದಾಗಿ ತಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಅವರು ಯಶಸ್ವಿಯಾಗಲಿದ್ದಾರೆ.
ಕನ್ಯಾ: ಕನ್ಯಾ ರಾಶಿಯ ಜನರ ಕುರಿತು ನಾವು ಮಾತನಾಡುವುದಾದರೆ, ಈ ವಾರವು ನಿಮ್ಮ ಪಾಲಿಗೆ ಉತ್ತಮ ಫಲವನ್ನು ನೀಡಲಿದೆ. ಪ್ರೇಮ ಸಂಬಂಧದಲ್ಲಿ ಸಂಬಂಧದಲ್ಲಿ ಅನ್ಯೋನ್ಯತೆಯು ಹೆಚ್ಚಲಿದೆ. ನೀವು ನಿಮ್ಮ ಪ್ರೇಮಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಪರಿಚಯಿಸಲಿದ್ದೀರಿ. ನಿಮ್ಮ ವೈವಾಹಿಕ ಜೀವನವು ಸಂತಸದಿಂದ ಕೂಡಿರಲಿದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗುವ ಯೋಜನೆಯನ್ನು ರೂಪಿಸಲಿದ್ದು ಎಲ್ಲರೂ ಸಂತಸ ಅನುಭವಿಸಲಿದ್ದೀರಿ. ಈ ವಾರ ನಿಮಗೆ ದುಬಾರಿ ಎನಿಸಲಿದೆ. ಒಂದಷ್ಟು ಭೂಮಿಯನ್ನು ಖರೀದಿಸಲು ನೀವು ಯೋಚಿಸುವುದಾದರೆ ಈ ವಾರವು ನಿಮಗೆ ಒಳ್ಳೆಯದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ನೀವು ಯಾವುದಾದರೂ ಸ್ಪರ್ಧೆಗೆ ಪೂರ್ವಸಿದ್ಧತೆ ನಡೆಸುತ್ತಿದ್ದರೆ, ನೀವು ಕಠಿಣ ಶ್ರಮ ಪಡಬೇಕು. ವ್ಯವಹಾರದಲ್ಲಿರುವ ಜನರು ತಮ್ಮ ವ್ಯವಹಾರವನ್ನು ವಿಸ್ತರಿಸುವುದರಲ್ಲಿ ಯಶಸ್ಸನ್ನು ಗಳಿಸಲಿದ್ದಾರೆ. ಉದ್ಯೋಗದಲ್ಲಿರುವವರಿಗೆ ಕೆಲಸದಲ್ಲಿ ಭಡ್ತಿ ಪಡೆಯುವುದಕ್ಕಾಗಿ ಅವಕಾಶ ದೊರೆಯಬಹುದು. ನೀವು ಹಿರಿಯರು ಮತ್ತು ಕಿರಿಯರ ಬೆಂಬಲವನ್ನು ನೀವು ಪಡೆಯಲಿದ್ದೀರಿ. ಅವಿವಾಹಿತರಿಗೆ ಒಳ್ಳೆಯ ವಿವಾಹ ಪ್ರಸ್ತಾಪ ಬರಬಹುದು.
ತುಲಾ: ತುಲಾ ರಾಶಿಯವರ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿಯ ವಾತಾವರಣ ಇರಲಿದೆ. ನಿಮ್ಮ ಪ್ರೇಮ ಜೀವನ ಚೆನ್ನಾಗಿರಲಿದೆ. ಆದರೆ ನಿಮ್ಮ ಮನಸ್ಸು ಈ ವಾರದಲ್ಲಿ ಒಂದಷ್ಟು ಚಂಚಲತೆಗೆ ಒಳಗಾಗಬಹುದು. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮ್ಮ ಪಾಲಿಗೆ ಕಷ್ಟವೆನಿಸಬಹುದು. ಸಂಬಂಧದಲ್ಲಿ ತಪ್ಪು ಗ್ರಹಿಕೆ ಉಂಟಾಗುವ ಕಾರಣ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕಾಗಿ ತಜ್ಞರ ಸಲಹೆಯನ್ನು ಪಡೆದರೆ ನಿಮಗೆ ಒಳ್ಳೆಯದು. ಜಮೀನು ಅಥವಾ ವಾಹನಕ್ಕಾಗಿ ನೀವು ಹಣ ಖರ್ಚು ಮಾಡಲಿದ್ದು ನಿಮ್ಮ ಪಾಲಿಗೆ ಇದು ತುಂಬಾ ಒಳ್ಳೆಯದು. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ತರುವುದಕ್ಕಾಗಿ ನಿಮ್ಮ ದಿನಚರಿಯಲ್ಲಿ ನೀವು ಬೆಳಗ್ಗಿನ ನಡಿಗೆ, ಯೋಗ ಮತ್ತು ಧ್ಯಾನವನ್ನು ಸೇರಿಸಿ. ಉದ್ಯೋಗದಲ್ಲಿರುವ ಜನರು ತಮ್ಮ ಉದ್ಯೋಗದಲ್ಲಿ ಬದಲಾವಣೆಗಳನ್ನು ಮಾಡಲಿದ್ದು ಅವರ ಪಾಲಿಗೆ ಇದು ಒಳ್ಳೆಯದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಏನಾದರೂ ಹೊಸ ಕೆಲಸ ಮಾಡುವ ಕುರಿತು ಯೋಚಿಸಲಿದ್ದಾರೆ.
