ರಾಯ್‌ಪುರ: ಮನೆಯಲ್ಲಿ ಹಲವು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದರೆ ಅದಕ್ಕೆ ಕಾರಣ ವಾಸ್ತು ದೋಷವೂ ಇರಬಹುದು. ಉದಾಹರಣೆಗೆ, ಕುಟುಂಬದ ಸದಸ್ಯರು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಸಾಲ ಹೆಚ್ಚುತ್ತಿದ್ದರೆ ಏನೋ ಸಮಸ್ಯೆ ಇದೆ ಎಂದು ಅರ್ಥ. ಕುಟುಂಬ ಸದಸ್ಯರ ನಡುವೆ ಪರಸ್ಪರ ಭಿನ್ನಾಭಿಪ್ರಾಯಗಳಿರಬಹುದು. ಅಥವಾ ಮನೆಯಲ್ಲಿ ಆಗಾಗ ಹೆಚ್ಚಿನ ಗೊಂದಲ, ಉದ್ವಿಗ್ನತೆ ಕಂಡು ಬಂದರೆ ವಾಸ್ತು ದೋಷದ ಪ್ರಭಾವ ಇರಬಹುದು ಎಂಬುದು ವಾಸ್ತು ಶಾಸ್ತ್ರಜ್ಞರ ಮಾತಾಗಿದೆ. ಸಾಕಷ್ಟು ನಿದ್ರೆ, ಸಕ್ರಿಯತೆಯ ಕೊರತೆ ಹೀಗೆ ಇಂತಹ ನಾನಾ ಲಕ್ಷಣಗಳು ಕಂಡು ಬಂದರೆ ಮನೆಯಲ್ಲಿ ವಾಸ್ತು ದೋಷವಿದೆ ಎಂದೇ ಹೇಳಲಾಗುತ್ತದೆ. ಇಂತಹ ಲಕ್ಷಣಗಳು ಕಂಡು ಬಂದರೆ ನಿಖರವಾದ ವಾಸ್ತು ತಜ್ಞರನ್ನು ಕಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ.
ಮನೆಯಲ್ಲಿನ ಸಣ್ಣಪುಟ್ಟ ವಸ್ತುಗಳಿಂದ ವಾಸ್ತು ದೋಷ ಉಂಟಾಗಬಹುದು: ಜ್ಯೋತಿಷಿ ಹಾಗೂ ವಾಸ್ತು ತಜ್ಞ ಪಂಡಿತ್ ಪ್ರಿಯಾ ಶರಣ್ ತ್ರಿಪಾಠಿ ಈ ಸಂಬಂಧ ಮಾತನಾಡಿದ್ದಾರೆ. ವಾಸ್ತು ದೋಷದ ಕೆಲ ಲಕ್ಷಣಗಳೆಂದರೆ ಮನೆಯ ನಲ್ಲಿಯಲ್ಲಿ ನೀರು ತೊಟ್ಟಿಕ್ಕುವುದು, ಮನೆಯ ಮೂಲೆಯಲ್ಲಿ ಕಸ ಬಿದ್ದಿರುವುದು. ಈಶಾನ್ಯದಲ್ಲಿ ಮನೆಯ ಮೆಟ್ಟಿಲುಗಳು ಇರುವುದೇ ಆಗಿರುತ್ತದೆ. ಇಂತಹ ಲಕ್ಷಣಗಳು ಕಂಡು ಬಂದರೆ ಇದು ಬಹಳಷ್ಟು ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ ಅಂತಾರೆ ಅವರು.
ವಾಸ್ತು ದೋಷಗಳನ್ನು ಹೋಗಲಾಡಿಸುವ ವಿಧಾನಗಳು: ಮನೆಯಲ್ಲಿರುವ ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿದ್ದರೆ ನಲ್ಲಿಯನ್ನು ತಕ್ಷಣ ಸರಿಪಡಿಸಿ. ಮನೆಯಲ್ಲಿ ಕಸವನ್ನು ಬಿಡಬೇಡಿ. ಮೂಲೆಗಳಲ್ಲಿ ಕಸವು ಇರದಂತೆ ತುಂಬಾ ಸ್ವಚ್ಛವಾಗಿಡುವುದು ಮುಖ್ಯವಾಗಿದೆ. ನೈಋತ್ಯದಲ್ಲಿರುವ ಗುಂಡಿ ಅಥವಾ ಒಳಚರಂಡಿ ತೊಟ್ಟಿಯನ್ನು ತೆಗೆದು ವಾಯವ್ಯದಲ್ಲಿ ನಿರ್ಮಿಸಬೇಕು. ಈಶಾನ್ಯದಲ್ಲಿ ಮೆಟ್ಟಿಲುಗಳನ್ನು ಕಟ್ಟಬಾರದು. ಮನೆಯಲ್ಲಿ ಸಾಕಷ್ಟು ಬೆಳಕು ಇರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು.
ವಿಶೇಷವಾಗಿ ಈಶಾನ್ಯದಲ್ಲಿ ಬೆಳಕಿನ ಪರದೆಗಳಿದ್ದರೆ ಉತ್ತಮ. ಮನೆಯ ಮಾಲೀಕರ ಮಲಗುವ ಕೋಣೆಯನ್ನು ನೈಋತ್ಯ ಭಾಗದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಆಗ್ನೇಯದಲ್ಲಿ ಮಲಗುವ ಕೋಣೆ ಇರಬಾರದು. ಮನೆಯ ಗೇಟ್ ಆಗ್ನೇಯ ದಿಕ್ಕಿನಲ್ಲಿದ್ದರೆ, ಹೆಚ್ಚಿನವರಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಮನೆಯ ಕುಲದೇವತೆ ಅಥವಾ ದೇವತೆಯನ್ನು ಪೂಜಿಸದೇ ಇದ್ದರೆ ವಾಸ್ತು ದೋಷ ಉಂಟಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ಒಮ್ಮೆ ಉತ್ತಮ ವಾಸ್ತು ಶಾಸ್ತ್ರದಿಂದ ವಾಸ್ತು ದೋಷದ ಪರಿಹಾರ ಮತ್ತು ಕಾರಣವನ್ನು ತಿಳಿದುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಓದುಗರ ಗಮನಕ್ಕೆ: ಮೇಲೆ ನೀಡಲಾದ ವಿವರಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಅಂಶಗಳ ಆಧಾರದ ಮೇಲೆ ಕೆಲವು ವಾಸ್ತು ತಜ್ಞರು ಮಾತ್ರ ಒದಗಿಸಿದ್ದಾರೆ. ಇದಲ್ಲದೇ , ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಓದುಗರು ಗಮನಿಸಬೇಕು. ನೀವು ಎಷ್ಟು ನಂಬುತ್ತೀರಿ ಎಂಬುದು ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು.
ಆಷಾಢ ಶುಕ್ರವಾರ: ಚಾಮುಂಡೇಶ್ವರಿಗೆ ನಿಂಬೆ ಹಣ್ಣಿನ ಆರತಿ ಬೆಳಗಿದ ಮಹಿಳೆಯರು - Ashadha Friday