ವೃಶ್ಚಿಕ: ವೃಶ್ಚಿಕ ರಾಶಿಯವರ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಜೊತೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದ್ದು ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಯಾವುದಾದರೂ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಇದು ಸಕಾಲ. ನೀವು ಯಶಸ್ಸು ಸಾಧಿಸಲಿದ್ದೀರಿ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಸಕಾಲ. ನೀವು ಯಾರಿಗಾದರೂ ಸಾಲವನ್ನು ನೀಡಲು ಇಚ್ಛಿಸುವುದಾದರೆ ಮುಂದಕ್ಕೆ ಹೆಜ್ಜೆ ಇಡಬಹುದು. ಕುಟುಂಬದ ವೆಚ್ಚದಲ್ಲಿ ಹೆಚ್ಚಳ ಉಂಟಾಗಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಯಾವುದಾದರೂ ಹೊಸ ಕೆಲಸ ಅಥವಾ ಕಾಮಗಾರಿಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅವರಿಗೆ ಲಾಭ ದೊರೆಯಲಿದೆ. ಉದ್ಯೋಗದಲ್ಲಿರುವವರು ಭಡ್ತಿ ಪಡೆಯಲು ಅವಕಾಶ ಪಡೆಯಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಕಠಿಣ ಶ್ರಮ ಪಡಬೇಕು. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು.
ಧನು: ಧನು ರಾಶಿಯವರ ಕುರಿತು ಹೇಳುವುದಾದರೆ ನಿಮಗೆ ಈ ವಾರವು ಒಳ್ಳೆಯದು. ಆರೋಗ್ಯದಲ್ಲಿ ಏರುಪೇರು ಉಂಟಾಗಲಿದ್ದು ಇದು ನಿಮ್ಮನ್ನು ಬಾಧಿಸಬಹುದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಕಠಿಣ ಶ್ರಮ ಪಟ್ಟರೆ ನಿಮಗೆ ಯಶಸ್ವು ದೊರೆಯಲಿದೆ. ವ್ಯವಹಾರದಲ್ಲಿರುವ ಜನರು ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅವರಿಗೆ ಲಾಭ ದೊರೆಯಲಿದೆ. ಉದ್ಯೋಗದಲ್ಲಿರುವವರು ತಮ್ಮ ಬಾಸ್ ಜೊತೆಗೆ ಎಚ್ಚರಿಕೆಯಿಂದ ಮಾತನಾಡಿದರೆ ಅವರಿಗೆ ಒಳ್ಳೆಯದು. ನೀವು ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿಯ ವಾತಾವರಣ ಇರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ನೀವು ನಿಮ್ಮ ಪ್ರೇಮ ಜೀವನದಲ್ಲಿ ಕಹಿತನವನ್ನು ಕಾಣಬಹುದು. ಭೂಮಿ ಮತ್ತು ಹೊಸ ವಾಹನ ಖರೀದಿಸಲು ನೀವು ಹಣ ಖರ್ಚು ಮಾಡಬಹುದು. ಈ ವಾರದಲ್ಲಿ ಹಣವನ್ನು ಖರ್ಚು ಮಾಡುವ ಮೊದಲು ನೀವು ಅನೇಕ ಬಾರಿ ಯೋಚಿಸಲಿದ್ದೀರಿ. ಇದರಿಂದಾಗಿ ನಿಮ್ಮ ಅನೇಕ ಕೆಲಸಗಳು ಬಾಕಿ ಉಳಿಯಬಹುದು. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಲಾಭದಾಯಕವೆನಿಸಲಿದೆ.
ಮಕರ: ಮಕರ ರಾಶಿಯವರ ಪ್ರೇಮ ಸಂಬಂಧದ ಕುರಿತು ಮಾತನಾಡುವುದಾದರೆ ಈ ವಾರವು ಒಳ್ಳೆಯದು. ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸ ಮತ್ತು ಶಾಂತಿ ಕಾಣಿಸಿಕೊಳ್ಳಲಿದೆ. ವೈವಾಹಿಕ ಜೀವನದ ಒಳಿತಿಗಾಗಿ ಏಕಾಂಗಿಯಾಗಿ ಒಂದಷ್ಟು ಸಮಯವನ್ನು ಕಳೆಯಿರಿ. ಹೀಗೆ ಮಾಡಿದರೆ ನಿಮ್ಮ ಸಂಬಂಧದಲ್ಲಿ ಪ್ರೇಮವು ನೆಲೆಸಲಿದೆ. ಪ್ರೇಮ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವು ಸಮಸ್ಯೆಗಳನ್ನುಂಟು ಮಾಡಬಹುದು. ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳುವುದಕ್ಕಾಗಿ ನೀವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ನೀವು ಒಟ್ಟಿಗೆ ಕುಳಿತು ಪ್ರತಿಯೊಂದನ್ನು ತಾಳ್ಮೆಯಿಂದ ಆಲಿಸಿ ಅರಿತುಕೊಂಡರೆ ಒಳ್ಳೆಯದು.
ಕುಂಭ: ಕುಂಭ ರಾಶಿಯವರ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಸಾಕಷ್ಟು ಸಂತಸವನ್ನು ಕರುಣಿಸಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮ್ಮನ್ನು ಚಿಂತೆಯು ಕಾಡಲಿದ್ದು ನೀವು ಒಳ್ಳೆಯ ವೈದ್ಯರನ್ನು ಸಮಾಲೋಚಿಸಿದರೆ ಒಳ್ಳೆಯದು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿಯದೆ ಇರಬಹುದು. ಇದರಿಂದಾಗಿ ಪರೀಕ್ಷೆಯಲ್ಲಿ ಅವರು ನಿರೀಕ್ಷಿತ ಫಲಿತಾಂಶವನ್ನು ಪಡೆಯದೆ ಇರಬಹುದು. ಮನೆ, ಕಟ್ಟಡ, ಆಸ್ತಿ, ಅಂಗಡಿ, ಜಮೀನು ಇತ್ಯಾದಿಗಳ ಖರೀದಿಗಾಗಿ ನೀವು ಹಣ ಹೂಡಿಕೆ ಮಾಡಬಹುದು. ಭವಿಷ್ಯದಲ್ಲಿ ಇದರಿಂದ ನೀವು ಉತ್ತಮ ಲಾಭ ಗಳಿಸಲಿದ್ದೀರಿ. ವೈವಾಹಿಕ ಬದುಕಿನಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ಪ್ರೇಮ ಸಂಬಂಧದಲ್ಲಿ ಕಹಿತನ ಕಾಣಿಸಿಕೊಳ್ಳಬಹುದು. ನೀವು ಮನೆಯ ಅಲಂಕಾರಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಸಕಾಲ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದಲ್ಲಿ ಕಠಿಣ ಶ್ರಮ ತೋರಲಿದ್ದಾರೆ. ನೀವು ಆಸ್ತಿಗೆ ಸಂಬಂಧಿಸಿದ ಯಾವುದೇ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ಇದರಲ್ಲಿ ಲಾಭ ಗಳಿಸಲಿದ್ದೀರಿ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯುವ ಕಾರಣ ಸಾಕಷ್ಟು ಸಂತಸ ಅನುಭವಿಸಲಿದ್ದಾರೆ. ನಿಮ್ಮ ಶಿಕ್ಷಕರಿಂದ ಸಹಕಾರ ಪಡೆಯಲಿದ್ದೀರಿ.
ಮೀನ: ಮೀನ ರಾಶಿಯವರ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ತುಂಬಾ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಶಕ್ತಿಯನ್ನು ಹೊಂದಿರಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಗಮನ ನೀಡಲಿದ್ದಾರೆ. ಆದರೆ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಲಿದ್ದು ಅವರು ದೃಢತೆಯಿಂದ ಅದನ್ನು ಎದುರಿಸಬೇಕು. ಉದ್ಯೋಗದಲ್ಲಿರುವವರು ತಮ್ಮ ಹಳೆಯ ಕೆಲಸಕ್ಕೆ ಅಂಟಿಕೊಂಡರೆ ಒಳ್ಳೆಯದು. ನಿಮಗೆ ಅನೇಕ ಒಳ್ಳೆಯ ಅವಕಾಶಗಳು ಲಭಿಸಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಬಾಕಿ ಉಳಿದಿರುವ ತಮ್ಮ ವ್ಯವಹಾರ ಯೋಜನೆಗಳನ್ನು ಪ್ರಾರಂಭಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ಯಶಸ್ಸನ್ನು ಗಳಿಸಲಿದ್ದೀರಿ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಅವಿವಾಹಿತರ ವಿಚಾರದಲ್ಲಿ ವಿವಾಹದ ಪ್ರಸ್ತಾವನೆಯ ಮಾತುಕತೆ ಉಂಟಾಗಬಹುದು. ಜೀವನ ಸಂಗಾತಿಯ ಜೊತೆಗಿನ ವಿವಾದವು ಕೊನೆಗೊಳ್ಳಲಿದೆ. ಪ್ರೇಮ ಸಂಬಂಧದಲ್ಲಿ ವಾಗ್ವಾದ ಕಾಣಿಸಿಕೊಳ್ಳಬಹುದು. ಈ ವಾರದಲ್ಲಿ ಸಾಕಷ್ಟು ಅನಗತ್ಯ ವೆಚ್ಚಗಳು ಉಂಟಾಗಬಹುದು. ಹೀಗಾಗಿ ಉಳಿತಾಯಕ್ಕೆ ನೀವು ಗಮನ ನೀಡಬೇಕು. ಮನೆಯ ಅಗತ್ಯತೆಗಳಿಗಾಗಿ ಸಾಕಷ್ಟು ಖರ್ಚುವೆಚ್ಚ ಉಂಟಾಗಲಿದೆ.